ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಯಾವುದೇ ಗೊಂದಲಗಳಿಲ್ಲದೆ ಸೂಸೂತ್ರ ವಾಗಿ ಮೊದಲ ದಿನ ಬುಧವಾರ ನಡೆದ ಪ್ರಥಮ ಭಾಷಾ ವಿಷಯದ ಪರೀಕ್ಷೆಗೆ 241 ವಿದ್ಯಾರ್ಥಿಗಳು ಗೈರಾಗಿದ್ದು ಒಟ್ಟು 12,298 ವಿದ್ಯಾರ್ಥಿಗಳು ಹಾಜರಾಗಿದ್ದರು.
12,229 ವಿದ್ಯಾರ್ಥಿಗಳು ಪ್ರಥಮ ಭಾಷೆ ಪರೀಕ್ಷೆಗೆ ಹಾಜರಾದರು
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಯಾವುದೇ ಗೊಂದಲಗಳಿಲ್ಲದೆ ಸೂಸೂತ್ರ ವಾಗಿ ಮೊದಲ ದಿನ ಬುಧವಾರ ನಡೆದ ಪ್ರಥಮ ಭಾಷಾ ವಿಷಯದ ಪರೀಕ್ಷೆಗೆ 241 ವಿದ್ಯಾರ್ಥಿಗಳು ಗೈರಾಗಿದ್ದು ಒಟ್ಟು 12,298 ವಿದ್ಯಾರ್ಥಿಗಳು ಹಾಜರಾಗಿದ್ದರು.ಜಿಲ್ಲಾದ್ಯಂತ ಸ್ಥಾಪಿಸಲಾದ 52 ಪರೀಕ್ಷಾ ಕೇಂದ್ರದಲ್ಲಿ 13,557 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿದ್ದರು. ಈ ಪೈಕಿ 12,229 ವಿದ್ಯಾರ್ಥಿಗಳು ಪ್ರಥಮ ಭಾಷೆ ಪರೀಕ್ಷೆಗೆ ಹಾಜರಾದರು. ಪ್ರಥಮ ಭಾಷೆಗೆ ನೋಂದಣಿ ಮಾಡಿವರ ಪೈಕಿ 241 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಕುಡಿಯುವ ನೀರು, ಗಾಳಿ, ಬೆಳಕಿನ ವ್ಯವಸ್ಥೆ: ಪರೀಕ್ಷೆ ಆರಂಭಕ್ಕೂ ಮುನ್ನಾ ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ ದೃಶ್ಯ ಕಂಡು ಬಂದವು. ಮಕ್ಕಳನ್ನು ಪೋಷಕರು ಪರೀಕ್ಷಾ ಕೇಂದ್ರದ ವರೆಗೆ ಕರೆ ತಂದು ಉತ್ಸಾಹ ತುಂಬಿ ಕಳುಹಿಸಿದರು. ವಿದ್ಯಾರ್ಥಿಗಳಿಗಿಂತ ಪೋಷಕರಲ್ಲಿ ಪರೀಕ್ಷೆ ಆತಂಕ ಹೆಚ್ಚಾಗಿರುವುದು ಕಂಡು ಬಂದಿತ್ತು.
ಇನ್ನೂ ಪ್ರತಿ ಪರೀಕ್ಷಾ ಕೇಂದ್ರಕ್ಕೆ ತಲಾ ಇಬ್ಬರು ಪೊಲೀಸ್ ಸಿಬ್ಬಂದಿ ನಿಯೋಜಿಸಿ. ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿ, ಸಮೀಪದ ಜೆರಾಕ್ಸ್ ಅಂಗಡಿ ಬಂದ್ ಮಾಡಿಸಲಾಗಿತ್ತು.ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪರೀಕ್ಷಾ ಹಾಲ್ ಟಿಕೆಟ್ ತೋರಿಸಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು.
15 ನಿಮಿಷ ಪ್ರಶ್ನೆ ಪತ್ರಿಕೆ ಓದಿಗೆ ಸೀಮಿತ:ಈ ಬಾರಿ ವಿಶೇಷವಾಗಿ 15 ನಿಮಿಷ ಪ್ರಶ್ನೆ ಪತ್ರಿಕೆ ಓದಲು ಮೀಸಲಾಗಿಸಿತ್ತು. ಹೀಗಾಗಿ, ಪರೀಕ್ಷೆ ಸಮಯ ಆರಂಭ ಗೊಳ್ಳುತ್ತಿದಂತೆ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ವಿತರಿಸಲಾಯಿತು. 15 ನಿಮಿಷದ ಬಳಿಕ ಉತ್ತರ ಪತ್ರಿಕೆ ನೀಡಲಾಯಿತು. ಈ ವೇಳೆ ಕೊಠಡಿ ಮೇಲ್ವಿಚಾರಣೆ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಹೀಗಾಗಿ ಹೆಚ್ಚಿನ ಗೊಂದಲ ಉಂಟಾಗಲಿಲ್ಲ.
607 ಪರೀಕಾ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ ನಿಗಾಜಿಲ್ಲೆಯಲ್ಲಿ 52 ಪರೀಕ್ಷಾ ಕೇಂದ್ರದ 607 ಕೊಠಡಿಗಳಿಗೆ ಸಿಸಿಕ್ಯಾಮೆರಾ ಹಾಗೂ ಪರೀಕ್ಷಾ ಕೇಂದ್ರದ ಕಾರಿಡಾರ್‌ನಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಎಲ್ಲ ವೆಬ್ ಕಾಸ್ಟಿಂಗ್ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯಿತು.
-- ಕೋಟ್ --ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೊದಲ ದಿನ ಬುಧವಾರ ಸುಸೂತ್ರವಾಗಿ ನಡೆದಿದೆ. ಯಾವುದೇ ತೊಂದರೆ, ಅಹಿತಕರ ವಾತಾವರಣ ಸೃಷ್ಟಿಯಾಗಿಲ್ಲ.-ನಾಗರಾಜ್, ಜಿಲ್ಲಾ ಶಿಕ್ಷಣಾಧಿಕಾರಿ, ಚಿಕ್ಕಮಗಳೂರು---ಬಾಕ್ಸ್---ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರ ಹಾಗೂ ವಿದ್ಯಾರ್ಥಿಗಳ ವಿವರ
ತಾಲೂಕು ಪರೀಕ್ಷಾ ಕೇಂದ್ರ ಸಂಖ್ಯೆ ಹಾಜರಿಗೈರುಬೀರೂರು 6 110025ಚಿಕ್ಕಮಗಳೂರು 11 342847ಕಡೂರು 10 229970ಕೊಪ್ಪ 4 99511ಮೂಡಿಗೆರೆ 5 130610ನರಸಿಂಹರಾಜಪುರ 4 81719ಶೃಂಗೇರಿ 2 57910ತರೀಕೆರೆ 10 177749ಒಟ್ಟು 52 12,298241
--ಫೋಟೋ
ಚಿಕ್ಕಮಗಳೂರು ನಗರದ ಪರೀಕ್ಷಾ ಕೇಂದ್ರದಲ್ಲಿ ಬುಧವಾರದಿಂದ ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ಪರಿಶೀಲಿಸುತ್ತಿರುವುದು.