ಜನರನ್ನು ರಂಜಿಸಿದ ಗಿರಾಕಿಯೇ ಇಲ್ಲಾ ಮಾರಾಯ ನಾಟಕ

| Published : Sep 29 2025, 03:02 AM IST

ಸಾರಾಂಶ

ನವರಾತ್ರಿ ಉತ್ಸವ ಸಮಿತಿಯಿಂದ ನವರಾತ್ರಿ ಪ್ರಯುಕ್ತ ಹಳೇ ನಗರಸಭೆ ಮೈದಾನದ ವೇದಿಕೆಯಲ್ಲಿ ನಡೆದ ಕುಂದಾಪುರದ ರೂಪಾಕಲಾ ತಂಡದ (ಬಾಲಕೃಷ್ಣ ಕುಳ್ಳಪ್ಪ ಪೈ) ಗಿರಾಕಿಯೇ ಇಲ್ಲಾ ಮಾರಾಯ ನಾಟಕ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

ಕನ್ನಡಪ್ರಭ ವಾರ್ತೆ ದಾಂಡೇಲಿ

ನವರಾತ್ರಿ ಉತ್ಸವ ಸಮಿತಿಯಿಂದ ನವರಾತ್ರಿ ಪ್ರಯುಕ್ತ ಹಳೇ ನಗರಸಭೆ ಮೈದಾನದ ವೇದಿಕೆಯಲ್ಲಿ ನಡೆದ ಕುಂದಾಪುರದ ರೂಪಾಕಲಾ ತಂಡದ (ಬಾಲಕೃಷ್ಣ ಕುಳ್ಳಪ್ಪ ಪೈ) ಗಿರಾಕಿಯೇ ಇಲ್ಲಾ ಮಾರಾಯ ನಾಟಕ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

ನಾಟಕ ಪಾತ್ರಧಾರಿಗಳು ಆಂಗಿಕ ಅಭಿನಯ, ವಿಶೇಷ ವಿಶಿಷ್ಟ ಕುತೂಹಲದ ಸನ್ನಿವೇಶಗಳು, ಅನೇಕ ತಿರುವುಗಳು ನಾಟಕದ ರಂಗು ಹೆಚ್ಚಿಸಿ ನೋಡಿ ನಕ್ಕು ನಕ್ಕು ಸಾಕಾಗುವಂತೆ ಮಾಡಿದವು. ನಾಟಕ ತಂಡದವರು ಈ ನಾಟಕ ನೋಡಿ ನಗದೇ ಇರುವವರಿಗೆ ನಗದು ಬಹುಮಾನ ಘೋಷಿಸಿದ್ದರು. ಆದರೆ, ಯಾವ ಪ್ರೇಕ್ಷಕರು ನಗದೇ ಇರಲು ಆಗಲಿಲ್ಲ.

ಸಮಾಜದ ಅಂಕುಡೊಂಕು ತಿದ್ದುವುದು ನಾಟಕದ ಕೆಲಸ. ಅಂತಹ ನಾಟಕಗಳು ಸಮಾಜದ ಘಟನೆಗಳು ಸರಮಾಲೆ ಹಾಸ್ಯದ ಮೂಲಕ ಬದುಕಿನ ಗಂಭೀರತೆಯನ್ನು ಜನ ಮನಕ್ಕೆ ತಲುಪಿಸುವ ಕೆಲಸವನ್ನು ಈ ನಾಟಕಗಳು ಮಾಡುತ್ತಿವೆ ಎಂದು ಸಮಿತಿ ಗೌರವಾಧ್ಯಕ್ಷ ಸುನೀಲ ಹೆಗಡೆ ಹೇಳಿದರು.

ಮೂರು ಮುತ್ತು ಖ್ಯಾತಿಯ ಕಲಾವಿದರಾದ ಸತೀಶ್ ಪೈ, ಸಂತೋಷ್ ಪೈ, ಕಲಾಪೂರ್ಣ ಪೈ, ನವೀನ್ ನಂದಕುಮಾರ, ನಾಗೇಶ್ ಕಟಪಾಡಿ, ಗೌರವ್ ಪ್ರಭು, ರಾಜೇಶ, ಹಾಲಾಡಿ ನಾಗೇಶ, ಪ್ರಶಾಂತ್ ಹೊನ್ನಾವರ, ರಾಜಗೋಪಾಲ್ ಶೇಟ್,ನರೇಶ್ ಭಟ್, ಅನುಷಾ ನಾಟಕದಲ್ಲಿ ಜನ ಮೆಚ್ಚುವ ಅಭಿನಯದ ನೀಡಿದರು.

ಈ ಸಂದರ್ಭ ಸಮಿತಿ ಅಧ್ಯಕ್ಷ ಟಿ.ಎಸ್. ಬಾಲಮಣಿ, ಪ್ರಧಾನ ಕಾರ್ಯದರ್ಶಿ ನರೇಂದ್ರ ಚಹಾಣ್, ಖಜಾಂಚಿ ಅಶುತೋಷ್ ಕುಮಾರ್ ರಾಯ, ಸಾಂಸ್ಕೃತಿಕ ಕಾರ್ಯದರ್ಶಿ ಎಸ್. ಪ್ರಕಾಶ ಶೆಟ್ಟಿ ಹಾಗೂ ಉತ್ಸವ ಸಮಿತಿ ಸದಸ್ಯರು, ಪದಾಧಿಕಾರಿಗಳು ಇದ್ದರು.