ಸಾರಾಂಶ
ಮಂಗಳವಾರ ಸಂಜೆ ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ವೈಮಾನಿಕ ಪ್ರದರ್ಶನದ ರಿಹರ್ಸಲ್‌ಗೆ ಸಾವಿರಾರು ಜನ ಸಾಕ್ಷಿಯಾದರು.
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತವು ಭಾರತೀಯ ವಾಯುಪಡೆ ವತಿಯಿಂದ ಅ.1ರ ಸಂಜೆ 4ಕ್ಕೆ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ವೈಮಾನಿಕ ಪ್ರದರ್ಶನವನ್ನು ಆಯೋಜಿಸಿದೆ. ಇದರ ಪೂರ್ವಭಾವಿಯಾಗಿ ಮಂಗಳವಾರ ಸಂಜೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ರಿಹರ್ಸಲ್‌ಗೆ ಸಾವಿರಾರು ಜನ ಸಾಕ್ಷಿಯಾದರು.
ಭಾರತೀಯ ವಾಯುಪಡೆಯ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದ 9 ವಿಮಾನಗಳು 20 ನಿಮಿಷಗಳ ವೈಮಾನಿಕ ಪ್ರದರ್ಶನವು ಮೋಡಿ ಮಾಡಿತು. 9 ವಿಮಾನಗಳು ಏಕಕಾಲದಲ್ಲಿ ಆಕಾಶದಲ್ಲಿ ಬೊರ್ಗರತ ಸದ್ದು ಮಾಡುತ್ತಾ, ಹೊಗೆ ಸೂಸುತ್ತಾ ಮೈದಾನದತ್ತ ಶರವೇಗದಲ್ಲಿ ಬರುತ್ತಿದ್ದಂತೆ ನೆರೆದಿದ್ದ ಜನ ರೋಮಾಂಚನಗೊಂಡರು.ಕಾವೇರಿ ಆರತಿ ಮುಕ್ತಾಯ:ಮಂಡ್ಯ: ಕೆಆರ್‌ಎಸ್ ಬೃಂದಾವನ ಬಳಿ 5 ದಿನ ನಡೆದ ಕಾವೇರಿ ಆರತಿಯನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡರು. ಕಾವೇರಿ ಆರತಿ ಕರ್ನಾಟಕದ ಇತಿಹಾಸದಲ್ಲಿ ಹೊಸ ಮೈಲಿಗಲನ್ನು ಸೃಷ್ಟಿಸಿದೆ. ಇದರಿಂದ ವಿಶ್ವ ಪ್ರಸಿದ್ಧ ಕೆಆರ್‌ಎಸ್‌ಗೆ ಹೊಸ ಸ್ವರೂಪ ತಂದು ಕೊಡುವ ಜೊತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಕ್ಕಂತಾಗಿದೆ.