₹20.60 ಲಕ್ಷ ಲಾಭದಲ್ಲಿ ದಿ.ಗೋಕಾಕ ಕೃಷಿ ಪತ್ತಿನ ಸಹಕಾರಿ ಸಂಘ

| Published : Sep 25 2024, 12:58 AM IST

₹20.60 ಲಕ್ಷ ಲಾಭದಲ್ಲಿ ದಿ.ಗೋಕಾಕ ಕೃಷಿ ಪತ್ತಿನ ಸಹಕಾರಿ ಸಂಘ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಆರ್ಥಿಕ ಪ್ರಗತಿಯೊಂದಿಗೆ ದಿ.ಗೋಕಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಸಕ್ತ ಸಾಲಿನಲ್ಲಿ ₹20.60ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಮಾರುತಿ ಜಡೇನ್ನವರ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ರೈತರ ಆರ್ಥಿಕ ಪ್ರಗತಿಯೊಂದಿಗೆ ದಿ.ಗೋಕಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಸಕ್ತ ಸಾಲಿನಲ್ಲಿ ₹20.60ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಮಾರುತಿ ಜಡೇನ್ನವರ ಹೇಳಿದರು.

ಸೋಮವಾರ ನಗರದ ಸಂಘದ ಕಾರ್ಯಾಲಯದಲ್ಲಿ ದಿ.ಗೋಕಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 96ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತ ಬಾಂಧವರು ರಾಸಾಯನಿಕ ಕೃಷಿಗೆ ಮಹತ್ವ ನೀಡದೆ ಸಾವಯುವ ಕೃಷಿಗೆ ಆದ್ಯತೆ ನೀಡಿ ಭೂಮಿಯ ಫಲವತ್ತತೆ ಹೆಚ್ಚಿಸುವುದರೊಂದಿಗೆ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು. ಸಂಘ ನೀಡಿದ ಸಾಲದ ಸದುಪಯೋಗ ಪಡಿಸಿಕೊಂಡು ಸಕಾಲದಲ್ಲಿ ಮರುಪಾವತಿ ಮಾಡಿ, ಆರ್ಥಿಕವಾಗಿ ಸದೃಢರಾಗುವಂತೆ ಸಲಹೆ ನೀಡಿದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳನ್ನು ಸತ್ಕರಿಸಿ ₹2ಸಾವಿರ ಸಹಾಯಧನ ನೀಡಿದರು. ಸಂಘದ ಉಪಾಧ್ಯಕ್ಷ ಮದನ ಮಾವರಕರ, ನಿರ್ದೇಶಕರಾದ ನಾರಾಯಣ ತಟ್ಟಿಮನಿ, ಬೀರಪ್ಪ ಹಟ್ಟಿ, ಸಂತೋಷ ಕಟ್ಟಿಕಾರ, ಗಜಾನನ ಕಟ್ಟಿಮನಿ, ಬಸವರಾಜ ಭಂಡಾರಿ, ಅನುಸೂಯಾ ಧುಳಾಯಿ, ಲಲಿತಾ ಜೋಗೋಜಿ, ಪಾರ್ವತೆವ್ವ ಜಾಧವ ಹಾಗೂ ಮುಖ್ಯಕಾರ್ಯನಿರ್ವಾಹಕಿ ಭಾರತಿ ಬಾಗೇವಾಡಿ ಇದ್ದರು.