ವಚನ ಸಾಹಿತ್ಯದ ಮಹತ್ವವ ಹೊಸ ಪೀಳಿಗೆ ತಿಳಿಯಬೇಕು-ಹಿರೇಮಠ

| Published : May 12 2024, 01:19 AM IST

ವಚನ ಸಾಹಿತ್ಯದ ಮಹತ್ವವ ಹೊಸ ಪೀಳಿಗೆ ತಿಳಿಯಬೇಕು-ಹಿರೇಮಠ
Share this Article
  • FB
  • TW
  • Linkdin
  • Email

ಸಾರಾಂಶ

ಜೀವನದ ಮೌಲ್ಯಗಳನ್ನು ಸಾರುವ ವಚನ ಸಾಹಿತ್ಯದ ಮಹತ್ವವನ್ನು ಹೊಸ ಪೀಳಿಗೆಯು ತಿಳಿಯಬೇಕು ಎಂದು ಚೆನ್ನೇಶ್ವರ ಮಠದ ಗೌರವ ಕಾರ್ಯದರ್ಶಿ ಅಮೃತಗೌಡ ಹಿರೇಮಠ ಹೇಳಿದರು.

ರಾಣಿಬೆನ್ನೂರು: ಜೀವನದ ಮೌಲ್ಯಗಳನ್ನು ಸಾರುವ ವಚನ ಸಾಹಿತ್ಯದ ಮಹತ್ವವನ್ನು ಹೊಸ ಪೀಳಿಗೆಯು ತಿಳಿಯಬೇಕು ಎಂದು ಚೆನ್ನೇಶ್ವರ ಮಠದ ಗೌರವ ಕಾರ್ಯದರ್ಶಿ ಅಮೃತಗೌಡ ಹಿರೇಮಠ ಹೇಳಿದರು. ನಗರದ ಚೆನ್ನೇಶ್ವರ ಮಠದಲ್ಲಿ ಬಸವ ಜಯಂತಿ ಅಂಗವಾಗಿ ಸ್ಥಳೀಯ ಲಿಂಗವಂತ ಸಮಾಜದ ನಿವೃತ್ತ ನೌಕರರ ಸಂಘದ ವತಿಯಿಂದ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ವಚನ ಗಾಯನ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ್ದಾರೆ. ವಚನಗಳ ತಾತ್ಪರ್ಯವನ್ನು ತಿಳಿದುಕೊಂಡು ಉತ್ತಮ ಜೀವನ ಸಾಗಿಸಿದಾಗ ಬದುಕಿನಲ್ಲಿ ನೆಮ್ಮದಿಯಿಂದ ಇರಲು ಸಾಧ್ಯ ಎಂದರು. ಗಣೇಶ ಕುಲಕರ್ಣಿ, ವೀಣಾ ಕಾಮಟೆ, ಅನಸೂಯಾ ರಾಠೋಡ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ವಿ.ವೀ. ಹರಪನಹಳ್ಳಿ, ಎಂ.ಪಿ. ಮುದ್ದಿ, ಪ್ರಭು ಹಲಗೇರಿ, ಮಕಾಳ, ಎಸ್.ಎಸ್. ಜ್ಯೋತಿ, ಎಫ್.ಟಿ. ಕುಳೆನೂರ, ವಿ.ಎಂ. ಕರ್ಜಗಿ, ಎಚ್.ಎನ್. ಬಸನಗೌಡರ, ಎಂ.ಬಿ. ಬೆನಕಣ್ಣನವರ, ಎಸ್.ಬಿ. ಲಕ್ಕಣ್ಣನವರ, ಎನ್.ಎಸ್. ಪಾಟೀಲ, ಎಸ್.ಎಚ್. ಪಾಟೀಲ, ಎಸ್.ಬಿ. ಮೂಲೇರ, ಕಲ್ಮಠ, ಎಸ್.ಎಂ. ಸಂಕಮ್ಮನವರ, ವಿ.ಎಂ. ಮನ್ನಂಗಿ, ಶಿಡೇನೂರ ಮತ್ತಿತರರು ಉಪಸ್ಥಿತರಿದ್ದರು.ವಚನ ಗಾಯನ ಸ್ಪರ್ಧೆಯ ಫಲಿತಾಂಶ: ಕಿರಿಯ ಪ್ರಾಥಮಿಕ ವಿಭಾಗ: ಶ್ರದ್ಧಾ ಲಕ್ಕಣ್ಣವರ (ಪ್ರಥಮ), ಆರಾಧನಾ ಹರಪನಹಳ್ಳಿ (ದ್ವಿತೀಯ), ನಂದಾ ಕುರುವತ್ತಿ (ತೃತೀಯ) ಹಿರಿಯ ಪ್ರಾಥಮಿಕ ವಿಭಾಗ: ಕೃತಿಕಾ ನಾಯಕ (ಪ್ರಥಮ), ದೀಕ್ಷಿತಾ ಮಾವಿನತೋಪ (ದ್ವಿತೀಯ), ಸಿದ್ಧಾಂತ ಮಾಕಾಳ (ತೃತೀಯ) ಪ್ರೌಢಶಾಲಾ ವಿಭಾಗ: ಸ್ಫೂರ್ತಿ ಚಪ್ಪರದಲ್ಲಿಮಠ (ಪ್ರಥಮ), ನೀಲಮ್ಮ ಗಡೆದ (ದ್ವಿತೀಯ), ಬಿ. ಎಸ್. ರಶ್ಮಿ ಮತ್ತು ಸಂಜನಾ ಅಡಕೆ (ತೃತೀಯ)