ಕಳೆದ ವರ್ಷ ಜುಲೈನಲ್ಲಿ ಚನ್ನರಾಯಪಟ್ಟಣದ ತಾಲೂಕು, ಡೇರಿ ಶೆಟ್ಟಿಹಳ್ಳಿ ಗ್ರಾಮದಲ್ಲಿರುವ ಶೋಭಾ ಎಂಬುವರ ಮನೆ ವಿದ್ಯುತ್ ಅವಘಡದಿಂದ ಸುಟ್ಟು ಹೋಗಿತ್ತು. ಬಳಿಕ ಸ್ಥಳೀಯ ಶಾಸಕ ಸಿ ಎನ್ ಬಾಲಕೃಷ್ಣ ಮತ್ತು ಕಂದಾಯ, ಸೆಸ್ಕ್, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಹಿಂದಿನ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಖುದ್ದು ಭೇಟಿ ನೀಡಿ ಸರ್ಕಾರಕ್ಕೆ ವರದಿ ನೀಡಿದ್ದರು. ಆದರೆ ಸರ್ಕಾರದಿಂದ ಪರಿಹಾರ ಸಿಗದೇ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದು, ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ ವಿದ್ಯುತ್ ಅವಘಡದಿಂದ, ಮನೆ ಸುಟ್ಟು ಹೋಗಿ ವರ್ಷ ಕಳೆದರೂ, ಸರ್ಕಾರದಿಂದ ಯಾವುದೇ ಪರಿಹಾರ ಸಿಗದೇ ಕುಟುಂಬವೊಂದು ಬೀದಿಪಾಲಾಗಿದೆ.

ಕಳೆದ ವರ್ಷ ಜುಲೈನಲ್ಲಿ ಚನ್ನರಾಯಪಟ್ಟಣದ ತಾಲೂಕು, ಡೇರಿ ಶೆಟ್ಟಿಹಳ್ಳಿ ಗ್ರಾಮದಲ್ಲಿರುವ ಶೋಭಾ ಎಂಬುವರ ಮನೆ ವಿದ್ಯುತ್ ಅವಘಡದಿಂದ ಸುಟ್ಟು ಹೋಗಿತ್ತು. ಬಳಿಕ ಸ್ಥಳೀಯ ಶಾಸಕ ಸಿ ಎನ್ ಬಾಲಕೃಷ್ಣ ಮತ್ತು ಕಂದಾಯ, ಸೆಸ್ಕ್, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಹಿಂದಿನ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಖುದ್ದು ಭೇಟಿ ನೀಡಿ ಸರ್ಕಾರಕ್ಕೆ ವರದಿ ನೀಡಿದ್ದರು. ಆದರೆ ಸರ್ಕಾರದಿಂದ ಪರಿಹಾರ ಸಿಗದೇ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದು, ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ.ಮನೆ ಕಳೆದುಕೊಂಡ ಮಾಲೀಕ ಯಲ್ಲಪ್ಪ ಮಾತನಾಡಿ ಎಂದಿನಂತೆ ನಾವು ಕೂಲಿ ಕೆಲಸಕ್ಕೆ ಹೋಗಿದ್ದು, ಅಂದು ಬೆಳಗ್ಗೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು, ಸಂಜೆ ವಿದ್ಯುತ್ ಬಂದ ವೇಳೆ ಜೋರಾದ ಶಬ್ಧ ಬಂದಿತು. ಪಕ್ಕದ ಮನೆಯಲ್ಲಿದ್ದ ನಾನು ಹೊರಗೆ ಬಂದು ನೋಡಿದಾಗ ನಮ್ಮ ಮನೆ ಹೊತ್ತು ಉರಿಯುತ್ತಿತ್ತು. ಕೂಡಲೇ ಅಕ್ಕ ಪಕ್ಕದ ಮನೆಯವರು ಬೆಂಕಿ ನಂದಿಸಲು ಪ್ರಯತ್ನ ಮಾಡಿದರು. ನಂತರ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರು. ಅಷ್ಟರೊಳಗೆ ಮನೆಯಲ್ಲಿದ್ದ ೧೫ ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಲೆ ಬಾಳುವ ವಸ್ತುಗಳು ಸುಟ್ಟುಹೊಂಗಿದ್ದು, ಪರಿಹಾರಕ್ಕಾಗಿ ವರ್ಷದಿಂದ ಅಲೆಯುತ್ತಿದ್ದೇವೆ ಎಂದರು.ಪಕ್ಕದ ಮನೆ ನಿವಾಸಿ ಶೋಭಾ ಮಾತನಾಡಿ, ನಾನು ಆಗ ತಾನೇ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಕುಳಿತಿದ್ದೆ. ಪಟಾಕಿ ಸಿಡಿದ ರೀತಿಯಲ್ಲಿ ಜೋರಾದ ಶಬ್ದ ಕೇಳಿದ ಹಿನ್ನೆಲೆ, ಮನೆಯಿಂದ ಹೊರಬಂದು ನೋಡಿದಾಗ ಪಕ್ಕದ್ಮನೆ ಬೆಂಕಿಯಲ್ಲಿ ಸುಟ್ಟು ಹೋಗುತ್ತಿತ್ತು. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ಬರುವಷ್ಟರಲ್ಲಿ ಮನೆ ಭಾಗಶಃ ಸುಟ್ಟುಹೋಗಿತ್ತು. ಮಕ್ಕಳನ್ನು ಸಾಕಲು ಈ ಕುಟುಂಬ ಇನ್ನಿಲ್ಲದ ಕಷ್ಟ ಪಡುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಸರ್ಕಾರದಿಂದ ಸಿಗಬೇಕಾದ ಪರಿಹಾರ ದೊರೆಯದೆ ಪರಿತಪಿಸುತ್ತಿದ್ದಾರೆ.ಪ್ರತ್ಯಕ್ಷದರ್ಶಿ ಮುರುಗನ್ ಮಾತನಾಡಿ ರಾಜಕಾರಣಿಗಳ, ಅಥವಾ ಅಧಿಕಾರಿಗಳ ಮನೆಗೆ ಬೆಂಕಿ ಬಿದ್ದಿದ್ದರೆ, ವರ್ಷದೊಳಗೆ ಹೊಸ ಮನೆ ನಿರ್ಮಾಣವಾಗುತ್ತಿತ್ತು. ಆದರೆ ಬಡಕುಟುಂಬ, ದಾಖಲೆಗಳನ್ನ ಕೈಯಲ್ಲಿ ಹಿಡಿದುಕೊಂಡು ಕಚೇರಿಗೆ ಅಲೆದಲೆದು, ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಈಗಲಾದರೂ ಸಂಬಂಧಪಟ್ಟವರು ಇದರ ಬಗ್ಗೆ ಗಮನ ಹರಿಸಿ ಪರಿಹಾರ ದೊರಕಿಸಿಕೊಡುವರೆ ಕಾದುನೋಡಬೇಕಿದೆ ಎಂದರು.