ಹೊಸಕೋಟೆ: ಅಖಿಲ ಭಾರತ ವೀರಶೈವ ಮಹಾಸಭಾ ಸಂಘಟನೆ ಹೆಮ್ಮರವಾಗಿ ಬೆಳೆದಿದ್ದು ತಾಲೂಕಿನಲ್ಲಿ ಸಮುದಾಯವನ್ನು ಒಗ್ಗೂಡಿಸುವ ದೃಷ್ಠಿಯಿಂದ ಗ್ರಾಮ ಮಟ್ಟದಲ್ಲಿ ಸಭೆ ಸಮಾರಂಭ ಆಯೋಜಿಸುವ ಗುರಿ ಹೊಂದಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಟಿಎಸ್.ರಾಜಶೇಖರ್ ತಿಳಿಸಿದರು.

ಹೊಸಕೋಟೆ: ಅಖಿಲ ಭಾರತ ವೀರಶೈವ ಮಹಾಸಭಾ ಸಂಘಟನೆ ಹೆಮ್ಮರವಾಗಿ ಬೆಳೆದಿದ್ದು ತಾಲೂಕಿನಲ್ಲಿ ಸಮುದಾಯವನ್ನು ಒಗ್ಗೂಡಿಸುವ ದೃಷ್ಠಿಯಿಂದ ಗ್ರಾಮ ಮಟ್ಟದಲ್ಲಿ ಸಭೆ ಸಮಾರಂಭ ಆಯೋಜಿಸುವ ಗುರಿ ಹೊಂದಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಟಿಎಸ್.ರಾಜಶೇಖರ್ ತಿಳಿಸಿದರು.

ತಾಲೂಕಿನ ಓರೋಹಳ್ಳಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಆಯೋಜಿಸಿದ್ದ ಯುವ ಘಟಕದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ ತಾಲೂಕಿನಲ್ಲಿ ಸದಸ್ಯ ಪಡೆದುಕೊಳ್ಳುವ ಮೂಲಕ ಸಂಘದ ಕಾರ್ಯವ್ಯಾಪ್ತಿಯನ್ನು ವಿಸ್ತಾರ ಮಾಡಬೇಕು. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡಕೂಟ ಆಯೋಜನೆ, ಮಕ್ಕಳಿಗೆ ವೇದ ಪಾರಾಯಣ ಕಲಿಸುವ ಕಾರ್ಯಕ್ರಮ ರೂಪಿಸುವುದರ ಜೊತೆಗೆ ತಾಲೂಕಿನಲ್ಲಿ ದಶಕಗಳಿಂದ ಸಮುದಾಯದ ಭವನ ನಿರ್ಮಾಣಕ್ಕೆ ಜಾಗ ಲಭ್ಯವಾಗಿಲ್ಲ. ಜರೂರಾಗಿ ಶಾಸಕರ ಬಳಿಗೆ ಸಮುದಾಯದ ನಿಯೋಗ ತೆರಳಿ ಜಾಗ ಮಂಜೂರಾತಿಗೆ ಮನವಿ ಸಲ್ಲಿಸಬೇಕಿದೆ. ಆದ್ದರಿಂದ ಸಮುದಾಯದ ಅಭಿವೃದ್ದಿಗೆ ಪರಸ್ಪರ ಸಹಕಾರ ಅಗತ್ಯತೆ ಇದ್ದು ಉತ್ತಮ ಕೆಲಸ ಮಾಡಲು ಮುಂದಾಗಿರುವ ತಾಲೂಕು ಅಧ್ಯಕ್ಷ ಗುರುಬಸಪ್ಪ ಅವರಿಗೆ ಸಹಕಾರ ನೀಡಬೇಕು ಎಂದು ಹೇಳಿದರು.

ವೀರಶೈವ ಮಹಾಸಭಾ ರಾಜ್ಯ ಕೈಗಾರಿಕಾ ವಾಣಿಜ್ಯ ವಿಭಾಗದ ನಿರ್ದೇಶಕ ಸಿ.ವಿರೂಪಾಕ್ಷಯ್ಯ ಶಾಸ್ತ್ರಿ ಮಾತನಾಡಿ, ಸಮುದಾಯದ ಸಂಘಟಿತರಾಗುವ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು. ಸಮುದಾಯದ ಅಭಿವೃದ್ಧಿಗೆ ಹಲ ಮಹನೀಯರು ಅವಿರತ ಶ್ರಮಿಸಿದ್ದರ ಫಲವಾಗಿ ಸಮುದಾಯ ಬಲವಾಗಿ ನಿಂತಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಸಮುದಾಯ ಮುಂಚೂಣಿಯಲ್ಲಿರಬೇಕು. ಆದ್ದರಿಂದ ಯುವ ಸಮುದಾಯ ಸಂಘಟನೆ ಕಡೆ ಗಮನಹರಿಸಬೇಕು. ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ಹಲವಾರು ಕಾರ್ಯಕ್ರಮ ರೂಪಿಸಲಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಗುರುಬಸಪ್ಪ, ಉಪಾಧ್ಯಕ್ಷರಾದ ಮಧು ಮಲ್ಲಿಕಾರ್ಜುನಪ್ಪ, ವೀಣಾ, ಪ್ರಧಾನ ಕಾರ್ಯದರ್ಶಿ ಕುಮಾರ್, ಕೋಶಾಧ್ಯಕ್ಷ ದಯಾನಂದ್, ಯುವ ಘಟಕದ ಜಿಲ್ಲಾಧ್ಯಕ್ಷ ಲೋಕೇಶ್, ತಾಲೂಕು ಅಧ್ಯಕ್ಷ ಜಗದೀಶ್ ಬಿ, ಉಪಾಧ್ಯಕ್ಷ ಮಧುಸೂನ್ ದೇವ್, ಮಧುಕುಮಾರ್.ಪಿ, ಪ್ರಧಾನ ಕಾರ್ಯದರ್ಶಿ ಅಶ್ವತ್ಥ್‌, ಸಹ ಕಾರ್ಯದರ್ಶಿಗಳಾದ ಮಧುಸೂದನ್ ಜಿ.ಸಿ, ಶಶಿಕುಮಾರ್ ಇತರರು ಹಾಜರಿದ್ದರು.

ಫೋಟೋ: 4 ಹೆಚ್‌ಎಸ್‌ಕೆ 2

ಹೊಸಕೋಟೆ ತಾಲೂಕಿನ ಓರೋಹಳ್ಳಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಯುವ ಘಟಕದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರಗಳನ್ನು ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಟಿಎಸ್.ರಾಜಶೇಖರ್ ವಿತರಿಸಿದರು.