ಸಾರಾಂಶ
ಹುಕ್ರಪ್ಪ ಅವರ ಮನೆಯ ಹಿಂಬದಿಯ ಗುಡ್ಡದ ಒಂದು ಭಾಗ ಸತತವಾಗಿ ಸುರಿಯುತಿದ್ದ ಮಳೆಗೆ ಕುಸಿದು ಮನೆಯ ಗೋಡೆ ಮೇಲೆ ಬಿದ್ದು, ಬಿರುಕು ಮೂಡಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ನಿವಾಸಿ ಹುಕ್ರಪ್ಪ ಎಂಬವರ ಮನೆ ಹಿಂಬದಿಯ ಗುಡ್ಡ ಜರಿದು ಬಿದ್ದು ಮನೆಗೆ ಹಾನಿಯುಂಟಾದ ಘಟನೆ ಗುರುವಾರ ಸಂಭವಿಸಿದೆ.
ಹುಕ್ರಪ್ಪ ಅವರ ಮನೆಯ ಹಿಂಬದಿಯ ಗುಡ್ಡದ ಒಂದು ಭಾಗ ಸತತವಾಗಿ ಸುರಿಯುತಿದ್ದ ಮಳೆಗೆ ಕುಸಿದು ಮನೆಯ ಗೋಡೆ ಮೇಲೆ ಬಿದ್ದು, ಬಿರುಕು ಮೂಡಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.ಘಟನಾ ಸ್ಥಳಕ್ಕೆ ಸ್ಥಳೀಯ ಪಂಚಾಯಿತಿ ಪಿಡಿಒ ಭೇಟಿ ನೀಡಿ ಪರಿಶೀಲಿಸಿದರು. ಬಿದ್ದ ಗುಡ್ಡದ ಮಣ್ಣು ತೆರವು ಕಾರ್ಯಾಚರಣೆಗೆ ಸುಮಾರು ೨೫ ಸಾವಿರಕ್ಕೂ ಅಧಿಕ ಮೊತ್ತ ಬೇಕಾಗಿದ್ದು, ಕಂದಾಯ ಇಲಾಖೆ ಪ್ರಾಕೃತಿಕ ವಿಕೋಪ ಪರಿಹಾರದಡಿ ಆರ್ಥಿಕ ಸಹಕಾರ ನೀಡಬೇಕೆಂದು ಸ್ಥಳೀಯ ಸಾಮಾಜಿಕ ಮುಂದಾಳು ಮಹಮ್ಮದ್ ಬಂದಾರು ಅಗ್ರಹಿಸಿದ್ದಾರೆ.