ವಿದ್ಯಾರ್ಥಿಗಳ ಸಾಧನೆಯಿಂದ ಸಂಸ್ಥೆಯ ಮಹತ್ವ ಹೆಚ್ಚಿದೆ: ನಾಯಕ

| Published : Feb 02 2025, 01:00 AM IST

ಸಾರಾಂಶ

The importance of the institution has increased due to the achievements of the students: Leader

-ದಕ್ಷಿಣ ಭಾರತದ ಸದರನ್ ಇಂಡಿಯಾ ಸೈನ್ಸ್ ಫೇರ್ ನಲ್ಲಿ 4ನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

-----

ಕನ್ನಡಪ್ರಭ ವಾರ್ತೆ ಯಾದಗಿರಿ

ರಾಷ್ಟ್ರೀಯ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುವುದು ಗ್ರಾಮೀಣ ಭಾಗದ ಸಂಸ್ಥೆಯ ಮಹತ್ವ ಹೆಚ್ಚಾಗಿದೆ ಎಂದು ಮುಖ್ಯಗುರು ಲಿಂಗಾರೆಡ್ಡಿ ನಾಯಕ ಹೇಳಿದರು.

ತಾಲೂಕಿನ ಸೈದಾಪುರ ಪಟ್ಟಣದ ವಿದ್ಯಾವರ್ಧಕ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಈಚೆಗೆ ಪುದುಚೆರಿಯಲ್ಲಿ ನಡೆದ ದಕ್ಷಿಣ ಭಾರತದ ಸದರನ್ ಇಂಡಿಯಾ ಸೈನ್ಸ್ ಫೇರ್ 2025 ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ, 4ನೇ ಸ್ಥಾನ ಗಳಿಸಿದ ಅಯಾನ್ ಅಲಿ ಮತ್ತು ಮಲ್ಲಪ್ಪ ಚವ್ಹಾಣ ಅವರನ್ನು ಪ್ರೌಢ ಶಾಲಾ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.

ಸಂಯೋಜಿತ ನೀರು ಅಥವಾ ಕೀಟನಾಶಕ ಸಿಂಪಡಿಸುವುದರ ಮೂಲಕ ಹುಲ್ಲು ಕತ್ತರಿಸುವ ವಿನೂತನ ಯಂತ್ರವನ್ನು ತಯಾರಿಸಿ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಯಾಮೆರಾ ಅಳವಡಿಸಿ ಬೆಳೆಗಳ ರೋಗಗಳ ಮುನ್ಸೂಚನೆ ತಿಳಿಸುವ ಚಾಲಕರಹಿತ ಯಂತ್ರವಾಗಿದ್ದು, ಮೊಬೈಲ್ ಆಪರೇಟಿಂಗ್ ಮೂಲಕ ಚಲಿಸುತ್ತದೆ. ಇದು ರೈತರ ಜಮೀನುಗಳಲ್ಲಿ ಕಳೆಯನ್ನೂ ತೆಗೆಯುವುದರ ಜೊತೆಗೆ ನೀರು ಅಥವಾ ಕೀಟನಾಶಕ ಸಿಂಪಡಿಸುತ್ತದೆ. ಈ ವಿಧದ ಬಹು ಉಪಯೋಗಿ ಮಾದರಿ ತಯಾರಿಸಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕರ ಮಹತ್ವ ಅತಿ ಹೆಚ್ಚಿನದಾಗಿದೆ. ಇನ್ನು ಹೆಚ್ಚಿನ ಸಾಧನೆ ಇವರದಾಗಲಿ ಎಂದು ಹೇಳಿದರು.

ಡಯಟ್ ಪ್ರಾಂಶುಪಾಲ ವೃಷಬೇಂದ್ರಯ್ಯ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುವ ಮೂಲಕ ಜಿಲ್ಲೆಯ ಮಹತ್ವ ಹೆಚ್ಚಾಗಿದೆ ಎಂದರು. ಡಯಟ್ ಹಿರಿಯ ಉಪನ್ಯಾಸಕ ಶೇಖರಪ್ಪ ಮಾತನಾಡಿದರು. ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಗೂಳಪ್ಪ ಎಸ್. ಮಲ್ಹಾರ, ವಿಜ್ಞಾನ ಶಿಕ್ಷಕ ರಾಚಯ್ಯ ಸ್ವಾಮಿ ಬಾಡಿಯಾಳ. ಭೀಮಣ್ಣ ನಾಯಕ, ಸಂಗಾರೆಡ್ಡಿ ಪಾಟೀಲ್, ವೆಂಕಟೇಶ ಸಗರ ಸೇರಿದಂತೆ ಇತರರಿದ್ದರು.

-----

31ವೈಡಿಆರ್6:

ಯಾದಗಿರಿ ತಾಲೂಕಿನ ಸೈದಾಪುರ ವಿದ್ಯಾವರ್ಧಕ ಪ್ರೌಢ ಶಾಲಾ ವಿದ್ಯಾರ್ಥಿಗಳು ಪುದುಚೆರಿಯಲ್ಲಿ ನಡೆದ ದಕ್ಷಿಣ ಭಾರತದ ಸದರನ್ ಇಂಡಿಯಾ ಸೈನ್ಸ್ ಫೇರ್ 2025ರಲ್ಲಿ ಭಾಗವಹಿಸಿ 4ನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾಸಲಾಯಿತು.