ಪುಸ್ತಕ ಬದುಕಿನ ಬಹುದೊಡ್ಡ ಸಂಗಾತಿ-ಡಾ. ವಿಜಯಲಕ್ಷ್ಮಿ

| Published : Oct 06 2024, 01:21 AM IST

ಪುಸ್ತಕ ಬದುಕಿನ ಬಹುದೊಡ್ಡ ಸಂಗಾತಿ-ಡಾ. ವಿಜಯಲಕ್ಷ್ಮಿ
Share this Article
  • FB
  • TW
  • Linkdin
  • Email

ಸಾರಾಂಶ

ಪುಸ್ತಕ ಬದುಕಿನ ಬಹುದೊಡ್ಡ ಸಂಗಾತಿಯಾಗಿದ್ದು, ಮನಸ್ಸಿಗೆ ಮುದ ನೀಡಿ ಬದುಕಿನಲ್ಲಿ ಭರವಸೆಗಳನ್ನು ಬಿತ್ತುತ್ತವೆ. ಸಾಹಿತ್ಯದ ಓದು ನಮ್ಮನೆಂದೂ ಕೈಬಿಡುವುದಿಲ್ಲ. ನಮ್ಮ ಬದುಕಿನ ಅನೇಕ ತವಕ ತಲ್ಲಣಗಳಿಗೆ ಉತ್ತರ ನೀಡುತ್ತದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ. ವಿಜಯಲಕ್ಷ್ಮಿ ತಿರ್ಲಾಪುರ ತಿಳಿಸಿದರು.

ಹಾವೇರಿ: ಪುಸ್ತಕ ಬದುಕಿನ ಬಹುದೊಡ್ಡ ಸಂಗಾತಿಯಾಗಿದ್ದು, ಮನಸ್ಸಿಗೆ ಮುದ ನೀಡಿ ಬದುಕಿನಲ್ಲಿ ಭರವಸೆಗಳನ್ನು ಬಿತ್ತುತ್ತವೆ. ಸಾಹಿತ್ಯದ ಓದು ನಮ್ಮನೆಂದೂ ಕೈಬಿಡುವುದಿಲ್ಲ. ನಮ್ಮ ಬದುಕಿನ ಅನೇಕ ತವಕ ತಲ್ಲಣಗಳಿಗೆ ಉತ್ತರ ನೀಡುತ್ತದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ. ವಿಜಯಲಕ್ಷ್ಮಿ ತಿರ್ಲಾಪುರ ತಿಳಿಸಿದರು.ನಗರದ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಭಾವಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಸಿರಿಗನ್ನಡ ಸೇವಾ ಸಂಸ್ಥೆ, ಕಲಾ ಸ್ಪಂದನ ಸಂಸ್ಥೆ, ಸಾಹಿತಿ ಕಲಾವಿದರ ಬಳಗ ಮತ್ತು ಹಂಚಿನಮನಿ ಆರ್ಟ್ ಗ್ಯಾಲರಿ ಸಹಯೋಗದಲ್ಲಿ ನಡೆದ ಪುಸ್ತಕ ಪ್ರೀತಿ-02 ಹೊಸ ಬರಹಗಾರರ ಪುಸ್ತಕಗಳ ವಿಮರ್ಶೆ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ಕಥೆ, ಕಾವ್ಯ ಮತ್ತು ಯಾವುದೇ ಪ್ರಕಾರದ ಸಾಹಿತ್ಯವು ಜೀವನದ ಮೌಲ್ಯಗಳನ್ನು ಪ್ರತಿಬಿಂಬಿಸಬೇಕು.ಅಂತಹ ಸಾಹಿತ್ಯ ಮತ್ತು ಸಾಹಿತಿ ಚಿರಕಾಲ ಉಳಿಯುತ್ತಾನೆ ಎಂದರು.ಮಧು ಕಾರಗಿ ಬರೆದ ‘ತೆರೆಯದ ಬಾಗಿಲು'' ಕೃತಿ ವಿಮರ್ಶಿಸಿದ ಡಿಡಿಪಿಯು ಡಾ. ಉಮೇಶಪ್ಪ ಎಚ್. ರವರು ಕವಿಯತ್ರಿ ತನ್ನ ಭಾವನೆಗಳನ್ನು ಅದ್ಭುತವಾಗಿ ಕವಿತೆಗಳಲ್ಲಿ ಚಿತ್ರಿಸಿದ್ದಾಳೆ. ಇಲ್ಲಿ ಕವಿತೆಗಳು ಆಪ್ತವಾಗಿ ಮಾತನಾಡುತ್ತವೆ. ನ್ಯೂನತೆಗಳನ್ನು ಒಪ್ಪಿಕೊಂಡು ತನ್ನೊಳಗೊಂದು ಏಕಾಂತ ಸೃಷ್ಟಿಸಿಕೊಂಡಿದ್ದಾಳೆ. ಒಳಗಡೆಯಿಂದ ಮಾತನಾಡುತ್ತಾ ಲೋಕಾಂತವನ್ನು ಕವಿತೆಗಳ ಮೂಲಕ ತೋರಿಸುತ್ತಾಳೆ. ಅವಳದಿಲ್ಲಿ ಸಂಕುಚಿತತೆಯನ್ನು ಮೀರಿದ ಮನಸ್ಥಿತಿ ಇದೆ. ಒಟ್ಟಾರೆಯಾಗಿ ಕವಿತೆಗಳ ಮೂಲಕ ಮನುಕುಲಕ್ಕೆ ಪ್ರೀತಿ ಹಂಚುವ ಬಯಕೆ ಹೊಂದಿದ್ದಾಳೆ ಎಂದರು. ಡಾ.ಕಾಂತೇಶ ಅಂಬಿಗೇರ ನಾಗರಾಜ ಹುಡೇದ ಬರೆದ ಬೆರಗು ಕೃತಿ ಕುರಿತು ಮಾತನಾಡಿ, ಇಲ್ಲಿ ಪಾತ್ರಗಳು ಕುತೂಹಲಕಾರಿಯಾಗಿವೆ. ಇದು ಈ ನೆಲದ ಇತಿಹಾಸವನ್ನು ತೋರಿಸುವ ಕಾದಂಬರಿ. ನಿಸರ್ಗದ ವೈವಿಧ್ಯ ಮತ್ತು ಪರಿಸರದ ಪ್ರಾಮುಖ್ಯತೆಯ ಪಾಠ ತಿಳಿಸುತ್ತದೆ. ಎಂದರು.ಚಂದ್ರುರವರ ಮೂಕಲೋಕದ ಭಾವ ಕೃತಿ ಕುರಿತು ಡಾ.ಪುಷ್ಪ ಶಲವಡಿಮಠ ಮಾತನಾಡಿ, ಕಾಡಿನ ಮೌಲ್ಯಗಳು ಕುರಿತು ಬೆಳಕು ಚೆಲುವ ಕೃತಿ ಕಾಡಿನ ನಾಶಕ್ಕೆ ಕಾರಣ ಹುಡುಕುತ್ತಾ ಕಾಡು ನಾಡಿನ ಮಧ್ಯದ ವೈಪರಿತ್ಯಗಳ ಕುರಿತು ಅನೇಕ ಪ್ರಶ್ನೆಗಳನ್ನ ಹುಟ್ಟು ಹಾಕುತ್ತದೆ. ಇದೊಂದು ಭಾಷಾ ಸಂಪತ್ತಿನ ಅನುಭವದ ಕಾವ್ಯವಾಗಿದೆ ಎಂದರು. ಷಣ್ಮುಖ ಹೊಂಬಳಿಯವರ ಪಿಸುಮಾತು ಕುರಿತು ಡಾ. ಗೀತಾ ಸುತ್ತುಕೋಟಿ ಮಾತನಾಡಿ, ಕವಿ ಇಲ್ಲಿ ವಸ್ತುಸ್ಥಿತಿಯನ್ನು ಸ್ಫೋಟಗೊಳಿಸುತ್ತಾರೆ. ಕವಿತೆಗಳಲ್ಲಿ ಏನೇನೋ ವಿಚಾರಗಳ ಮೆರವಣಿಗೆ ಇದ್ದು ಸಕರಾತ್ಮಕ ಚಿಂತನೆಗಳ ಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ ಎಂದರು. ಸೋಮನಾಥರ ಮನವಾಣಿಗಳು ಕುರಿತು ಶಮಂತಕುಮಾರ ವಿಮರ್ಶಿಸಿದರು. ಈ ಗೋಷ್ಠಿಗೆ ಜಗನ್ನಾಥ ಗೇನಣ್ಣನವರ ಪ್ರಾರ್ಥಿಸಿ, ಸಿದ್ದು ಹುಣಸಿಕಟ್ಟಿಮಠ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿ, ಜಗದೀಶ ಕತ್ತಿ ವಂದಿಸಿದರು.ನಂತರ ಐದು ಲೇಖಕರೊಂದಿಗೆ ಸಂವಾದಗೋಷ್ಠಿ ನಡೆಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ.ಜೆ.ಆರ್. ಸಿಂಧೆ ಕಾರ್ಯಕ್ರಮದ ಔಚಿತ್ಯ ಮತ್ತು ಉಪಯುಕ್ತತೆ ಕುರಿತು ಮಾತನಾಡಿದರು. ಐದು ಲೇಖಕರಿಗೆ ಎಲ್ಲಾ ಸಂಘಟನೆಗಳ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಭಾವ ಸಂಗಮ ಸಾಹಿತ್ಯ ಮತ್ತು ಸಾಂಸ್ಕöÈತಿಕ ವೇದಿಕೆಯ ಸಂಚಾಲಕ ಶೇಖರ ಭಜಂತ್ರಿ ಮಾತನಾಡಿ, ಯಾವುದೇ ಪ್ರಕಾರದ ಸಾಹಿತ್ಯವಿರಲಿ ಅದು ವ್ಯಕ್ತಿಯ ಮತ್ತು ಸಮಾಜದ ಸಂಕಟಗಳಿಗೆ ಔಷಧಿಯಾಗಬೇಕು. ಮನುಷ್ಯತ್ವವನ್ನು ಮರೆತ ನಾವು ಇಂದು ಅನೇಕ ಪ್ರಕ್ಷುಬ್ಧ ಸ್ಥಿತಿಗಳಿಗೆ ಸಾಕ್ಷಿಯಾಗಿದ್ದೇವೆ. ಸಾಹಿತಿಗಳಾದವರಿಗೆ ಸಮಷ್ಟಿಯ ಭಾವವಿರಬೇಕು. ವಿಶಾಲ ದೃಷ್ಟಿಕೋನದಿಂದ ಜಗತ್ತನ್ನ ನೋಡಬೇಕು. ಮಾನವೀಯತೆಯನ್ನು ಮರೆತವರ ಎದೆಯಲ್ಲಿ ಮೌಲ್ಯಗಳನ್ನು ಬಿತ್ತಬೇಕಿದೆ ಎಂದರು.ಮಂಜುನಾಥ ಕತ್ತಿ ಸ್ವಾಗತಿಸಿ ಪೃಥ್ವಿರಾಜ ಬೆಟಗೇರಿ ನಿರೂಪಿಸಿದರೆ ಕರಿಯಪ್ಪ ಹಂಚಿನಮನಿ ವಂದಿಸಿದರು.