ಸವಣೂರು ತಾಲೂಕಿನ ಸುಕ್ಷೇತ್ರ ಮಂತ್ರವಾಡಿಯ ಜಗದ್ಗುರು ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ಲಿಂ. ಕೆಂಜಡೇಶ್ವರ ಶಿವಾಚಾರ್ಯ ಸ್ವಾಮಿಗಳ 48ನೇ ಪುಣ್ಯಾರಾಧನೆ ಅಂಗವಾಗಿ ಭಾನುವಾರ ಸಂಜೆ ಶ್ರೀಮಠದ ಪೀಠಾಧ್ಯಕ್ಷರಾದ ಸಿದ್ದರಾಮೇಶ್ವರ ಶಿವಾಚಾರ್ಯ ಶ್ರೀಗಳ ಉತ್ಸವ ಹಾಗೂ ರಥೋತ್ಸವ ಸಕಲ ವಾದ್ಯ ವೈಭವದೊಂದಿಗೆ ಅದ್ಧೂರಿಯಾಗಿ ಜರುಗಿತು.

ಕನ್ನಡಪ್ರಭ ವಾರ್ತೆ, ಸವಣೂರುತಾಲೂಕಿನ ಸುಕ್ಷೇತ್ರ ಮಂತ್ರವಾಡಿಯ ಜಗದ್ಗುರು ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ಲಿಂ. ಕೆಂಜಡೇಶ್ವರ ಶಿವಾಚಾರ್ಯ ಸ್ವಾಮಿಗಳ 48ನೇ ಪುಣ್ಯಾರಾಧನೆ ಅಂಗವಾಗಿ ಭಾನುವಾರ ಸಂಜೆ ಶ್ರೀಮಠದ ಪೀಠಾಧ್ಯಕ್ಷರಾದ ಸಿದ್ದರಾಮೇಶ್ವರ ಶಿವಾಚಾರ್ಯ ಶ್ರೀಗಳ ಉತ್ಸವ ಹಾಗೂ ರಥೋತ್ಸವ ಸಕಲ ವಾದ್ಯ ವೈಭವದೊಂದಿಗೆ ಅದ್ಧೂರಿಯಾಗಿ ಜರುಗಿತು.ಪ್ರಾತ:ಕಾಲ 6 ಗಂಟೆಗೆ ರೇವಣಸಿದ್ದೇಶ್ವರರ ಗದ್ದುಗೆ ಹಾಗೂ ಲಿಂ. ಕೆಂಜಡೇಶ್ವರ ಶಿವಾಚಾರ್ಯರ ಕರ್ತೃ ಗದ್ದುಗೆಯ ರುದ್ರಾಭಿಷೇಕ ಹಾಗೂ ಕೆಂಜಡೇಶ್ವರರ ಸ್ಮರಣೋತ್ಸವ ಜರುಗಿತು.ನಂತರ, ಮಧ್ಯಾಹ್ನ ಶ್ರೀ ರೇವಣಸಿದ್ದೇಶ್ವರರ ಬೆಳ್ಳಿ ಮೂರ್ತಿಯ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ಬೆಳಗಾಲಪೇಟೆಯ ಶ್ರೀ ವೀರಭದ್ರೇಶ್ವರ ವೀರಗಾಸೆ ಸಂಘ ಚಿಂಚಲಿ ಸಹೋದರರು ಹಾಗೂ ಕಲಾ ತಂಡದೊಂದಿಗೆ ಗುಗ್ಗಳ ಸಮೇತ ಬೆಟ್ಟಕ್ಕೆ ತಲುಪಿತು.ಬಳಿಕ ಬೆಟ್ಟದಿಂದ ಗ್ರಾಮ ಪ್ರವೇಶದಲ್ಲಿರುವ ಪಾದಗಟ್ಟಿಯವರಿಗೆ ಭಕ್ತರು ರಥವನ್ನು ಎಳೇದರು. ಈ ಸಂದರ್ಭದಲ್ಲಿ ಭಕ್ತರು ಹರಹರ ಮಹಾದೇವ ಎಂದು ಜಯಘೋಷಣೆ ಕೂಗುತ್ತಾ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಹರಕೆ

ತೀರಿಸಿದರು.-------ಜ. 19ರಂದು ಜಾತ್ರಾಮಹೋತ್ಸವದ ಅಂಗವಾಗಿ ಪಾರ್ವತಿದೇವಿ ರಥೋತ್ಸವ ನೆರವೇರಲಿದ್ದು, ಈ ರಥವನ್ನು ವಿಶೇಷವಾಗಿ ಮಹಿಳೆಯರು ಎಳೆಯಲಿದ್ದಾರೆ. ಸಂಜೆ 7 ಗಂಟೆಗೆ ಶಿವಾನುಭವ ಗೋಷ್ಠಿ ನಡೆಯಲಿದ್ದು ಅಧ್ಯಕ್ಷತೆಯನ್ನು ಶ್ರೀಮಠದ ಪೀಠಾಧ್ಯಕ್ಷರಾದ ಸಿದ್ಧರಾಮೇಶ್ವರ ಶ್ರೀಗಳು ವಹಿಸುವರು. ಶಿದ್ರಾಮಯ್ಯಶಾಸ್ತ್ರಿ ಹಿರೇಮಠ ಪ್ರವಚನವನ್ನು ನೀಡುವರು.18ಎಸ್‌ವಿಆರ್‌01ಫೋಟೋ ಶೀರ್ಷಿಕೆ: 18ಎಸ್‌ವಿಆರ್‌01ಸವಣೂರ ತಾಲೂಕಿನ ಸುಕ್ಷೇತ್ರ ಮಂತ್ರವಾಡಿಯ ಶ್ರೀ ಜಗದ್ಗುರು ರೇವಣಸಿದ್ದೇಶ್ವರರ ಜಾತ್ರಾ ಮಹೋತ್ಸವ ಹಾಗೂ ಲಿಂ. ಕೆಂಜಡೇಶ್ವರ ಶಿವಾಚಾರ್ಯ ಸ್ವಾಮಿಗಳ 48ನೇ ಪುಣ್ಯಾರಾಧನೆ ಅಂಗವಾಗಿ ಭಾನುವಾರ ಸಂಜೆ ಶ್ರೀಮಠದ ಪೀಠಾಧ್ಯಕ್ಷರಾದ ಸಿದ್ದರಾಮೇಶ್ವರ ಶಿವಾಚಾರ್ಯ ಶ್ರೀಗಳ ಉತ್ಸವ ಹಾಗೂ ರಥೋತ್ಸವ ಸಕಲ ವಾದ್ಯ ವೈಭವದೊಂದಿಗೆ ಅದ್ಧೂರಿಯಾಗಿ ಜರುಗಿತು.