ಕನಕ ಸೊಸೈಟಿ ಸಂಘದ ನೂತನ ಕಟ್ಟಡಕ್ಕೆ ಶಂಕು

| Published : Apr 22 2025, 01:49 AM IST

ಸಾರಾಂಶ

ನಗರದ ರಿಂಗ್ ರಸ್ತೆಯ ಪುಷ್ಪಗಿರಿ ಬಡಾವಣೆಯ ೭ನೇ ಅಡ್ಡರಸ್ತೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಕನಕ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಸ್ಥಳೀಯ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು.

ಹಾಸನ: ನಗರದ ರಿಂಗ್ ರಸ್ತೆಯ ಪುಷ್ಪಗಿರಿ ಬಡಾವಣೆಯ ೭ನೇ ಅಡ್ಡರಸ್ತೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಕನಕ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಸ್ಥಳೀಯ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು, ಅಷ್ಟೋ ಇಷ್ಟೋ ಹಣ ಉಳಿತಾಯ ಮತ್ತು ಸಮುದಾಯದ ಸದಸ್ಯರ ಆರ್ಥಿಕ ಬಲವರ್ಧನೆ ಉದ್ದೇಶದಿಂದ ಕನಕ ಪತ್ತಿನ ಸಹಕಾರ ಸಂಘ ಆರಂಭಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಉದ್ದೇಶಿತ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಸುಮಾರು ೩೦ ಲಕ್ಷ ರು.ಗಳನ್ನು ತಾವೇ ಶಾಸಕರ ನಿಧಿ ಅಥವಾ ಇತರೆ ಮೂಲಗಳಿಂದ ಭರಿಸಿ ಹೊಸ ಕಟ್ಟಡ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು. ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ, ಉಪಾಧ್ಯಕ್ಷ ಲಿಂಗರಾಜು, ನಿರ್ದೇಶಕರಾದ ಗೀತಾ- ತಾರೇಶ್ ದಂಪತಿ ಶಂಕುಸ್ಥಾಪನೆ ಪೂಜಾ ಕಾರ್ಯಕ್ರಮ ನೆರವೇರಿಸಿದರು. ದೇವರಾಜು ಅರಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಾಂತರಾಜು, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಬಿ.ಕೇಶವಮೂರ್ತಿ, ಮಂಗಳಾಪುರ ನಾಗರಾಜು, ದಿವಾಕರ ಗೌಡ, ಚೋಳೇನಳ್ಳಿ ಸುರೇಶ್, ಕೋಮಲೇಶ್, ವಕೀಲರಾದ ಪುಟ್ಟರಾಜು, ನವಿಲೆ ಅಣ್ಣಪ್ಪ ಹಾಗೂ ಬನವಾಸೆ ಸತೀಶ್, ಮಕಾನ್ ಸತೀಶ್, ವಿನೋದ್ ಹಾಗೂ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು ಮತ್ತು ನೌಕರ ವರ್ಗ, ಸಮಾಜದ ಬಂಧುಗಳು, ಜೆ.ಸಿ.ಬಿ ಚಂದ್ರು ಹಾಗೂ ಇತರೆ ಸಮಾಜದ ಬಂಧುಗಳು ಭಾಗವಹಿಸಿದ್ದರು.