8ರಂದು ಥೀಮ್‌ ಪಾರ್ಕ್‌ಗೆ ಸಚಿವ ಕೃಷ್ಣಬೈರೇಗೌಡರಿಂದ ಶಂಕುಸ್ಥಾಪನೆ

| Published : Oct 06 2024, 01:17 AM IST

8ರಂದು ಥೀಮ್‌ ಪಾರ್ಕ್‌ಗೆ ಸಚಿವ ಕೃಷ್ಣಬೈರೇಗೌಡರಿಂದ ಶಂಕುಸ್ಥಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಐತಿಹಾಸಿಕ ಚನ್ನಮ್ಮಾಜಿಯ ಕೋಟೆಯ ಆವರಣದಲ್ಲಿ ತಲೆ ಎತ್ತಲಿರುವ ಥೀಮ್ ಪಾರ್ಕಗೆ ಭೂಮಿಪೂಜೆ ನೆರವೇರಿಸಲು ಅ.೮ರಂದು ಕಂದಾಯ ಇಲಾಖೆ ಸಚಿವ ಕೃಷ್ಣೇಬೈರೆಗೌಡ ಆಗಮಿಸಲಿದ್ದಾರೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಐತಿಹಾಸಿಕ ಚನ್ನಮ್ಮಾಜಿಯ ಕೋಟೆಯ ಆವರಣದಲ್ಲಿ ತಲೆ ಎತ್ತಲಿರುವ ಥೀಮ್ ಪಾರ್ಕಗೆ ಭೂಮಿಪೂಜೆ ನೆರವೇರಿಸಲು ಅ.೮ರಂದು ಕಂದಾಯ ಇಲಾಖೆ ಸಚಿವ ಕೃಷ್ಣೇಬೈರೆಗೌಡ ಆಗಮಿಸಲಿದ್ದಾರೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ವಿಜಯೋತ್ಸವದ ದ್ವಿಶತಕ ವರ್ಷಾಚರಣೆ ಕುರಿತು ಕೋಟೆಯ ಆವರಣದಲ್ಲಿ ನಡೆಯುತ್ತಿರುವ ಸ್ವಚ್ಛತಾ ಕಾರ್ಯ ವೀಕ್ಷಿಸಿ ಶನಿವಾರ ಮಾತನಾಡಿದ ಅವರು, ಉತ್ಸವದ ತಯಾರಿ ಭರದಿಂದ ಸಾಗಿದೆ. ಉತ್ಸವ ಯಶಸ್ಸಿಗೆ ಯುವ ಅಧಿಕಾರಿಗಳ ತಂಡ ಶ್ರಮ ವಹಿಸುತ್ತಿದೆ, ಉತ್ಸವದ ಎಲ್ಲ ಕಾರ್ಯಕ್ರಮಗಳು ವೈಶಿಷ್ಟ್ಯತೆಯಿಂದ ಕೂಡಿರಲಿವೆ ಎಂದು ಹೇಳಿದರು.

ಉತ್ಸವ ಯಶಸ್ವಿಗೆ ಸಾರ್ವಜನಿಕರು ಸಹಕಾರ ಪ್ರಮುಖವಾಗಿದೆ. ಪರಸ್ಥಳದಿಂದ ಬರುವ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಎಲ್ಲ ವ್ಯವಸ್ಥೆಗಳನ್ನು ಕಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಹೇಳಿದ ಅವರು, ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲ್ಲ ಉಪಸಮಿತಿಗಳ ಸಭೆಗಳು ನಡೆಯುತ್ತಿವೆ. ಎಲ್ಲ ಸಭೆಗಳಲ್ಲೂ ಉತ್ಸವಕ್ಕೆ ಪೂರಕ ಬೆಂಬಲ ದೊರೆಯುತ್ತಿದೆ, ೨೦೦ನೇ ಉತ್ಸವದ ಆಚರಣೆ ನನಗೆ ಬಂದಿದ್ದು ನನ್ನ ಭಾಗ್ಯ ಎಂದು ಹೇಳಿದರು.

ಎಸಿ ಪ್ರಭಾವತಿ ಫಕ್ಕಿರಪೂರ, ಕ್ಯೂರೇಟರ್ ರಾಘವೇಂದ್ರ, ಹೆಸ್ಕಾಂ ಎಇಇ ಮಹೇಶ್ವರ ಹಿರೇಮಠ, ಪಿಡಬ್ಲುಡಿ ಎಇಇ ಸಂಜೀವ ಮಿರಜಕರ, ಮುಖಂಡರಾದ ಆಶ್ಪಾಕ್‌ ಹವಾಲ್ದಾರ, ಕೃಷ್ಣಾ ಬಾಳೇಕುಂದ್ರಗಿ ಇತರರು ಇದ್ದರು.ಚನ್ನಮ್ಮನ ಕಿತ್ತೂರು,