ನಾವು ನಮ್ಮ ದೈನಂದಿನ ಬದುಕಿನಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಿ ಅಭಿಮಾನ ಮೆರೆಯಬೇಕು ಎಂದು ತಹಸೀಲ್ದಾರ ಎಂ.ಬಸವರಾಜ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ

ಕನ್ನಡಪ್ರಭ ವಾರ್ತೆ ಹುಣಸಗಿ

ನಾವು ನಮ್ಮ ದೈನಂದಿನ ಬದುಕಿನಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಿ ಅಭಿಮಾನ ಮೆರೆಯಬೇಕು ಎಂದು ತಹಸೀಲ್ದಾರ ಎಂ.ಬಸವರಾಜ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ಕೇವಲ ಒಂದು ಭಾಷೆಯಲ್ಲ, ಅದು ನಮ್ಮ ಬದುಕಿನ ಉಸಿರಾಗಿದೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ, ಸಾಹಿತ್ಯ ಪರಂಪರೆ ಹಾಗೂ ವಿಶಿಷ್ಟ ಸಾಂಸ್ಕೃತಿಕ ಹಿನ್ನೆಲೆಯಿದೆ. ನಾವು ನಮ್ಮ ದೈನಂದಿನ ಬದುಕಿನಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಿ ಅಭಿಮಾನ ಮೆರೆಯಬೇಕು ಎಂದು ತಿಳಿಸಿದರು.

ಶಿಕ್ಷಕ ಸಾಹೇಬಗೌಡ ಬಿರಾದಾರ ಉಪನ್ಯಾಸ ನೀಡಿ, ಕನ್ನಡ ಭಾಷೆ, ನಾಡು-ನುಡಿಯ ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ. ಕನ್ನಡ ರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತವಾಗದೆ, ಕನ್ನಡದ ಬಳಕೆ ಮತ್ತು ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿ, ಕನ್ನಡದ ಉಳಿವು ಹಾಗೂ ಬೆಳವಣಿಗೆಗಾಗಿ ಕನ್ನಡಿಗರಲ್ಲಿ ಭಾಷಾಭಿಮಾನ ಮತ್ತು ಒಗ್ಗಟ್ಟು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಚದುರಂಗ ಆಟದಲ್ಲಿ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮರೆಮ್ಮ, ಸುಚತ್ ಕುಮಾರ್, ವೈಷ್ಣವಿ, ಸಾವಿತ್ರಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಮರಲಿಂಗಪ್ಪ ನಾಟೇಕರ, ತಾ.ಪಂ.ಇಒ ಬಸಣ್ಣ ನಾಯಕ, ಪಶುವೈದ್ಯಾಧಿಕಾರಿ ಮಹೇಬೂಸಾಹೇಬ ಖಾಜಿ, ಅಪರಾಧ ವಿಭಾಗದ ಪಿಎಸ್ಐ ಭಾಗಣ್ಣ ಸೇರಿದಂತೆ ಶಿಕ್ಷಕರು ಹಾಗೂ ಕನ್ನಡಾಭಿಮಾನಿಗಳು ಇದ್ದರು. ವೆಂಕಟೇಶ ಮರಟಗೇರಿ ಸ್ವಾಗತಿಸಿದರು. ಶಿಕ್ಷಕ ಶಿವಾನಂದ ತೋಟದ ನಿರೂಪಿಸಿದರು. ಶಿಕ್ಷಕ ನಾಗನಗೌಡ ಬಿರಾದಾರ ವಂದಿಸಿದರು.

*ಮೆರವಣಿಗೆ: ಪಟ್ಟಣದ ಮಹಾಂತ ಸ್ವಾಮಿ ವೃತ್ತದಿಂದ ಸಾರೋಟದಲ್ಲಿ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರವನ್ನು ವಿವಿಧ ಕಲಾ ವಾದ್ಯಗಳೊಂದಿಗೆ ಬಸವೇಶ್ವರ ವೃತ್ತದದವರಿಗೂ ಮೆರವಣಿಗೆ ಮಾಡಲಾಯಿತು. ಪಪಂ ಸದಸ್ಯರಾದ ಶರಣು ಸಾಹುಕಾರ ದಂಡಿನ, ಸಿದ್ರಾಮಪ್ಪ ಮುದಗಲ್, ಕಾಶೀಂಸಾಬ ಟೊಣ್ಣೂರು ಹಾಗೂ ಬಸವರಾಜ್ ಸಜ್ಜನ್, ಮಹಾದೇವಿ ಬೇವಿನಾಳಮಠ, ಪಪಂ ಮುಖ್ಯಾಧಿಕಾರಿ ಅರುಣಕುಮಾರ ಚವ್ಹಾಣ ಸೇರಿದಂತೆ ವಿವಿಧ ಮುಖಂಡರು ಇದ್ದರು. ಹುಣಸಗಿ ಕರವೇ ಕಚೇರಿಯಲ್ಲಿ ಕನ್ನಡ ಕರವೇ ತಾಲೂಕು ಅಧ್ಯಕ್ಷ ಬಸವರಾಜ್ ಚನ್ನೂರ ಧ್ವಜಾರೋಹಣ ನೆರವೇರಿಸಿದರು.