ಜಾರಕಿಹೊಳಿ ಕುಟುಂಬವೆಂದರೆ ದೇಶವೇ ತಿರುಗಿ ನೋಡುತ್ತಿದೆ

| Published : Nov 21 2025, 03:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಗೋಕಾಕ ಜಾರಕಿಹೊಳಿ ಕುಟುಂಬವೆಂದರೆ ಇಂದು ದೇಶವೇ ತಿರುಗಿ ನೋಡುವಂತಾಗಿದೆ. ಗುರುಹಿರಿಯರ ಆಶೀರ್ವಾದ, ಸಹಸ್ರಾರು ಅಭಿಮಾನಿಗಳ ಪ್ರೀತಿ, ಕಾರ್ಯಕರ್ತರ ವಿಶ್ವಾಸ ನಮ್ಮ ಕುಟುಂಬಕ್ಕೆ ಬೆಂಬಲವಾಗಿದೆ ಎಂದು ಲಕ್ಷ್ಮೀ ಎಜುಕೇಶನ್‌ ಟ್ರಸ್ಟ್ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಜಾರಕಿಹೊಳಿ ಕುಟುಂಬವೆಂದರೆ ಇಂದು ದೇಶವೇ ತಿರುಗಿ ನೋಡುವಂತಾಗಿದೆ. ಗುರುಹಿರಿಯರ ಆಶೀರ್ವಾದ, ಸಹಸ್ರಾರು ಅಭಿಮಾನಿಗಳ ಪ್ರೀತಿ, ಕಾರ್ಯಕರ್ತರ ವಿಶ್ವಾಸ ನಮ್ಮ ಕುಟುಂಬಕ್ಕೆ ಬೆಂಬಲವಾಗಿದೆ ಎಂದು ಲಕ್ಷ್ಮೀ ಎಜುಕೇಶನ್‌ ಟ್ರಸ್ಟ್ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ನಗರದ ಶ್ರೀ ಮಹಾಲಕ್ಷ್ಮೀ ದೇವಾಲಯದ ಸಭಾಭವನದಲ್ಲಿ ನಡೆದ ತಮ್ಮ 25ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೊಡ್ಡಪ್ಪ, ಚಿಕ್ಕಪ್ಪ ಹಾಗೂ ತಂದೆಯ ಮಾರ್ಗದರ್ಶನದಲ್ಲಿ ಜನಸೇವೆಯ ಹಾದಿಯಲ್ಲೇ ನಡೆದು ಬಂದಿದ್ದೇವೆ. ನೀವೆಲ್ಲರೂ ನೀಡುತ್ತಿರುವ ಬೆಂಬಲವೇ ನಮ್ಮ ಕುಟುಂಬವನ್ನು ಎತ್ತರಕ್ಕೆ ಏರಿಸಿದೆ ಎಂದು ಹೇಳಿದರು.

ಜಾರಕಿಹೊಳಿ ಕುಟುಂಬದ ಮೇಲೆ ಇಷ್ಟೊಂದು ಪ್ರೀತಿ, ಅಭಿಮಾನ ಮತ್ತು ಬೆಂಬಲ ತೋರಿದ್ದಕ್ಕೆ ಕೃತಜ್ಞತೆ ತಿಳಿಸಿದರು. ದೇಶದ ಇತಿಹಾಸದಲ್ಲೇ ಒಂದು ಕುಟುಂಬದಿಂದ ನಾಲ್ವರು ಶಾಸಕರು, ಒಬ್ಬರು ಸಂಸದರು, ಜೊತೆಗೆ ಬಿಡಿಸಿಸಿ ಬ್ಯಾಂಕ್‌ಗೆ ಇಬ್ಬರು ನಿರ್ದೇಶಕರಾಗಿರುವುದು ನಮ್ಮ ಅಭಿಮಾನಿಗಳು, ಕಾರ್ಯಕರ್ತರು, ಜನರ ಆರ್ಶೀವಾದದ ಫಲ. ನಮ್ಮ ಕುಟುಂಬಕ್ಕೆ ತೋರಿರುವ ಇಷ್ಟೊಂದು ಪ್ರೀತಿಯನ್ನು ಬೇರೆ ಕಡೆ ಎಲ್ಲೂ ಯಾರು ಕೊಟ್ಟಿಲ್. ಚಿಕ್ಕಪ್ಪ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಸಮಾನತೆ ತತ್ವದಡಿ ಯಾವುದೇ ಜಾತಿ, ಜನಾಂಗಕ್ಕೆ ಅನ್ಯಾಯ ಮಾಡದೇ ನಮ್ಮ ಕಾರ್ಯಪಡೆಯೊಂದಿಗೆ ಮುಂದಿನ ದಿನಗಳಲ್ಲಿ ಉತ್ತಮ ಸಂಘಟನೆ ಮಾಡಲಾಗುವುದು. ಯುವಕರ ಶಕ್ತಿಯಿಂದ ಜಿಲ್ಲೆ ಮತ್ತು ರಾಜ್ಯದ ಎದುರು ಉತ್ತಮ ಕಾರ್ಯ ಮಾಡಿ ತೋರಿಸೋಣ ಎಂದರು.ಲಕ್ಷ್ಮೀ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ ಅಧ್ಯಕ್ಷತೆ ವಹಿಸಿದ್ದರು. ಸಾನ್ನಿಧ್ಯವನ್ನು ಗೋಕಾಕ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಅಂಕಲಗಿ-ಕುಂದರಗಿ ಮಠದ ಅಮರಸಿದ್ಧೇಶ್ವರ ಸ್ವಾಮೀಜಿ ವಹಿಸಿದ್ದರು. ಘಟಪ್ರಭಾ ಗುಬ್ಬಲಗುಡ್ಡದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಭಾಗೋಜಿಕೊಪ್ಪ-ರಂಗಾಪೂರದ ಮುರುಘೇಂದ್ರ ಶಿವಾಚಾರ್ಯರು, ಸುಣಧೋಳಿಯ ಶಿವಾನಂದ ಸ್ವಾಮೀಜಿ, ಕಕಮರಿ ಮಠದ ಗುರುಲಿಂಗ ಜಂಗಮ ಸ್ವಾಮೀಜಿ ಸೇರಿ ಹಲವು ಮಠಾಧೀಶರು ಉಪಸ್ಥಿತರಿದ್ದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕ ರಾಹುಲ ಜಾರಕಿಹೊಳಿ, ಗೋಕಾಕ-ಅರಭಾವಿ ಕ್ಷೇತ್ರದ ಮುಖಂಡರು, ಚುನಾಯಿತ ಸದಸ್ಯರು, ಸಹಕಾರಿ ಮುಖಂಡರು, ವಿವಿಧ ಸಮುದಾಯದ ಪ್ರಮುಖರು ಸೇರಿದಂತೆ ಹಲವರು ಸರ್ವೋತ್ತಮ ಜಾರಕಿಹೊಳಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.