ವಂದೇ ಮಾತರಂ ಗೀತೆಯ ಪಯಣ ಅವಿಸ್ಮರಣೀಯ

| Published : Nov 08 2025, 01:03 AM IST

ಸಾರಾಂಶ

ಭಾರತೀಯರ ಜನಮಾನಸದಲ್ಲಿ ಅಚ್ಚಳಿಯದ ವಂದೇ ಮಾತರಂ ಗೀತೆಯ ಪಯಣ ಅವಿಸ್ಮರಣೀಯ. ಬಂಕಿಮ ಚಂದ್ರ ಚಟರ್ಜಿಯವರ ಸ್ಫೂರ್ತಿ, ರವೀಂದ್ರನಾಥ ಟಾಗೋ ರರ ಗಾಯನ ಮಹತ್ವದ್ದಾಗಿದೆ ಎಂದು ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ ಶೆಟ್ಟಿ ಹೇಳಿದರು.

ಚಿಕ್ಕಮಗಳೂರು: ಭಾರತೀಯರ ಜನಮಾನಸದಲ್ಲಿ ಅಚ್ಚಳಿಯದ ವಂದೇ ಮಾತರಂ ಗೀತೆಯ ಪಯಣ ಅವಿಸ್ಮರಣೀಯ. ಬಂಕಿಮ ಚಂದ್ರ ಚಟರ್ಜಿಯವರ ಸ್ಫೂರ್ತಿ, ರವೀಂದ್ರನಾಥ ಟಾಗೋ ರರ ಗಾಯನ ಮಹತ್ವದ್ದಾಗಿದೆ ಎಂದು ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ ಶೆಟ್ಟಿ ಹೇಳಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ''''''''ವಂದೇ ಮಾತರಂ'''''''' ಗೀತೆ 150ನೇ ವರ್ಷದ ಸಂಭ್ರ ಮಾಚರಣೆ ಅಂಗವಾಗಿ ಕಚೇರಿ ಮುಂಭಾಗದಲ್ಲಿ ಕಾರ್ಯಕರ್ತರು ರಾಷ್ಟ್ರ ದ್ವಜಾಹಿಡಿದು ವಂದೇ ಮಾತರಂ ಗೀತೆ ಗಾಯನ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಪ್ರಸಕ್ತ ಸಾಲಿನಲ್ಲಿ ದೇಶ ಹಲವಾರು ಇತಿಹಾಸಗಳ ಸಂಭ್ರಮ ಆಚರಿಸುತ್ತಿವೆ. ಆರ್‌ಎಸ್‌ಎಸ್ ಶತಾಬ್ದಿ, ವಂದೇ ಮಾತರಂ ಗೀತೆಗೆ 150 ರ ಸಂವತ್ಸರ ಹಾಗೂ ಸರ್ದಾರ್ ವಲ್ಲಬಾಯ್ ಪಟೇಲ್ ಜಯಂತಿ ಪ್ರಸ್ತುತ ಕಾಲಮಾನದಲ್ಲಿ ನಾವೆಲ್ಲರೂ ಆಚರಿಸುತ್ತಿರುವುದು ಖುಷಿಯ ಸಂಗತಿ ಎಂದು ಹೇಳಿದರು.ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದು ಜನಸಾಮಾನ್ಯರ ಮೂಲಬೇಡಿಕೆಗಳನ್ನು ಈಡೇರಿಸಿ ಪ್ರಶಂಸೆ ಗೆ ಪಾತ್ರವಾಗಿದೆ. ಅಲ್ಲದೇ ಸಮಸ್ತ ಹಿಂದೂಬಾಂಧವರ ಬಹುದಿನಗಳ ಕನಸಾದ ಶ್ರೀರಾಮ ಮಂದಿರವನ್ನು ನಿರ್ಮಾಣಗೊಳಿಸಿದೆ. ಜೊತೆಗೆ ಸ್ವದೇಶಿ ಉತ್ಪನ್ನ, ಬಳಕೆ ಹಾಗೂ ಖರೀದಿಯಲ್ಲಿ ಪ್ರತಿಯೊಬ್ಬರು ತೊಡಗಿಸಿ ಕೊಂಡು ಆತ್ಮನಿರ್ಭಾರವೆಂಬ ಕರೆಗೆ ಬದ್ಧರಾಗಬೇಕು ಎಂದರು.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಂದೇ ಗೀತೆ ಆಲನೆಯಿಂದ ಒಂದು ಕ್ಷಣ ಶರೀರ ದೇಶಭಕ್ತಿಯತ್ತ ಒಲುಮೆ ಹೊಂದಲಿದೆ. ಅಂತ ಶಕ್ತಿ ವಂದೇ ಮಾತರಂ ಗೀತೆಯ ಸಾರಾಂಶ ಜನರನ್ನು ಸೆಳೆಯುತ್ತವೆ ಎಂದು ಹೇಳಿದರು.ಇಡೀ ವಿಶ್ವದಲ್ಲಿ ವಂದೇ ಮಾತರಂ ಗೀತೆ ಎಲ್ಲರೂ ಒಗ್ಗೂಡಿಸುವ ಶಕ್ತಿಯಿದೆ. ಆದರೆ ಸ್ವಾತಂತ್ರ್ಯ ಪೂರ್ವದ ನಂತರ ಕಾಂಗ್ರೆಸ್ ಅಧಿಕಾರ ರಾಜ್ಯಗಳಲ್ಲಿ ವಂದೇ ಮಾತರಂ ಗೀತೆ ನಿಷೇಧಕ್ಕೆ ಮುಂದಾಗಿ ದ್ದವು. ಈಚೆಯ 2017ರಲ್ಲಿ ಓವೈಸಿ ಕೂಡಾ ಆಂಧ್ರ ಪ್ರದೇಶದಲ್ಲಿ ಗೀತೆ ನಿಷೇಧಕ್ಕೆ ಪಣ ತೊಟ್ಟಿದ್ದು ಎಲ್ಲಾ ಏರುಪೇರುಗಳ ನಡುವೆ ಇಂದು ಬೃಹದಾಕಾರವಾಗಿ ಬೆಳೆದಿದೆ ಎಂದರು.ಕೇಂದ್ರದಲ್ಲಿ ನರೇಂದ್ರ ಮೋದಿ ಆಡಳಿತದಲ್ಲಿ ವಂದೇ ಮಾತರಂ ಗೀತೆ ಹೆಚ್ಚಿನ ಒತ್ತು ನೀಡಿ ದೇಶದ ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಗೀತೆ ಕಡ್ಡಾಯಗೊಳಿಸಿ, ರಾಷ್ಟ್ರಪ್ರೇಮ ಸಂಕೇತವಾಗಿ ಜನಮಾನಸದಲ್ಲಿ ಉಳಿಯುವಂತೆ ಮಾಡಿತು ಎಂದು ತಿಳಿಸಿದರು.ಇದೇ ವೇಳೆ ಶಿಕ್ಷಕಿ ಅಕ್ಷತ ಹೆಗ್ಡೆ ಅವರಿಂದ ವಂದೇ ಮಾತರಂ ಗೀತಗಾಯನ ನಡೆಯಿತು. ಈ ಸಂದ ರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕನಕರಾಜ್‌ ಅರಸ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಸಂತ ಅನಿಲ್ ಕುಮಾರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗ ವೆಂಕಟೇಶ್, ಎಸ್ಟಿ ಮೋರ್ಚಾ ಅಧ್ಯಕ್ಷ ನಂದೀಶ್ ಮದ ಕರಿ, ನಗರಸಭೆ ಸದಸ್ಯರಾದ ರೂಪಾ, ಸುಜಾತಾ, ಮುಖಂಡರಾದ ಬಸವರಾಜ್, ಸಂತೋಷ್ ಕೋಟ್ಯಾ ನ್, ವೀಣಾಶೆಟ್ಟಿ, ಎಚ್.ಕೆ.ಕೇಶವಮೂರ್ತಿ, ಸಚಿನ್‌ಗೌಡ ಮತ್ತಿತರರು ಹಾಜರಿದ್ದರು.