ಭಗವದ್ಗೀತೆಯಲ್ಲಿದೆ ಜ್ಞಾನದ ಬೆಳಕು: ನರಸಿಂಹ ಕೋಣೆಮನೆ

| Published : Jan 06 2025, 01:02 AM IST

ಸಾರಾಂಶ

ನಾವೆಲ್ಲರೂ ಧರ್ಮ ಮಾರ್ಗದಲ್ಲಿ ನಡೆಯಬೇಕು. ಒಳಿತು, ಕೆಡುಕುಗಳನ್ನು ವಿಭಾಗ ಮಾಡಿ, ನಡೆಯುವ ಮನಸ್ಥಿತಿ ನಮಗೆ ಬರುವಂತಾದರೆ ಇಂಥ ಕಾರ್ಯಕ್ರಮಗಳು ಯಶಸ್ವಿಯಾದಂತೆ.

ಯಲ್ಲಾಪುರ: ಕೃಷ್ಣಾವತಾರ ಪರಿಪೂರ್ಣ ಅವತಾರ. ದುಷ್ಟ ಶಿಕ್ಷೆ ಶಿಷ್ಟರ ರಕ್ಷಣೆ ಮಾಡುತ್ತ ಧರ್ಮಕ್ಕೆ ಜಯ ಕೊಡುತ್ತಾನೆ. ಸರ್ವರಿಗೂ ಜ್ಞಾನದ ಬೆಳಕನ್ನು ಗೀತೆಯ ಮೂಲಕ ನೀಡಿದ ಮಹಾನ್ ಪುರುಷ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಗೌ. ಕಾರ್ಯದರ್ಶಿ ನರಸಿಂಹ ಕೋಣೆಮನೆ ತಿಳಿಸಿದರು.ಜ.೩ರಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಭಗವದ್ಗೀತಾ ಸಪ್ತಾಹದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡಿ, ನಾವೆಲ್ಲರೂ ಧರ್ಮ ಮಾರ್ಗದಲ್ಲಿ ನಡೆಯಬೇಕು. ಒಳಿತು, ಕೆಡುಕುಗಳನ್ನು ವಿಭಾಗ ಮಾಡಿ, ನಡೆಯುವ ಮನಸ್ಥಿತಿ ನಮಗೆ ಬರುವಂತಾದರೆ ಇಂಥ ಕಾರ್ಯಕ್ರಮಗಳು ಯಶಸ್ವಿಯಾದಂತೆ ಎಂದರು. ಸುಜಾತಾ ರವಿಕಿರಣ ಘಟ್ಟಿಮನೆ ಉಪನ್ಯಾಸ ನೀಡಿ, ಇರುವುದು ಸಂಪತ್ತಲ್ಲ. ಇರುವುದನ್ನು ಅರಿಯುವುದು ಸಂಪತ್ತು. ಗೀತೆಯಲ್ಲಿ ಎಲ್ಲವೂ ಇದೆ. ಆದರೆ ಇರುವುದನ್ನು ಅರಿಯಬೇಕಾದ ಅಗತ್ಯವಿದೆ. ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ದೂರದರ್ಶಿತ್ವದ ಮೂಲಕ ಮನೆ ಮನೆಗೆ, ಮನ ಮನಕ್ಕೆ ಮುಟ್ಟುವಂತಾಗಿರುವುದು ತುಂಬಾ ಮಹತ್ವದ್ದು. ವಿದ್ಯಾರ್ಥಿ ಮನಸ್ಸಿನಲ್ಲಿ ಉಂಟಾಗುವ ಅನೇಕ ತಲ್ಲಣಗಳಿಗೆ ಗೀತೆಯಲ್ಲಿ ಉತ್ತರವಿದೆ ಎಂದರು.ತಾಲೂಕು ಅಭಿಯಾನದ ಅಧ್ಯಕ್ಷ ಜಿ.ಎನ್. ಭಟ್ಟ ತಟ್ಟೀಗದ್ದೆ ಮಾತನಾಡಿ, ನಮ್ಮಲ್ಲಿರುವ ದೋಷಗಳನ್ನು ತೊಡೆದುಹಾಕಲು, ಸಾಮರ್ಥ್ಯಗಳನ್ನು ಪ್ರಕಟಿಸಲು, ಜೀವನದಲ್ಲಿ ಗಮನಾರ್ಹ ಸಾಧನೆ ಮಾಡಲು ಪ್ರೇರಣೆ ಗೀತೆಯಲ್ಲಿದೆ. ವಿದ್ಯಾರ್ಥಿಗಳು ಪ್ರತಿದಿನ ಗೀತೆಯನ್ನು ಓದುವಂತಾಗಬೇಕು ಎಂದರು.ವೇದಿಕೆಯಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ, ಕೇಂದ್ರೀಯ ಶಾಲೆಯ ಪ್ರಾಂಶುಪಾಲೆ ಮಹಾದೇವಿ ಭಟ್ಟ ಉಪಸ್ಥಿತರಿದ್ದರು. ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕ ವರ್ಗದವರು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ೯ ನೇ ಅಧ್ಯಾಯವನ್ನು ಪಠಿಸಿದರು.ಶಿಕ್ಷಕರಾದ ಪ್ರತಿಮಾ ಭಟ್ಟ ಸ್ವಾಗತಿಸಿದರು. ದತ್ತಾತ್ರೇಯ ಭಟ್ಟ ನಿರ್ವಹಿಸಿದರು. ಅಭಯ ಹೆಗಡೆ ಕಟ್ಟೆ ವಂದಿಸಿದರು. ಮೀನಾಕ್ಷಿ ಭಟ್ಟ ಮತ್ತು ಶ್ಯಾಮಲಾ ಕೆರೆಗದ್ದೆ ಸಹಕರಿಸಿದರು. ಸರ್ವೋದಯ ಪ್ರೌಢಶಾಲೆ ವಾರ್ಷಿಕೋತ್ಸವ

ಯಲ್ಲಾಪುರ: ಸತತವಾದ ಸಾಧನೆ, ಪರಿಶ್ರಮದಿಂದ ಮಾತ್ರ ಉತ್ತಮ ವ್ಯಕ್ತಿತ್ವ ಗಳಿಸಲು ಸಾಧ್ಯ. ಶಾಲೆಗಳು ಕನಸಿನ ವೇದಿಕೆ. ವ್ಯಕ್ತಿತ್ವದ ಅರಳುವಿಕೆ ಕಲಿಕೆಯಲ್ಲಿದೆ. ಗುಣಮಟ್ಟದ ಶಿಕ್ಷಣ ಪಡೆಯುವ ಪ್ರತಿ ವಿದ್ಯಾರ್ಥಿ ಸಮಾಜದ ಆಸ್ತಿಯಾಗುತ್ತಾನೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಕೇಂದ್ರೀಕರಣ ವ್ಯವಸ್ಥೆಯ ಉಪಾಧ್ಯಕ್ಷ ಪ್ರಮೋದ ಹೆಗಡೆ ತಿಳಿಸಿದರು.ಜ. ೪ರಂದು ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ವಾರ್ಷಿಕೋತ್ಸವದಲ್ಲಿ ವಸ್ತು ಪ್ರದರ್ಶನ ಉದ್ಘಾಟಿಸಿ, ಮಾತನಾಡಿದರು. ಉತ್ತಮ ವಿಚಾರಗಳನ್ನು ಸ್ವೀಕರಿಸುವ, ಅನುಸರಿಸುವ ಗುಣ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಶ್ರೇಷ್ಠ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದರು.

ಕೈ ಬರಹ ಪತ್ರಿಕೆಯನ್ನು ಬಿಡುಗಡೆ ಮಾಡಿದ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಒಬ್ಬ ವ್ಯಕ್ತಿಯ ಹೊರಗಿನ ಸನ್ನಿವೇಶ ನೋಡಿ, ಅಳೆಯಬಾರದು. ಆತನ ಅಂತರಂಗದ ಶುದ್ಧತೆ, ವ್ಯಕ್ತಿತ್ವ ನೋಡಿ ಗೌರವಿಸಬೇಕು ಎಂದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಶಂಕರ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಎಸಿಎಫ್ ಸಂಗಮೇಶ ಪ್ರಭಾಕರ, ಪ್ರಮುಖರಾದ ಎಸ್.ಎನ್. ಭಟ್ಟ ಏಕಾನ, ಗ.ನಾ. ಕೋಮಾರ, ಟಿ.ಸಿ. ಗಾಂವ್ಕರ, ಗ್ರಾಪಂ ಉಪಾಧ್ಯಕ್ಷೆ ಗಂಗಾ ಕೋಮಾರ, ದತ್ತಾತ್ರೇಯ ಭಟ್ಟ ತಾರಗಾರ, ಶಿವರಾಮ ಗಾಂವ್ಕರ್ ಕಲ್ಮನೆ ಉಪಸ್ಥಿತರಿದ್ದರು. ನಾಗಶ್ರೀ ಹೆಬ್ಬಾರ್ ಪ್ರಾರ್ಥಿಸಿದರು. ಮುಖ್ಯಾಧ್ಯಾಪಕ ಎಂ.ಕೆ. ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎಸ್.ಟಿ. ಬೇವಿನಕಟ್ಟಿ ನಿರ್ವಹಿಸಿದರು. ಸಂಸ್ಥೆಯ ಕಾರ್ಯದರ್ಶಿ ಆರ್.ಎ. ಭಟ್ಟ ತೋಟ್ಮನೆ ವಂದಿಸಿದರು. ನಂತರ ವಿದ್ಯಾರ್ಥಿಗಳಿಗೆ ವಾರ್ಷಿಕ ದತ್ತಿನಿಧಿ, ಬಹುಮಾನ ವಿತರಿಸಲಾಯಿತು.