ಸಾರಾಂಶ
ಸುಳುಗೋಡು ಸೋಮವಾರ ಗ್ರಾಮದಲ್ಲಿ ರೈತರೊಬ್ಬರ ಜಮೀನಿನಲ್ಲಿ ಉಳುಮೆ ಮಾಡುವ ವೇಳೆ ಜೈನ ತೀರ್ಥಂಕರರ ವಿಗ್ರಹ ಹಾಗೂ ಕೆತ್ತನೆಯುಳ್ಳ ಕಲ್ಲಿನ ಪುರಾತನ ಸ್ತಂಭ ಪತ್ತೆಯಾಗಿವೆ. ಟ್ರ್ಯಾಕ್ಟರ್ ಬಳಸಿ ಉಳುಮೆ ಮಾಡುವಾಗ ಈ ಕಲಾಕೃತಿಗಳು ನೆಲದಡಿಯಿಂದ ಹೊರಬಂದವು. ಮಂಜು ಹಾಗೂ ಸ್ಥಳೀಯ ಗ್ರಾಮಸ್ಥರು ಈ ವಿಷಯವನ್ನು ತಕ್ಷಣ ಪುರಾತತ್ವ ಇಲಾಖೆಗೆ ತಿಳಿಸಿದ್ದಾರೆ. ಪತ್ತೆಯಾದ ಕಲಾಕೃತಿಗಳು ತೀರ್ಥಂಕರರ ವಿಗ್ರಹ ಮತ್ತು ಸ್ತಂಭದ ಶಿಲ್ಪಗಳನ್ನು ಹೊಂದಿದ್ದು, ಅವು ಪುರಾತನ ಕಾಲಕ್ಕೆ ಸೇರಿದವು ಎಂದು ಊಹಿಸಲಾಗಿದೆ.
ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ಸುಳುಗೋಡು ಸೋಮವಾರ ಗ್ರಾಮದಲ್ಲಿ ರೈತರೊಬ್ಬರ ಜಮೀನಿನಲ್ಲಿ ಉಳುಮೆ ಮಾಡುವ ವೇಳೆ ಜೈನ ತೀರ್ಥಂಕರರ ವಿಗ್ರಹ ಹಾಗೂ ಕೆತ್ತನೆಯುಳ್ಳ ಕಲ್ಲಿನ ಪುರಾತನ ಸ್ತಂಭ ಪತ್ತೆಯಾಗಿವೆ.ಮಂಜು ಎಂಬ ರೈತ ಬುಧವಾರ ಬೆಳಿಗ್ಗೆ ಟ್ರ್ಯಾಕ್ಟರ್ ಬಳಸಿ ಉಳುಮೆ ಮಾಡುವಾಗ ಈ ಕಲಾಕೃತಿಗಳು ನೆಲದಡಿಯಿಂದ ಹೊರಬಂದವು. ಮಂಜು ಹಾಗೂ ಸ್ಥಳೀಯ ಗ್ರಾಮಸ್ಥರು ಈ ವಿಷಯವನ್ನು ತಕ್ಷಣ ಪುರಾತತ್ವ ಇಲಾಖೆಗೆ ತಿಳಿಸಿದ್ದಾರೆ. ಪತ್ತೆಯಾದ ಕಲಾಕೃತಿಗಳು ತೀರ್ಥಂಕರರ ವಿಗ್ರಹ ಮತ್ತು ಸ್ತಂಭದ ಶಿಲ್ಪಗಳನ್ನು ಹೊಂದಿದ್ದು, ಅವು ಪುರಾತನ ಕಾಲಕ್ಕೆ ಸೇರಿದವು ಎಂದು ಊಹಿಸಲಾಗಿದೆ.
ಈ ಗ್ರಾಮದಲ್ಲಿ ಈ ಮೊದಲು ಕೂಡಾ ಭೂಮಿಯಿಂದ ಪುರಾತನ ಕಾಲದ ವಿಗ್ರಹ, ಕೆತ್ತನೆಗಳು ಪತ್ತೆಯಾಗಿದ್ದವು. ಇದರಿಂದಾಗಿ ಗ್ರಾಮ ಐತಿಹಾಸಿಕವಾಗಿ ಬಹು ಪ್ರಾಮುಖ್ಯತೆ ಹೊಂದಿರುವ ಸ್ಥಳವಾಗಿರಬಹುದೆಂಬ ಊಹಿಸಲಾಗುತ್ತಿದೆ.ಘಟನೆಯ ಬಗ್ಗೆ ಪುರಾತತ್ವ ಇಲಾಖೆ ಈಗಾಗಲೇ ಪರಿಶೀಲನೆ ಪ್ರಾರಂಭಿಸಿದ್ದು, ಇನ್ನೂ ಹೆಚ್ಚಿನ ಪುರಾತನ ಕಾಲದ ಅವಶೇಷಗಳು ಈ ಪ್ರದೇಶದಲ್ಲಿ ಇರಬಹುದು ಎಂಬ ನಿರೀಕ್ಷೆಯಿದೆ.