ವನ್ಯಜೀವಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಬದ್ಧ: ಕಾವ್ಯ ಚತುರ್ವೇದಿ

| Published : Oct 09 2024, 01:33 AM IST

ವನ್ಯಜೀವಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಬದ್ಧ: ಕಾವ್ಯ ಚತುರ್ವೇದಿ
Share this Article
  • FB
  • TW
  • Linkdin
  • Email

ಸಾರಾಂಶ

ವನ್ಯಜೀವಿಗಳಿಂದಲೂ ಅರಣ್ಯ ಸಂಪತ್ತು ವೃದ್ಧಿಯಾಗುವ ಸಾಧ್ಯತೆಗಳಿದೆ. ಇದರಿಂದ ನಾವು ಪರಿಸರ ಹಾಗೂ ವನ್ಯ ಪ್ರಾಣಿಗಳ ಉಳಿವಿಗೆ ಸಹಕರಿಸಬೇಕು.

ವನ್ಯಜೀವ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿದ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ

ಕನ್ನಡಪ್ರಭ ವಾರ್ತೆ ಕನಕಗಿರಿ

ವನ್ಯಜೀವಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಕಟಿಬದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ ಹೇಳಿದರು.

ತಾಲೂಕಿನ ಬಂಕಾಪುರ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ವನ್ಯಜೀವ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾಗತೀಕರಣದಲ್ಲಿ ಅರಣ್ಯನಾಶ, ವನ್ಯಜೀವಿಗಳ ಸಂಘರ್ಷ, ಅರಣ್ಯ ಭೂಮಿ ಒತ್ತುವರಿ ಸೇರಿದಂತೆ ನಾನಾ ಕಾರಣಗಳಿಂದ ಒತ್ತಡದಲ್ಲಿರುವ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವನ್ಯಜೀವಿಗಳ, ಅರಣ್ಯ ಸಂಪತ್ತು ಉಳಿವಿಗೆ ಅವಿರತವಾಗಿ ಶ್ರಮಿಸುತ್ತಿದ್ದು, ಜನರು ವನ್ಯ ಪ್ರಾಣಿಗಳಾದ ಕರಡಿ, ಚಿರತೆ, ಹೈನಾ, ತೋಳ, ನರಿ, ನೀರುನಾಯಿಗಳ ಸಂತತಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕಾಗಿದೆ. ವನ್ಯಜೀವಿಗಳಿಂದಲೂ ಅರಣ್ಯ ಸಂಪತ್ತು ವೃದ್ಧಿಯಾಗುವ ಸಾಧ್ಯತೆಗಳಿದೆ. ಇದರಿಂದ ನಾವು ಪರಿಸರ ಹಾಗೂ ವನ್ಯ ಪ್ರಾಣಿಗಳ ಉಳಿವಿಗೆ ಸಹಕರಿಸಬೇಕು ಎಂದರು.

ನಂತರ ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎಚ್. ಮುಲ್ಲಾ ಮಾತನಾಡಿ, ಪ್ರತಿಯೊಂದು ಪ್ರದೇಶವು ವಿಭಿನ್ನವಾಗಿದ್ದರಿಂದ ವನ್ಯಜೀವಿಗಳ ಆವಾಸಕ್ಕೆ ಹೇಳಿ ಮಾಡಿಸಿದ ಸ್ಥಳ ಕನಕಗಿರಿ ತಾಲೂಕಿಲ್ಲಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ತಾಲೂಕು ವ್ಯಾಪ್ತಿಯ ಬಂಕಾಪುರದ ಕುರುಚಲು ಪ್ರದೇಶವನ್ನು ಇಲಾಖೆ ತೋಳಧಾಮವನ್ನಾಗಿ ಘೋಷಿಸಿದೆ ಎಂದರು.

ನಂತರ ವಲಯ ಅರಣ್ಯಾಧಿಕಾರಿ ಸುಭಾಸಚಂದ್ರ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಲಯ ಅರಣ್ಯಾಧಿಕಾರಿಗಳಾದ ಶಿವರಾಜ ಮೇಟಿ, ಸ್ವಾತಿ ಎಲ್., ಉಪ ವಲಯ ಅರಣ್ಯಾಧಿಕಾರಿಗಳಾದ ಶ್ರೀನಿವಾಸ, ಹನುಮಂತಪ್ಪ, ಗಸ್ತು ಪಾಲಕರಾದ ಶಿವಕುಮಾರ ವಾಲಿ, ದಾವಲಸಾಬ, ಚಂದ್ರು ಭಾಗವತ್, ಅರಣ್ಯ ವೀಕ್ಷಕ ಈರಪ್ಪ ಹಾದಿಮನಿ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಮಂಜುನಾಥ, ಕೊಪ್ಪಳ ವಿಭಾಗದ ಸಿಬ್ಬಂದಿ ಹಾಗೂ ಶಾಲಾ ಶಿಕ್ಷಕರು, ಮಕ್ಕಳು ಇದ್ದರು.