ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ ಇಂದು ಬಡ ಜನರ ಆದಾಯ ಅತೀ ಕಡಿಮೆ ಇದೆ. ಅಂತಹ ಜನರು ಹಸಿವಿನಿಂದ ಬಳಲಬಾರದು ಎಂದು ನಮ್ಮ ಸರಕಾರ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಿದೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ಇಂದು ಬಡ ಜನರ ಆದಾಯ ಅತೀ ಕಡಿಮೆ ಇದೆ. ಅಂತಹ ಜನರು ಹಸಿವಿನಿಂದ ಬಳಲಬಾರದು ಎಂದು ನಮ್ಮ ಸರಕಾರ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಿದೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಅವರು ಮಂಗಳವಾರ ಇಳಕಲ್ಲ ನಗರದ ಪೊಲೀಸ್ ಠಾಣೆಯ ಹತ್ತಿರ ನೂತನವಾಗಿ ನಿರ್ಮಾಣವಾಗಲಿರುವ ಇಂದಿರಾ ಕ್ಯಾಂಟೀನ್ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಹಿಂದಿನ ಸರ್ಕಾರ ಬಡವರ ವಿರೋಧಿಯಾಗಿತ್ತು. ಕಾರಣ ಇಂದಿರಾ ಕ್ಯಾಂಟೀನ್ ಸ್ಥಗಿತಗೊಳಿಸಿತ್ತು. ಆದರೆ ಇಂದು ರಾಜ್ಯದಲ್ಲಿ ಬಂದಿರುವ ಕಾಂಗ್ರೆಸ್ ಸರಕಾರ ಇಳಕಲ್ಲ ನಗರದಲ್ಲಿ ನೂತನ ಇಂದೀರಾ ಕ್ಯಾಂಟೀನ್ ನಿರ್ಮಿಸಲು ಆದೇಶ ಮಾಡಿದೆ. ಅದಕ್ಕಾಗಿ ಇಂದು ಇಳಕಲ್ಲ ನಗರದ ಬಸ್ ನಿಲ್ದಾಣದ ಮುಂದೆ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಸದಸ್ಯರಾದ ಸುರೇಶ ಜಂಗ್ಲಿ, ಅಮೃತ ಬಿಜ್ಜಲ, ಮೌಲೇಶ ಬಂಡಿವಡ್ಡರ, ಅಬು ಹಳ್ಳಿ, ರಾಧೆಶಾಮ ದರಕ, ಮಲ್ಲು ಮಡಿವಾಳರ, ಯಲ್ಲಪ್ಪ ರಾಜಾಪುರ, ಪಂಪಣ್ಣ ಮಾಗನೂರ ಇತರರು ಇದ್ದರು.