ಸರ್ಕಾರ ಸೌಲಭ್ಯ ಪಡೆದುಕೊಳ್ಳಿ

| Published : Jun 25 2024, 12:32 AM IST / Updated: Jun 25 2024, 12:33 AM IST

ಸಾರಾಂಶ

ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಪಾಲಕರು ಮಗುವಿನ ಭವಿಷ್ಯ ಕಟ್ಟಿಕೊಡಬೇಕು ಎಂದು ಮೂಡಲಗಿ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಚಂದ್ರಶೇಖರ ಬಾರ್ಕಿ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಪಾಲಕರು ಮಗುವಿನ ಭವಿಷ್ಯ ಕಟ್ಟಿಕೊಡಬೇಕು ಎಂದು ಮೂಡಲಗಿ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಚಂದ್ರಶೇಖರ ಬಾರ್ಕಿ ಹೇಳಿದರು. ತಾಲೂಕಿನ ತುಕ್ಕಾನಟ್ಟಿ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ಪಠ್ಯಪುಸ್ತಕ ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡುತ್ತಿರುವುದಲ್ಲದೇ ಗುಣಮಟ್ಟದ ಶಿಕ್ಷಣವನ್ನೂ ಕೂಡ ನೀಡಲಾಗುತ್ತಿದೆ. ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಮಾಜದಲ್ಲಿ ಎಲ್ಲ ಸಾಧಕರು ಕಲಿತದ್ದು, ಕೂಡ ಸರ್ಕಾರಿ ಶಾಲೆಯಲ್ಲಿಯೇ ಅದರಲ್ಲೂ ತುಕ್ಕಾನಟ್ಟಿ ಸರ್ಕಾರಿ ಶಾಲೆಯಲ್ಲಿ ಏಳುನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿರುವುದು ಶ್ಲಾಘನೀಯ ಎಂದರು.ಎಲ್ಲ ಯೋಜನೆಗಳಂತೆ ಬಿಸಿಯೂಟದಲ್ಲಿ ಒಳ್ಳೆಯ ಗುಣಮಟ್ಟವನ್ನು ಕಾಯ್ದುಕೊಂಡಿದ್ದು ಗಮನಾರ್ಹ. ಅದರಂತೆ ಪಾಲಕರು ಕೂಡ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡುವುದರೊಂದಿಗೆ ಆರೋಗ್ಯ ಸಾಮಾಜಿಕ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಪುಂಡಲೀಕ ಅರಬಾವಿ, ಶಾನೂರ ಹಿರೇಹೊಳಿ, ವಿಠ್ಠಲ ಮಾವರಕರ, ಜಗದೀಶ ಗದಾಡಿ ಹಾಗೂ ಪುಷ್ಪಾ ಭರಮದೆ, ಬಸವರಾಜ ನಾಯ್ಕ ಹಾಗೂ ಚನ್ನಬಸಪ್ಪ ಸೀರಿ ಶಿಕ್ಷಕರು ಸೇರಿದಂತೆ ನೂರಾರು ಪಾಲಕರು ಭಾಗವಹಿಸಿ ಚರ್ಚಿಸಿದರು. ಮುಖ್ಯೋಪಾಧ್ಯಪಕ ಎ.ವಿ.ಗಿರೆಣ್ಣವರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಮಹಾದೇವ ಗೋಮಾಡಿ ನಿರೂಪಿಸಿ, ವಂದಿಸಿದರು.