ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು ಎಂಬು ಆಗ್ರಹ ಬಲವಾಗಿದೆ. ನೀರಾವರಿ ಯೋಜನೆಯಲ್ಲಿ ಸಿಂಹಪಾಲು ಪಡೆಯಬೇಕಿದ್ದ ಬರಪೀಡಿತ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ವ್ಯಾಪ್ತಿಯ ಬೆರಳೆಣಿಕೆ ರೈತರು ಬಂದಷ್ಟು ಬರಲಿ ಕೆರೆಗಳಿಗೆ ನೀರು ಎಂದು ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ.
-ಡಿಪಿಆರ್ ಆಗಿದ್ದು, ಇನ್ನೂ ಹತ್ತಾರು ಹೆಜ್ಜೆ ದಾಟಿ ಕೆರೆಗೆ ನೀರು ಬರಬೇಕಿದೆ
-ಕೊಪ್ಪಳ ಏತ ನೀರಾವರಿ ಯೋಜನೆಯಡಿ ನೆರೆಯ ಜಿಲ್ಲೆಗಳಿಗೆ ಸಿಂಹಪಾಲು-ಗದಗ ಜಿಲ್ಲೆಯ ತಾಲೂಕುಗಳ ಬೆರಳಣಿಕೆ ಜಮೀನಿಗೆ ನೀರು
ಎಸ್.ಎಂ. ಸೈಯದ್ಕನ್ನಡಪ್ರಭ ವಾರ್ತೆ ಗಜೇಂದ್ರಗಡ
ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು ಎಂಬು ಆಗ್ರಹ ಬಲವಾಗಿದೆ. ನೀರಾವರಿ ಯೋಜನೆಯಲ್ಲಿ ಸಿಂಹಪಾಲು ಪಡೆಯಬೇಕಿದ್ದ ಬರಪೀಡಿತ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ವ್ಯಾಪ್ತಿಯ ಬೆರಳೆಣಿಕೆ ರೈತರು ಬಂದಷ್ಟು ಬರಲಿ ಕೆರೆಗಳಿಗೆ ನೀರು ಎಂದು ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ.ಕೃಷ್ಣ ಜಲ ವಿವಾದ ನ್ಯಾಯ ಮಂಡಳಿ-೨ ತನ್ನ ಅಂತಿಮ ತೀರ್ಪನ್ನು ನ.೨೯, ೨೦೧೩ರಲ್ಲಿ ಪ್ರಕಟಿಸಿತ್ತು. ಪರಿಣಾಮ ಕೃಷ್ಣಾ ಬೀ ಸ್ಕಿಂ ಮೂಲಕ ೨೦೧೩-೧೪ರಲ್ಲಿ ಕೊಪ್ಪಳ ಏತ ನೀರಾವರಿ ಅಡಿ ಅಂದಾಜು ೧೩ ಲಕ್ಷಕ್ಕೂ ಹೆಚ್ಚು ಎಕರೆ ಒಣ ಮತ್ತು ಬರಪೀಡಿತ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದ ಯೋಜನೆ ೨೦೧೩-೧೪ರಿಂದ ವೇಗ ಪಡೆದುಕೊಂಡಿತು. ಆದರೆ ನೀರಿನ ಮೂಲಗಳಿಲ್ಲದ ಗಜೇಂದ್ರಗಡ ಹಾಗೂ ರೋಣ ತಾಲೂಕಿಗೆ ಸಿಗಬೇಕಾದ ಪ್ರಾತಿನಿಧ್ಯ ಯೋಜನೆಯಲ್ಲಿ ಸಿಗಲಿಲ್ಲ ಎಂಬ ಚರ್ಚೆಗಳು ಈಗ ಮುನ್ನೆಲೆಗೆ ಬರುತ್ತಿವೆ. ಯೋಜನೆ ಅಡಿ ಉಳಿದ ಜಿಲ್ಲೆಗಳಿಗೆ ಅಧಿಕ ಆಧ್ಯತೆ ಸಿಕ್ಕರೆ ಗದಗ ಜಿಲ್ಲೆಗೆ ನಿರೀಕ್ಷಿತ ಪ್ರಮಾಣದಲ್ಲಿ ಸಿಕ್ಕಿಲ್ಲ ಎಂಬ ಆರೋಪಕ್ಕೆ ಅಂಕಿ, ಅಂಶಗಳು ಹೌದು ಎನ್ನುವ ಸಬೂಬು ನೀಡುತ್ತಿವೆ.
ಕೃಷ್ಣಾ ಬೀ ಸ್ಕಿಂ (ಮುಖ್ಯವಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ ಅಡಿಯಲ್ಲಿ) ಒಟ್ಟು ೫.೩೦ ಲಕ್ಷದಿಂದ ೫.೯೪ ಲಕ್ಷ ಹೆಕ್ಟರ್ (ಅಂದಾಜು ೧೩ ರಿಂದ ೧೫ ಲಕ್ಷ ಎಕರೆ) ಜಮೀನಿಗೆ ನೀರಾವರಿ ಕಲ್ಪಿಸುವ ಉದ್ಧೇಶವಿದೆ. ಯೋಜನೆಯಲ್ಲಿ ಗದಗ ಸೇರಿ ಇತರ ೭ ಜಿಲ್ಲೆಗಳ ಭೂಮಿಗೆ ನೀರು ಹಂಚಿಕೆಯಾಗಿದೆ. ಪರಿಣಾಮ ಜಿಲ್ಲೆಯ ಸುಮಾರು ೧೮ ಸಾವಿರದಿಂದ ೨೫ ಸಾವಿರ ಹೆಕ್ಟೇರ್ (ಸುಮಾರು ೪೫.೦೦೦ ರಿಂದ ೬೦ ಸಾವಿರ ಎಕರೆ) ಜಮೀನು ನೀರಾವರಿಗೆ ವ್ಯಾಪ್ತಿಗೆ ಒಳಪಡುತ್ತದೆ. ಆದರೆ ಉಳಿದ ಜಿಲ್ಲೆಗಳಾದ ವಿಜಯಪುರ-೧.೮೦ ಲಕ್ಷದಿಂದ ೨ ಲಕ್ಷ ಹೆಕ್ಟೇರ್, ಕಲಬುರಗಿ-೧.೨೦ ಲಕ್ಷ ಹೆಕ್ಟೇರ್, ಬಾಗಲಕೋಟೆ-೭೦ ಸಾವಿರದಿಂದ ೮೦ ಸಾವಿರ ಹೆಕ್ಟೇರ್, ಯಾದಗಿರಿ-೫೦,೦೦೦ ಹೆಕ್ಟೇರ್, ರಾಯಚೂರು-೪೦,೦೦೦ ಹಾಗೂ ಕೊಪ್ಪಳ-೨೫ ಸಾವಿರ ಹೆಕ್ಟೇರ್ ವ್ಯಾಪ್ತಿಗೆ ನೀರು ಬರಲಿದೆ. ಯೋಜನೆ ರೂಪಿಸುವಾಗ ಬರಪೀಡಿತ ಜಿಲ್ಲೆಯಾದ ಗದಗ ಹಾಗೂ ರೋಣ ಮತಕ್ಷೇತ್ರವನ್ನು ಮುಖ್ಯವಾಗಿ ಸೇರಿಸುವಲ್ಲಿ ಆಡಳಿತ ವಿಫಲವಾಯಿತಾ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿದೆ.ತಾಲೂಕಿನ ೧೯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಈಗಾಗಲೇ ಡಿಪಿಆರ್ ಆಗಿದೆ. ಮುಂದೆ ಪ್ರೋಸಿಡಿಂಗ್ ಆಗಬೇಕು, ಸರ್ಕಾರ ಆರ್ಡರ್ ಮಾಡಬೇಕು ಬಳಿಕ ಕ್ಯಾಬಿನೆಟ್ನಲ್ಲಿ ಒಪ್ಪಿಗೆ ಪಡೆದು, ಎಫ್ಡಿಗೆ (ಫೈನಾಶಿಯಲ್ ಡಿರ್ಪಾಟಮೆಂಟ್) ಎಸ್ಟಿಮೇಟ್ ಆಗಬೇಕು, ಎಆರ್ಸಿಯಲ್ಲಿ ಪ್ರಸೆಂಟ್ ಮಾಡಬೇಕು, ಟೆಂಡರ್ ಕರೆಯಬೇಕು, ತಾಂತ್ರಿಕ ಬಿಡ್ ಮತ್ತು ಫೈನಾನ್ಶಿಯಲ್ ಬಿಡ್ ಆಗಬೇಕು, ನಿಗಮಕ್ಕೆ ಕಳುಹಿಸಿ, ಅಪ್ರೋವ್ ಆದ ಮೇಲೆ ಗುತ್ತಿಗೆದಾರರು ಯಾರು ಎಂದು ಅಂತಿಮ ಅಗ್ರಿಮೆಂಟ್ ಆದ ಬಳಿಕ ಕೆಲಸ ಆರಂಭಿಸಬೇಕಿದೆ. ಒಂದೆರೆಡು ವರ್ಷದೊಳಗೆ ನೀರು ತುಂಬಿಸುವುದು ಅಸಾಧ್ಯ ಎಂಬುದು ಹೋರಾಟಗಾರರ ಅಭಿಪ್ರಾಯವಾದರೆ, ರಾಜ್ಯದಲ್ಲಿ ಸುಭದ್ರ ಸರ್ಕಾರವಿದ್ದು ತ್ವರಿತಗತಿಯಲ್ಲಿ ಯೋಜನೆ ಜಾರಿಯಾಗಿ ಕೆರೆ ತುಂಬಿಸುತ್ತೇವೆ ಎಂಬುದು ಆಡಳಿತದ ವಾದವಾಗಿದೆ.ನೆರೆಯ ಜಿಲ್ಲೆಗಳಲ್ಲಿ ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿ ಭಾಗಶಃ ಪೂರ್ಣವಾಗಿದೆ. ಆದರೆ ತಾಲೂಕಿಗೆ ಆದ ಅನ್ಯಾಯ ಸರಿಪಡಿಸಲು ಪಕ್ಷಾತೀತವಾಗಿ ಸಾರ್ವಜನಿಕರು ಒತ್ತಡ ಹೇರಿದರೆ ಮಾತ್ರ ಒಂದೆರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡು ಕೆರೆಗಳಿಗೆ ನೀರು ಬರಬಹುದು. ನಿರ್ಲಕ್ಷ್ಯ ಮಾಡಿದರೆ ಈ ಯೋಜನೆ ಸಹ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳು ಹೆಚ್ಚಿವೆ.
ಎಂ.ಎಸ್. ಹಡಪದ, ಮಾಜಿ ಸದಸ್ಯ, ಪುರಸಭೆತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಗೆ ಈಗಾಗಲೇ ಡಿಪಿಆರ್ ಆಗಿದ್ದು, ಸರ್ಕಾರ ಮಟ್ಟದಲ್ಲಿ ಶೀಘ್ರಗತಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಿದ್ದು, ಕೆಲ ತಿಂಗಳಲ್ಲಿ ಕೆರೆಗಳಿಗೆ ನೀರು ತುಂಬುವ ಕಾರ್ಯಕ್ಕೆ ಚಾಲನೆ ಸಿಗಲಿದೆ.ಶಿವರಾಜ ಘೋರ್ಪಡೆ, ಕಾಂಗ್ರೆಸ್ ಮುಖಂಡರು