ಸಂವಿಧಾನದಲ್ಲಿ ಸಾಮಾಜಿಕ ನ್ಯಾಯದ ಆಶಯ

| Published : Nov 23 2025, 01:15 AM IST

ಸಾರಾಂಶ

ದೇಶದಲ್ಲಿ ಸಮಾನತೆ, ಸ್ವಾತಂತ್ರ್ಯ, ಭಾತೃತ್ವದ ಮಾನವ ಘನತೆ ಹಾಗೂ ಸಾಮಾಜಿಕ ನ್ಯಾಯವನ್ನು ಒಳಗೊಂಡ ಆಶಯಗಳನ್ನು ಸಂವಿಧಾನ ಹೊಂದಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರುದೇಶದಲ್ಲಿ ಸಮಾನತೆ, ಸ್ವಾತಂತ್ರ್ಯ, ಭಾತೃತ್ವದ ಮಾನವ ಘನತೆ ಹಾಗೂ ಸಾಮಾಜಿಕ ನ್ಯಾಯವನ್ನು ಒಳಗೊಂಡ ಆಶಯಗಳನ್ನು ಸಂವಿಧಾನ ಹೊಂದಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅಭಿಪ್ರಾಯಪಟ್ಟರು. ತುಮಕೂರು ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಂವಿಧಾನ ಸ್ನೇಹಿ ಬಳಗ ಬೆಂಗಳೂರು. ಸಹಯೋಗದಲ್ಲಿ ತುಮಕೂರಿನಲ್ಲಿ ಮನ-ಮನೆಗೂ ಸಂವಿಧಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಆಶಯವನ್ನು ತುಮಕೂರಿನಲ್ಲಿ ಜನರ ಮನ-ಮನೆಗಳಿಗೆ ತಲುಪಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿ ಮಾಡಲು ಹೊರಟಿರುವುದು ಶ್ಲಾಘನೀಯ ಭಾರತೀಯರಿಗೆ ನಾಗರಿಕ ಹಕ್ಕುಗಳ ಶ್ರೇಷ್ಠತೆಯನ್ನು ನಮ್ಮ ಸಂವಿಧಾನ ನೀಡುವ ಮೂಲಕ ಶಕ್ತಿಯನ್ನು ನೀಡಿದೆ, ಮುಟ್ಟಿಸಿಕೊಳ್ಳದಂತಹ ಇತಿಹಾಸ ಇರುವ ಜನರನ್ನು ಇಂದು ಸಂವಿಧಾನ ಅಪ್ಪಿಕೊಳ್ಳುವಂತೆ ಮಾಡಿದೆ ಎಂದರು. ಸಂವಿಧಾನ ಕೆಳಸ್ಥರದ ಸಮಾಜದಲ್ಲಿ ಬಹಳಷ್ಟು ಬದಲಾವಣೆಯನ್ನು ತಂದಿದೆ. ಹಲವಾರು ವಿಷಯಗಳಿಂದ ಮಹಿಳೆಯರ ಸಮಸ್ಯೆಗಳು ಅಸ್ಪೃಶ್ಯತೆ ನಿವಾರಣೆ ಮೇಲೆ ಬೆಳಕು ಚೆಲ್ಲಿದೆ ಸ್ತ್ರೀಯರ ಅಸ್ಮಿತೆಯಾದ ಮುಟ್ಟನ್ನು ಕೀಳಾಗಿ ನೋಡುವ ಸಮಾಜದ ಅನಾಗರೀಕತೆಯನ್ನು ಹೋಗಲಾಡಿಸಿ ಸಂವಿಧಾನ ನಾಗರೀಕ ಸಮಾಜ ಕಟ್ಟಲು ಪ್ರೇರೇಪಣೆಯಾಗಿದೆ. ಆಧುನಿಕ ಕಾಲದಲ್ಲಿಯು ಗೊಲ್ಲರಹಟ್ಟಿಯಲ್ಲಿ ಮಹಿಳೆಯರ ಪರಿಸ್ಥಿತಿ ಭಯಾನಕವಾಗಿದೆ. ಸಂವಿಧಾನದ ಮೂಲಕ ಕಾನೂನು ಜಾರಿ ಮಾಡಿ ಸಮಾನತೆಯನ್ನು ಸಾಧಿಸಲು ಶ್ರೇಣಿಕರಣ ವ್ಯವಸ್ಥೆಯ ಅಸಮಾನತೆಯನ್ನು ನಿವಾರಣೆ ಮಾಡಲು 75 ವರ್ಷಗಳು ಕಳೆದಿದೆ. ಎಲ್ಲಾ ಧರ್ಮಗಳಲ್ಲಿ ಮನುಷ್ಯರನ್ನು ಪ್ರೀತಿಯಿಂದ ಗೌರವಿಸಬೇಕೆಂಬ ಬೋಧನೆಯನ್ನು ಮಾಡಿದೆ ಹಾಗಾಗಿ ಸಂವಿಧಾನ ಸಾರ್ಥಕತೆಯಾಗಬೇಕಾದರೆ ಕಟ್ಟಕಡೆಯ ವ್ಯಕ್ತಿಯು ಸಂವಿಧಾನ ಶಿಕ್ಷಣ ಪಡೆಯಬೇಕೆಂದರು.ಸಾಮಾಜಿಕ ಹೋರಾಟಗಾರರು ಮತ್ತು ಅಂಕಣಕಾರರು ಆದ ಶಿವಸುಂಧರ್ ಮುಖ್ಯ ಭಾಷಣಕಾರರಾಗಿ ಮಾತನಾಡಿ ನವೆಂಬರ್ 26ಕ್ಕೆ ಸಂವಿಧಾನ ಅರ್ಪಣೆಯಾಗಿ 75 ವರ್ಷ ಆಗುತ್ತಿದೆ ಸಂವಿಧಾನ ಎಲ್ಲರಿಗೂ ಒಂದೇ ಮತದ ಹಕ್ಕನ್ನು ನೀಡಿದೆ ಪ್ರಜಾತಂತ್ರ ಬರೀ ವೋಟ್ ಅಲ್ಲ. ದೇಶದಲ್ಲಿರುವ ಜನರಿಗೆ ತೀರ್ಮಾನಿಸುವ ಅಧಿಕಾರ ನೀಡುವುದಾಗಿದೆ ಎಂದರು.ಆದರೆ ಈ ಅಧಿಕಾರ ಇಂದು ಯಾವ ಸಂವಿಧಾನವನ್ನು ದ್ವೇಷಿಸುವವರ ಕೈಯಲ್ಲಿ ಸಿಕ್ಕಿರುವುದು ವಿಪರ್ಯಾಸವಾಗಿದೆ. ಏಕೆಂದರೆ ಇಂದು ಮನ-ಮನೆಗೂ ಧ್ವೇಷ ಬಿತ್ತುವ ಸಂದರ್ಭದಲ್ಲಿ ಸಾಮಾನ್ಯ ಜನರ ಮನಕ್ಕೆ ಮತ್ತು ಮನೆಗೆ ಸಂವಿಧಾನ ತಲುಪಿಸಲು ಹೊರಟಿರುವುದು ವಿಶೇಷ ಯಾವ ಜನರಿಗೆ ಸಂವಿಧಾನದ ಅಗತ್ಯವಿದೆಯೇ ಆ ಜನರ ಜೊತೆಯಲ್ಲಿದ್ದಾಗ ಮಾತ್ರ ಶಕ್ತಿ ಹೆಚ್ಚಾಗುತ್ತದೆ ಎಂದರು. ಸ್ಲಂ ಇರದ ಭಾರತ ಎಲ್ಲರಿಗೂ ಅವಕಾಶ ನೀಡುವ ಭಾರತ, ಸಮಾನ ಶಿಕ್ಷಣ ನೀಡುವ ಭಾರತ, ನಮ್ಮ ಕನಸ್ಸಾಗಬೇಕು, ಬಡತನ ಇರುವ ಕಡೆ ಜಾತಿಯಿರುವ ಕಡೆ ಪ್ರಜಾಪ್ರಭುತ್ವ ಇರುವುದಿಲ್ಲ, ಮನುಸ್ಮೃತಿ ಜಾತಿ ವ್ಯವಸ್ಥೆಯಲ್ಲಿ ಭಾರತದ ಆಡಳಿತ ವ್ಯವಸ್ಥೆ ಮಾಡುತ್ತಿದೆ, ಹುಟ್ಟಿನ ಮೇಲೆ ಮನುಸ್ಮೃತಿ ಅಧಿಕಾರ ನೀಡಿದರೇ ನಮ್ಮ ಸಂವಿಧಾನ ಜನರ ಭವಿಷ್ಯವನ್ನು ತೀರ್ಮಾನಿಸುತ್ತದೆ. ಎಲ್ಲರಿಗೂ ಅವಕಾಶವನ್ನು ಕಲ್ಪಿಸುವುದು ಸರ್ಕಾರಗಳು ಮಾಡಬೇಕಿದೆ ಇದು ಸಂವಿಧಾನದ ಆಶಯವು ಸಹ ಆಗಿದೆ.ಸಂವಿಧಾನವನ್ನು ವಿರೋಧಿಸುವವರು ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ ನಮ್ಮನ್ನು ದೈನೇಸಿ ಸ್ಥಿತಿಯಲ್ಲಿಟ್ಟರೆ ನಾವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಲು ಸಾಧ್ಯವಾಗಲ್ಲ, ನಮ್ಮ ದೇಶದ ವಿದ್ಯೇ ತೀರ್ಮಾನಿಸುವ ಅಧಿಕಾರವನ್ನು ಜನರಿಗೆ ಕೆಲವೊಂದು ಗ್ಯಾರಂಟಿಗಳನ್ನು ಸಂವಿಧಾನ ನೀಡಿದೆ ಆದರೆ ಇತ್ತೀಚೆಗೆ ಸರ್ಕಾರಗಳು ನೆಪ ಮಾತ್ರಕ್ಕೆ ಗ್ಯಾರಂಟಿಗಳನ್ನು ನೀಡಿ ಜನರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಹೊರಟಿರುವುದು. ಜನಕಲ್ಯಾಣಕ್ಕೆ ವಿರುದ್ಧವಾಗಿದೆ. ನವೆಂಬರ್ 26ರಿಂದ ಡಿಸೆಂಬರ್ 6 ರವರೆಗೆ ಆರ್‌ಎಸ್‌ಎಸ್ ಸಂವಿಧಾನ ಸಮ್ಮಾನ್ ಅಭಿಯಾನ ಮಾಡಲು ಹೊರಟಿರುವುದು ದೃತರಾಷ್ಟ್ರ ಆಲಿಂಗನವಾಗಿದ್ದು ಈ ದೇಶಕ್ಕೆ ಸನಾತನ ಬ್ರಾಹ್ಮಣವಾದವನ್ನು ಪ್ರತಿಪಾಧನೆ ಮಾಡಲು ಹೋರಟಿರುವ ಆರ್‌ಎಸ್‌ಎಸ್ ಬಗ್ಗೆ ಎಚ್ಚರವಾಗಿರಬೇಕು ೫ ದಿನದಕ್ಕೆ ಮಾತ್ರ ನಮ್ಮ ಅಭಿಯಾನ ಆಗದೇ ವರ್ಷಪೂರ್ತಿ ಸಂವಿಧಾನ ಜನಾಂದೋಲನವನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ದೊರೈರಾಜ್ ನಾವು ಪ್ರತೀ ಮನ-ಮನೆಗೂ ಸಂವಿಧಾನವನ್ನು ತೆಗೆದುಕೊಂಡು ಹೋಗಬೇಕೆಂದರೆ ಧ್ವೇಷವನ್ನು ಅಳಿಸಲು ಪ್ರೀತಿಯಿಂದ ಒಬ್ಬೊರಿಗೊಬ್ಬರು ಮಾತನಾಡಿಕೊಳ್ಳುವಂತಹ ವಾತಾವರಣವನ್ನು ದೇಶದಲ್ಲಿ ನಿರ್ಮಿಸಬೇಕೆಂದರು.ವೇದಿಕೆಯಲ್ಲಿ ಮುಖ್ಯಭಾಷಣಕ್ಕೆ ಪ್ರತಿಕ್ರಿಯಿಸಿ ಡಾ.ಅರುಂಧತ್ತಿ, ಎಐಟಿಸಿಯ ಗಿರೀಶ್, ಎಐಎಂಎಸ್‌ಎಸ್ ನ ಕಲ್ಯಾಣಿ, ಸಾವಿತ್ರಿ ಬಾಯಿಪುಲೆ ಸಂಘಟನೆಯ ಅನುಪಮಾ, ದಸಂಸದ ಕೃಷ್ಣಪ್ಪ ಮೆಲ್ಲದಮಡು, ಪಿಎನ್ ರಾಮಯ್ಯ, ಚೋಳೂರ್‌ಶಿವನಂಜಪ್ಪ, ಭರತ್ ಮೆಲ್ಲದಮಡು, ವಕೀಲರಾದ ಶಿವಣ್ಣ, ಎಪಿಸಿಆರ್‌ನ ತಾಜುದ್ದೀನ್ ಷರೀಫ್ ಮಾತನಾಡಿದರು.ಅಶ್ವಿನಿ ಬೋಧ್‌ ಸಂವಿಧಾನ ಪೀಠಿಕೆಯನ್ನು ಪ್ರಸ್ತಾವಿಕವಾಗಿ ಪೂರ್ಣ ರವಿಶಂಕರ್, ಸ್ವಾಗತವನ್ನು ಅರುಣ್, ನಿರೂಪಣೆಯನ್ನು ತಿರುಮಲಯ್ಯ, ವಂದನಾರ್ಪಣೆಯನ್ನು ಎ.ನರಸಿಂಹಮೂರ್ತಿ ನೆರವೇರಿಸಿದರು, ಕಾರ್ಯಕ್ರಮಕ್ಕೆ ಶುಭ ಕೋರಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ಧೇಶಕರಾದ ಡಾ.ಬಾಲಗುರುಮೂರ್ತಿ ಶುಭಕೋರಿದರು. ಸಂವಿಧಾನ ಸ್ನೇಹಿ ಬಳಗದ ವಿನಯ್‌ಶ್ರೀನಿವಾಸ್ ಮನ-ಮನೆಗೂ ಸಂವಿಧಾನ ತರಬೇತುದಾರರಾದ ಮೇಘರಾಮದಾಸ್, ವಿನೀತ್‌ಕುಮಾರ್, ವೆಂಕಟೇಶ್, ಶಿವುಕುಮಾರ್, ತುಮಕೂರು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು, ತುಮಕೂರು ಸ್ಲಂ ಸಮಿತಿಯ ಪದಾಧಿಕಾರಿಗಳು, ನಿವೇಶನ ರಹಿತ ಹೋರಾಟ ಸಮಿತಿಯ ಪದಾಧಿಕಾರಿಗಳು ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.