ಕನ್ನಡದ ಉಳಿವಿಗಾಗಿ ಹೋರಾಟ ಮಾಡಿದವರ ಜೈಲಿಗೆ ಹಾಕಿದ ಸರ್ಕಾರ

| Published : Jan 02 2024, 02:15 AM IST

ಕನ್ನಡದ ಉಳಿವಿಗಾಗಿ ಹೋರಾಟ ಮಾಡಿದವರ ಜೈಲಿಗೆ ಹಾಕಿದ ಸರ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ತಾಯಿ ನಾಡಿನಲ್ಲಿ ಕನ್ನಡ ನಾಮಫಲಕ ಹಾಕಬಾರದೆಂದು ಹೋರಾಟ ಮಾಡಿದ ಟಿ. ನಾರಾಯಣಗೌಡವರನ್ನು ಪೊಲೀಸರು ಬಂಧನ ಮಾಡಿದ್ದು ಖಂಡನೀಯ ಎಂದು ನರಗುಂದದಲ್ಲಿ ಕನ್ನಡಪರ ಒಕ್ಕೂಟಗಳು ಮುಖಂಡ ರಾಘವೇಂದ್ರ ಗುಜಮಾಗಡಿ ಹೇಳಿದರು.

ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ

ನರಗುಂದ: ತಾಯಿ ನಾಡಿನಲ್ಲಿ ಕನ್ನಡ ನಾಮಫಲಕ ಹಾಕಬಾರದೆಂದು ಹೋರಾಟ ಮಾಡಿದ ಟಿ. ನಾರಾಯಣಗೌಡವರನ್ನು ಪೊಲೀಸರು ಬಂಧನ ಮಾಡಿದ್ದು ಖಂಡನೀಯ ಎಂದು ಕನ್ನಡಪರ ಒಕ್ಕೂಟಗಳು ಮುಖಂಡ ರಾಘವೇಂದ್ರ ಗುಜಮಾಗಡಿ ಹೇಳಿದರು.

ಅವರು ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ತಹಸೀಲ್ದಾರ್‌ ಮುಖಾಂತರ ಕನ್ನಡ ಹೋರಾಟಗಾರರನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ನೀಡಿ ಆನಂತರ ಮಾತನಾಡಿ, ತಾಯಿ ಭುವನೇಶ್ವರಿ ನಾಡಿನಲ್ಲಿ ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಮೊಳಗಬೇಕು, ಆದರೆ ಕೆಲವು ಹೊರ ರಾಜ್ಯದ ಅನ್ನ ಭಾಷೆಯವರು ಬಂದು ಇಂದು ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ, ಹಿಂದಿ, ಕೊಂಕಣಿ ಸೇರಿದಂತೆ ಮುಂತಾದ ಭಾಷೆಯ ನಾಮಫಲಕ ಹಾಕುತ್ತಿರುವುದು ನೋವಿನ ಸಂಗತಿ. ಕನ್ನಡ ನಾಡಿನಲ್ಲಿ ಅನ್ನ ಭಾಷೆಯ ನಾಮ ಫಲಕಗಳನ್ನು ತೆಗೆಯಬೇಕೆಂದು ಕರವೇ ಮುಖಂಡ ನಾರಾಯಣಗೌಡರು ಮತ್ತು ಕಾಯಕರ್ತರು ಹೋರಾಟ ಮಾಡಿದರೆ ಪೊಲೀಸರು ಬಂಧನ ಮಾಡಿದ್ದು ತಪ್ಪು, ಸದ್ಯ ನಾವು ಭಾಷಾ ಉಳಿವಿಗಾಗಿ ಹೋರಾಟ ಮಾಡದಿದ್ದಾರೆ ನಮ್ಮ ಭಾಷೆಗೆ ಉಳಿಗಾಲವಿಲ್ಲ. ಹಾಗಾಗಿ ಸರ್ಕಾರ ಬೇಗ ನಾರಾಯಣಗೌಡರು ಮತ್ತು ಅವರ ಬೆಂಬಲಿಗರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ತಹಸೀಲ್ದಾರ್‌ ಶ್ರೀಶೈಲ ತಳವಾರ ಪ್ರತಿಭಟನೆಕಾರರ ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನೆ ಮಾಡಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಕನ್ನಡ ಪರ ಒಕ್ಕೂಟಗಳ ಮುಖಂಡರಾದ ಚೆನ್ನು ನಂದಿ, ವಿಜಯ ಕೋತಿನ, ವಾಸು ಹೆಬ್ಬಾಳ, ಮುತ್ತಣ್ಣ ತೊರಗಲ್, ಶಿವಾನಂದ ಮಾಯಣ್ಣವರ, ಮೈಲಾರಪ್ಪ ನಾಯ್ಕರ, ಬಸಪ್ಪ ಕಡ್ಲಿಕೊಪ್ಟ, ಸಿದ್ದಪ್ಟ ಗುದ್ದಲಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.