ಸಾರಾಂಶ
ಹೊಸಕೋಟೆ: ವಕೀಲಿ ವೃತ್ತಿ ಪ್ರಾರಂಭಿಸುವ ಯುವ ವಕೀಲರು ವಕೀಲಿ ವೃತ್ತಿಯನ್ನು ಸಮಾಜಮುಖಿಯಾಗಿ ಹಾಗೂ ಪ್ರಾಮಾಣಿಕವಾಗಿ ಕೈಗೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶ ಶ್ರೀಶೈಲ ಭೀಮಸೇನ ಬಗಾಡಿ ತಿಳಿಸಿದರು.
ಹೊಸಕೋಟೆ: ವಕೀಲಿ ವೃತ್ತಿ ಪ್ರಾರಂಭಿಸುವ ಯುವ ವಕೀಲರು ವಕೀಲಿ ವೃತ್ತಿಯನ್ನು ಸಮಾಜಮುಖಿಯಾಗಿ ಹಾಗೂ ಪ್ರಾಮಾಣಿಕವಾಗಿ ಕೈಗೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶ ಶ್ರೀಶೈಲ ಭೀಮಸೇನ ಬಗಾಡಿ ತಿಳಿಸಿದರು.
ತಾಲೂಕಿನ ಇಟ್ಟಸಂದ್ರ ಗ್ರಾಪಂ ವ್ಯಾಪ್ತಿಯ ಈಸ್ತೂರು ಗ್ರಾಮದಲ್ಲಿ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಕೆ.ನಾರಾಯಣಪುರದ ಸ್ಕೂಲ್ ಆಫ್ ಲಾ ಮತ್ತು ಕ್ರಿಸ್ತು ಜಯಂತಿ ಕಾನೂನು ಕಾಲೇಜು ಹಾಗೂ ಉನ್ನತ ಭಾರತ ಅಭಿಯಾನ, ಜಿಲ್ಲೆಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಹಾಗೂ ಸೇವಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಕಾನೂನು ಅರಿವು ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಅರಿತು ಅವರ ಭವಿಷ್ಯದ ವಕೀಲಿ ವೃತ್ತಿಯನ್ನು ಪ್ರಾಮಾಣಿಕ ಹಾಗೂ ಸಮಾಜಮುಖಿಯಾಗಿ ಕೈಗೊಳ್ಳಲು ನೆರವಾಗುತ್ತದೆ. ಎಂದರು.ಅವರಿಗೆ ಮಾನವ ಹಕ್ಕುಗಳು, ಮಾಹಿತಿ ಹಕ್ಕು, ಮಕ್ಕಳ ಹಕ್ಕುಗಳು, ಆಸ್ತಿಯ ಹಕ್ಕು, ಮೋಟಾರ್ ವಾಹನ ಕಾಯ್ದೆ, ಭೂ ವಿವಾದಗಳು, ಅಪರಾಧ ಪ್ರಕರಣಗಳು ಮತ್ತು ಹಿರಿಯ ನಾಗರಿಕ ಸೇವೆಗಳು ಹಾಗೂ ಮಹಿಳಾ ಸಬಲೀಕರಣದ ಕುರಿತಾದ ವಿವಿಧ ಸರ್ಕಾರಿ ಯೋಜನೆಗಳ ಉಚಿತ ಸೇವೆಯ ಬಗೆಗಿನ ವಿಚಾರಗಳನ್ನು ಗ್ರಾಮಸ್ಥರಿಗೆ ತಿಳಿಸಿಕೊಟ್ಟರು. ಅಲ್ಲದೆ ಗ್ರಾಮದ ವಿವಿಧ ಸಮಸ್ಯೆಗಳನ್ನು ಸಾರ್ವಜನಿಕರಿಂದ ತಿಳಿದು ಪ್ರಶ್ನೋತ್ತರ ಸಮಯದಲ್ಲಿ ಜನರ ಸಮಸ್ಯೆಗಳನ್ನು ಅರಿತು ಅದಕ್ಕೆ ಪರಿಹಾರೋಪಾಯಗಳನ್ನು ತಿಳಿಸಿಕೊಟ್ಟರು.
ಶಿಬಿರದಲ್ಲಿ ವಕೀಲ ರಾಜಕುಮಾರ್, ಸೂಲಿಬೆಲೆ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಸೋಮಶೇಖರ್, ಪಿಡಿಒ ಪುಷ್ಪಲತಾ, ಈಸ್ತೂರು ಶಾಲೆಯ ಮುಖ್ಯ ಶಿಕ್ಷಕಿ ರಮಾ ಮಂಜುಳಾ, ಅಂಗನವಾಡಿ ಕಾರ್ಯಕರ್ತೆ ಭಾರತಿ, ಕಾನೂನು ಕಾಲೇಜಿನ ಮುಖ್ಯಸ್ಥರಾದ ಡಾ.ಮಂಜುನಾಥ್, ಇಟ್ಟಸಂದ್ರ ಗ್ರಾಪಂ ಅದ್ಯಕ್ಷೆ ಸರೋಜಮ್ಮ ಜಯರಾಮ್, ಉಪಾಧ್ಯಕ್ಷೆ ನಾರಾಯಣಮ್ಮ ಚನ್ನಕೇಶವ, ಸದಸ್ಯರಾದ ಮುರಳಿ ಮೋಹನ್, ರಮೇಶ್, ಜಯರಾಮ್, ಎಂಪಿಸಿಎಸ್ ಅಧ್ಯಕ್ಷ ಕೇಶವ, ಕಾನೂನು ಶಿಬಿರದ ಯುಬಿಎ ಸಂಯೋಜಕ ಪ್ರೊ.ಚಂದ್ರಶೇಖರ್, ಪ್ರಾಧ್ಯಾಪಕರಾದ ರಮ್ಯ, ಡಾ.ವಿಜು ಮುಖಂಡರಾದ ವೆಂಕಟಸ್ವಾಮಿ, ಮುನೇಗೌಡ, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.ಫೋಟೋ: 13 ಹೆಚ್‌ಎಸ್‌ಕೆ 2 ಮತ್ತು 3
ಹೊಸಕೋಟೆ ತಾಲೂಕಿನ ಈಸ್ತೂರು ಗ್ರಾಮದಲ್ಲಿ ನಡೆದ ಕಾನೂನು ಅರಿವು ಹಾಗೂ ಕಾನೂನು ಸೇವಾ ಶಿಬಿರವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶ ಶ್ರೀಶೈಲ ಭೀಮಸೇನ ಬಗಾಡಿ ಉದ್ಘಾಟಿಸಿದರು.