ಆಸ್ಟ್ರೇಲಿಯಾದಲ್ಲಿ ಕಿಕ್ಕೇರಿ ಕೃಷ್ಣಮೂರ್ತಿ ಮೊಳಗಿಸಿದ ಕನ್ನಡದ ಕಹಳೆ

| Published : Nov 10 2025, 12:45 AM IST

ಸಾರಾಂಶ

ತನಗೆ ಗೊತ್ತಿರುವುದು ಸುಗಮ ಸಂಗೀತ ಗಾಯನ, ಗಾಯನ ಸರಸ್ವತಿ ಸೇವೆ. ಇಲ್ಲಿನ ಕನ್ನಡಿಗರು ಕನ್ನಡ ನಾಡು, ನುಡಿ ಕುರಿತು ಇಟ್ಟಿರುವ ಅದಮ್ಯ ಪ್ರೀತಿ ಮರೆಯಲಾಗದು. ಇಲ್ಲಿನ ಶಾಲಾ ಮಕ್ಕಳಿಗೆ ಉಚಿತವಾಗಿ ಕನ್ನಡ ಪಠ್ಯ ಪುಸ್ತಕ, ಸುಗಮ ಸಂಗೀತ ತರಬೇತಿ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಕಿಕ್ಕೇರಿ ಹೆಸರು, ಕಿಕ್ಕೇರಿಯವರಾದ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಗೀತೆಗಳನ್ನು ವಿದೇಶದ ಪ್ರತಿಯೊಬ್ಬರ ಬಾಯಿಯಲ್ಲಿ ಗುನುಗುವಂತೆ ಮಾಡಿ ವಿಶ್ವವ್ಯಾಪಿಗೊಳಿಸಲು ತನ್ನ ಉಸಿರು ಇರುವವರೆಗೆ ಶ್ರಮಿಸುತ್ತೇನೆ ಎಂದು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.

ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಶನಿವಾರ ವೆಸ್ಟರ್ನ್ ಕನ್ನಡ ಸಂಘದವರು ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನೀಡಿದ ವಿಶ್ವ ಕನ್ನಡ ಕಣ್ಮಣಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಕವಿ, ಸಾಹಿತಿಗಳು ಜನಿಸಿದ ಗ್ರಾಮ ತಮ್ಮದಾದರೂ, ಸವಲತ್ತು ಸೌಲಭ್ಯಗಳಿಲ್ಲದ ಕುಗ್ರಾಮದಂತಹ ಹಳ್ಳಿ ತಮ್ಮ ಊರಾಗಿದೆ. ಸಂಗೀತದ ಮನಸ್ಸು ಬೆಂಗಳೂರು ಸೇರಿಸಿತು. 25ಕ್ಕೂ ಹೆಚ್ಚು ದೇಶಗಳ್ನು ಸುತ್ತಿದರೂ ತನಗೆ ತವರಿನ ಕನ್ನಡಿಗರ ಪ್ರೀತಿ ಮರೆಯಲಾಗದು ಎಂದರು.

ತನಗೆ ಗೊತ್ತಿರುವುದು ಸುಗಮ ಸಂಗೀತ ಗಾಯನ, ಗಾಯನ ಸರಸ್ವತಿ ಸೇವೆ. ಇಲ್ಲಿನ ಕನ್ನಡಿಗರು ಕನ್ನಡ ನಾಡು, ನುಡಿ ಕುರಿತು ಇಟ್ಟಿರುವ ಅದಮ್ಯ ಪ್ರೀತಿ ಮರೆಯಲಾಗದು. ಇಲ್ಲಿನ ಶಾಲಾ ಮಕ್ಕಳಿಗೆ ಉಚಿತವಾಗಿ ಕನ್ನಡ ಪಠ್ಯ ಪುಸ್ತಕ, ಸುಗಮ ಸಂಗೀತ ತರಬೇತಿ ನೀಡಲಾಗಿದೆ. ಮುಂದಿನ ಇಲ್ಲಿನ ರಾಜ್ಯೋತ್ಸವ ಸಮಾರಂಭದಲ್ಲಿ 200 ಜನರಿಂದ ಕನ್ನಡವೇ ಸತ್ಯ ಮತ್ತಿತರ ಗೀತೆ ಹಾಡಿಸಲಾಗುವುದು ಎಂದು ಹುರಿದುಂಬಿಸಿದರು.

ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ಲಿಖಿತ್ ಕೃಷ್ಣ ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಕೋಡಗನ ಕೋಳಿ ನುಂಗಿತ್ತಾ, ಹೇಳಿದ್ದು ಸುಳ್ಳಾಗಬಹುದು, ಮಲೆನಾಡಿನ್ ಮೂಲೆನಾಗೆ ಇತ್ತೊಂದು ಸೋಮನಳ್ಳಿ, ಕನ್ನಡ ರೋಮಾಂಚನವೀ ಕನ್ನಡ ಜೊತೆಗೆ ಮಲ್ಲಿಗೆ ಕವಿ ಕೆ.ಎಸ್‌.ನರಸಿಂಹಸ್ವಾಮಿ ಗೀತೆಗಳನ್ನು ಹಾಡಿದರು. ಅಸ್ಟ್ರೇಲಿಯಾ ಕನ್ನಡಿಗರೊಂದಿಗೆ ಹಾಡಿಸಿ ಕನ್ನಡದ ಕಂಪಿನ ಕಹಳೆ ಮೊಳಗಿಸಿದರು.

ಸಂಘದ ಶಂಕರ ಅಳೆಪಡಿ, ದೇವರಾಜ್ ಗೌಡ, ಗುರು ಗುಪ್ತಾ, ಅನಲೆ ಶ್ರೀರಾಮ್, ಪ್ರಸನ್ನ ಗೌಡ,ನಟರಾಜ ಕಳಲೆ, ಶಶಿಕಿರಣ ರಾಮಾಂಜನೇಯ, ಸುರೇಶ, ಸಿದ್ದಗಂಗಯ್ಯ, ಸ್ಮಿತಾ ಮಹೇಶ್, ಸಂದೀಪ್, ಶಿವರುದ್ರಯ್ಯ, ವೀಣಾ ಈಶ್ವರಯ್ಯ, ಎಸ್. ಚಂದ್ರು, ಚಿಕ್ಕಮಗಳೂರು ಪ್ರಸನ್ನಗೌಡ, ಶಂಕರ್, ಕೆ. ಗೋವಿಂದ್, ಕವಿ ಮಮತಾ ಅರಸೀಕೆರೆ, ಹರ್ಷ ಸಾಲಿಮಠ್, ಪದ್ಮಾಮುಕುಂದರಾಜ್ ಇದ್ದರು.