ಸಾರಾಂಶ
- ಸಮುದಾಯಕ್ಕೆ ಕ್ಷಮೆ ಕೇಳಬೇಕು: ಮಹೇಶ್ ಒತ್ತಾಯ- - - ಹೊನ್ನಾಳಿ: ಮೀಸಲಾತಿಗಾಗಿ ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದವರ ನ್ಯಾಯಯುತ ಹೋರಾಟ ಹತ್ತಿಕ್ಕಲು ಸರ್ಕಾರ ಲಾಠಿ ಚಾರ್ಚ್ ಮಾಡಿದೆ. ಗೃಹಮಂತ್ರಿ ಡಾ,.ಪರಮೇಶ್ವರ ಅವರ ಲಾಠಿ ಚಾರ್ಚ್ ಮಾಡದೇ ಇನ್ನೇನು ಅವರಿಗೆ ಮುತ್ತು ಕೊಡಬೇಕಿತ್ತಾ ಎಂಬ ಹೇಳಿಕೆ ನೀಡಿದ್ದಾರೆ. ಇದು ನಿಜಕ್ಕೂ ದುರದೃಷ್ಟಕರ ಸಂಗತಿ. ಗೃಹ ಮಂತ್ರಿ ಅವರು ಹಿಂದೂ ಪಂಚಮಸಾಲಿ ಸಮುದಾಯದವರ ಕ್ಷಮೆ ಕೇಳಬೇಕು ಎಂದು ಜಿಪಂ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಎಂ.ಆರ್. ಮಹೇಶ್ ಒತ್ತಾಯಿಸಿದ್ದಾರೆ.
ಹಿಂದೂಸ್ಥಾನದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಮುಲ್ಲಾ, ಮೌಲಿಗಳಿಗೆ ಇರುವಷ್ಟು ಬೆಲೆ ಹಿಂದೂ ಸ್ವಾಮೀಜಿಗಳಿಗೆ ಇಲ್ಲದಂತಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಮುಸಲ್ಮಾನರಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಹೇಳುವಷ್ಟರ ಮಟ್ಟಿಗಿನ ಸರ್ಕಾರದ ಹೇಳಿಕೆಗಳಿಂದ ಆತಂಕ ಉಂಟಾಗುತ್ತಿದೆ ಎಂದಿದ್ದಾರೆ.ಬೆಳಗಾವಿಯ ಡಿ.ಸಿ.ಯೊಬ್ಬರು ಪಂಚಮಸಾಲಿ ವಾಹನಗಳನ್ನು ವಿಧಾನಸೌಧದ ಒಳಗೆ ಬಿಡಬೇಡಿ ಎನ್ನುವ ಅತಿರೇಖದ ಹೇಳಿಕೆ ಖಂಡಿನೀಯ. ವಿಧಾನಸೌಧದ ಒಳಗೆ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವ ದೇಶದ್ರೋಹಿಗಳು ಆರಾಮವಾಗಿ ವಿಧಾನಸೌಧದ ಒಳಗೆ- ಹೊರಗೆ ಓಡಾಡಿಕೊಂಡಿರುವ ಪರಿಸ್ಥಿತಿ ಕಾಣುವಂತಾಗಿದೆ. ಈ ಹಿಂದೆ ವಿಶ್ವ ಒಕ್ಕಲಿಗರ ಮಠದ ಸ್ವಾಮೀಜಿಗಳು ದೇಶದ ಸಂವಿಧಾನ, ಕಾನೂನಿಗೆ ಬೆಲೆಕೊಡದ ರೈತ, ಮಠ ಮಂದಿರಗಳ ಜಮೀನನ್ನು ಲೂಟಿ ಮಾಡುತ್ತಿರುವ ದೇಶದಲ್ಲಿ ಅರಾಜಕತೆ ಸೃಷ್ಠಿ ಮಾಡುತ್ತಿರುವವರ ಮತದಾನದ ಹಕ್ಕನ್ನು ಮೊಟಕುಗೊಳಿಸಿ ಎಂದು ಹೇಳಿದ್ದು ಸರಿ. ಆದರೆ, ಅವರ ಮೇಲೆ ಎಫ್ಐಆರ್ ಹಾಕಿ ವಿಚಾರಣೆಗೆ ಕರೆಯುತ್ತೀರಿ ಎಂದರೆ, ಕಾಂಗ್ರೆಸ್‌ನವರು ಇನ್ನೆಷ್ಟು ಅಲ್ಪಸಂಖ್ಯಾತರ ಮತಕ್ಕಾಗಿ ಅವರನ್ನು ಓಲೈಸುತ್ತೀರಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಬಾಂಗ್ಲಾದಲ್ಲಿ ಹಿಂದೂಗಳು, ಇಸ್ಕಾನ್ ಸನ್ಯಾಸಿಗಳ ಮೇಲೆ ಹಲ್ಲೆ, ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಮತ್ತು ಮುಖಂಂಡರು ಏಕೆ ಬಾಯ್ಬಿಡುತ್ತಿಲ್ಲ ಎಂದು ಮಹೇಶ್ ಪ್ರಶ್ನಿಸಿದ್ದಾರೆ.- - - -13ಎಚ್.ಎಲ್.ಐ2: ಎಂ.ಆರ್.ಮಹೇಶ್