ಕಡೂರುಕಡೂರು ಇತಿಹಾಸದಲ್ಲಿ ಇಂದು ಸುವರ್ಣ ದಿನ. ಪಟ್ಟಣದಲ್ಲಿ ತಾಲೂಕು ಆಡಳಿತದ ಸುಸಜ್ಜಿತ ನೂತನ ಕಟ್ಟಡ ₹16 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.
ಶಾಸಕ ಕೆ.ಎಸ್. ಆನಂದ್ । ₹16 ಕೋಟಿ ವೆಚ್ಚದ ನೂತನ ಪ್ರಜಾಸೌಧದ ಕಾಮಗಾರಿ
ಕನ್ನಡಪ್ರಭ ವಾರ್ತೆ ಕಡೂರುಕಡೂರು ಇತಿಹಾಸದಲ್ಲಿ ಇಂದು ಸುವರ್ಣ ದಿನ. ಪಟ್ಟಣದಲ್ಲಿ ತಾಲೂಕು ಆಡಳಿತದ ಸುಸಜ್ಜಿತ ನೂತನ ಕಟ್ಟಡ ₹16 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.
ಬುಧವಾರ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ₹16 ಕೋಟಿ ವೆಚ್ಚದ ನೂತನ ಪ್ರಜಾಸೌಧದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಮಹಾತ್ಮ ಗಾಂಧೀಜಿ 1827 ರಲ್ಲಿ ಕಡೂರಿಗೆ ಭೇಟಿ ನೀಡಿದ್ದರ ಸ್ಮರಣಾರ್ಥ ಸೌಧ ನಿರ್ಮಿ ಸುತ್ತಿದ್ದು ಗುತ್ತಿಗೆದಾರರು 12 ತಿಂಗಳಲ್ಲಿ ನಿರ್ಮಿಸಿ ನೀಡಿದಲ್ಲಿ 2027ರ ಆಗಸ್ಟ್ 18ಕ್ಕೆ ಗಾಂಧೀಜಿ ಭೇಟಿಗೆ ನೂರರ ಸಂಭ್ರಮವನ್ನು ಮುಖ್ಯಮಂತ್ರಿಗಳನ್ನು ಕರೆಸಿ ಪ್ರಜಾಸೌಧ ಲೋಕಾಪರ್ಣೆಗೊಳಿಸಲಾಗುವುದು ಎಂದರು. ಅಲ್ಲದೆ ಅನೇಕ ಇಲಾಖೆಗಳಿಗೆ ಜಾಗವಿಲ್ಲದ ಕಾರಣ ಈ ಕಟ್ಟಡದಲ್ಲಿ ಕಚೇರಿಗಳಿಗೆ ಜಾಗ ನೀಡಲಾಗುವುದು. ವಾಹನ ಸಂಚಾರದ ದಟ್ಟಣೆ ನಿಯಂತ್ರಿಸಲು 30 ಅಡಿಗೆ ರಸ್ತೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಮುಂದೆ ತಾಪಂ ಮತ್ತು ನೂತನ ನ್ಯಾಯಾಲಯದ ಹೊಸ ಕಟ್ಟಡಕ್ಕೆ ಅನುದಾನ ತರಲಾಗುವುದು. ಪದವಿ ಕಾಲೇಜು ನಿರ್ಮಾಣಕ್ಕೆ ಹಣವಿದ್ದು ಚಿಕ್ಕಮಗಳೂರು ರಸ್ತೆಯಲ್ಲಿ ಕಟ್ಟಡ ನಿರ್ಮಿಸಲಾಗುವುದು. ಪಟ್ಟಣದ ಅಭಿವೃದ್ದಿ ಹಿನ್ನಲೆಯಲ್ಲಿ ಬಿ.ಎಚ್. ರಸ್ತೆ ಕೆ.ಆರ್. ಎಸ್. ಆಸ್ಪತ್ರೆಯಿಂದ ಬನಶಂಕರಿ ಛತ್ರದವರೆಗೆ ₹39 ಕೋಟಿ ವೆಚ್ಚದಲ್ಲಿ ರಸ್ತೆ ವಿಸ್ತರಣೆ. ಪಟ್ಟಣಗಳ ಅಭಿವೃದ್ಧಿಗೆ ಕಡೂರು -ಬೀರೂರು ಪುರಸಭೆಗೆ ತಲಾ ₹4 ಕೋಟಿ ನೀಡಲಾಗಿದೆ ಎಂದರು.
ತರೀಕೆರೆ ಉಪವಿಭಾಗಾಧಿಕಾರಿ ಮಾತನಾಡಿ ಈ ಪ್ರಜಾಸೌಧ ನಿರ್ಮಾಣಕ್ಕೆ ಕಾರಣರಾದ ಶಾಸಕ ಕೆ. ಎಸ್. ಆನಂದ್ ಅವರು ದೂರ ದೃಷ್ಟಿಉಳ್ಳವರು. ತಾಲೂಕು ಆಡಳಿತದ ಪರವಾಗಿ ಅವರಿಗೆ ಅಭಿನಂದಿಸುತ್ತೇನೆ ಎಂದರು.ತಹಸೀಲ್ದಾರ್ ಸಿ. ಎಸ್. ಪೂರ್ಣಿಮಾ ಮಾತನಾಡಿ ತಾಲೂಕು ಆಡಳಿತದ ಸುಲಲಿತ ಕರ್ತವ್ಯ ನಿರ್ವಹಣೆ ಹಾಗೂ ಪ್ರಜೆ ಗಳಿಗೂ ಅನುಕೂಲವಾಗಲು ಪ್ರಜಾ ಸೌಧಕ್ಕೆ ಚಾಲನೆ ನೀಡಲಾಗಿದೆ. ಶಾಸಕರಿಗೆ ತಾಲೂಕು ಆಡಳಿತದ ಪರವಾಗಿ ಕೃತಜ್ಞತೆ ಅರ್ಪಿಸುತ್ತೇವೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ , ಶಿರಸ್ತೇದಾರ್ ನಾಗರತ್ನ, ಗ್ಯಾರಂಟಿ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್, ಪಂಚನಹಳ್ಳಿ ಪ್ರಸನ್ನ, ತೋಟದಮನೆ ಮೋಹನ್, ಈರಳ್ಳಿ ರಮೇಶ್, ಯಾಸೀನ್, ಸೋಮಶೇಖರ್, ಅಶೋಕ್, ಎಸ್.ಎಲ್.ರುದ್ರೇಗೌಡ, ಕಂದಾಯ ಇಲಾಖೆಯ ಅಧಿಕಾರಿ ನೌಕರರು ಮತ್ತಿತರರು ಇದ್ದರು.2ಕೆಕೆಡಿಯು 1. ಕಡೂರು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ 16 ಕೋಟಿ ರೂ ವೆಚ್ಚದ ಪ್ರಜಾಸೌಧ ಕಟ್ಟಡ ನಿರ್ಮಾ ಣಕ್ಕೆ ಶಾಸಕ ಕೆ. ಎಸ್. ಆನಂದ್ ಚಾಲನೆ ನೀಡಿದರು.