ಹಾವೇರಿ ಪಟ್ಟಣದ ಸಿಇಎಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ಲಯನ್ಸ್ ಕ್ಲಬ್ ಹಿರೇಕೆರೂರು ಪರಿವಾರ ಸಂಸ್ಥೆಯ ೪ನೇ ವರ್ಷಾಚರಣೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಹಿರೇಕೆರೂರು: ಜಾಗತಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಜನರಿಗೆ ಅತ್ಯಂತ ಅವಶ್ಯಕತೆ ಇರುವ ಕಾರ್ಯವನ್ನು ಮಾಡುತ್ತಾ ತನ್ನದೆ ಆದ ಜನಮನ್ನಣೆ ಗಳಿಸಿರುವ ಏಕೈಕ ಸಂಸ್ಥೆ ಲಯನ್ಸ್ ಕ್ಲಬ್ ಇಂದು ಹೆಮ್ಮರವಾಗಿ ಬೆಳೆದು ನಿಂತಿದ್ದು, ದೊಡ್ಡ ಸಾಧನೆ ಮಾಡಿದೆ ಎಂದು ಸಿಇಎಸ್ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಹೇಳಿದರು.

ಪಟ್ಟಣದ ಸಿಇಎಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ಲಯನ್ಸ್ ಕ್ಲಬ್ ಹಿರೇಕೆರೂರು ಪರಿವಾರ ಸಂಸ್ಥೆಯ ೪ನೇ ವರ್ಷಾಚರಣೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸೇವೆ ಎಂಬುದು ಅತಿ ಮುಖ್ಯವಾಗಿದ್ದು, ಈ ಸಂಸ್ಥೆ ವತಿಯಿಂದ ಮತ್ತಷ್ಟು ಸಮಾಜಮುಖಿ ಕಾರ್ಯಗಳು ಆಗಬೇಕು. ಇದಕ್ಕೆ ಸಹಾಯ-ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಲಯನ್ಸ್ ಕ್ಲಬ್ ಸಂಪುಟದ ಸದಸ್ಯತ್ವ ಬೆಳವಣಿಗೆಯ ಕಾರ್ಯದರ್ಶಿ ಬಿ.ಬಿ. ನಂದಯಾಲ ಮಾತನಾಡಿ, ಲಯನ್ಸ್ ಕ್ಲಬ್ ಯಾವ ಸ್ಥಳದಲ್ಲಿ ಕಚೇರಿಯ ತನ್ನ ಸ್ವಂತ ನೆಲೆ ಹೊಂದುತ್ತದೆಯೋ ಅಲ್ಲಿ ಬೃಹದಾಕಾರವಾಗಿ ಮತ್ತು ಅರ್ಥಪೂರ್ಣವಾಗಿ ತನ್ನ ಕಾರ್ಯವನ್ನು ಮತ್ತಷ್ಟು ಬಲವಾಗಿ ನಿರ್ವಹಿಸುತ್ತದೆ ಎಂದರ್ಥ. ೧೯೧೭ರಲ್ಲಿ ಎಲ್.ಐ.ಸಿ. ಒಬ್ಬ ಏಜೆಂಟರು ಪ್ರಾರಂಭಿಸಿದ ಈ ಕ್ಲಬ್ ಈಗ ಹೆಮ್ಮರವಾಗಿ ಬೆಳೆದು ನಿಂತಿದೆ. ಹಾಂಕಾಂಗ್ ದೇಶದಲ್ಲಿ ೧೦೮ ವರ್ಷ ಪೂರೈಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಜಗತ್ತಿನ ವಿವಿಧ ದೇಶಗಳಲ್ಲಿ ಸ್ಥಾಪನೆಗೊಂಡ ಈ ಕ್ಲಬ್ ಸದಸ್ಯರ ಸಂಖ್ಯೆ ಈಗ ೧೪ ದಶಲಕ್ಷ ಆಗಿದೆ ಎಂದರು.

ಲಯನ್ಸ್ ಕ್ಲಬ್ ನಿಕಟಪೂರ್ವ ಕಾರ್ಯದರ್ಶಿ ಡಾ. ಮನು ಮಾಗನೂರ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಕಟಪೂರ್ವ ಅಧ್ಯಕ್ಷ ಡಾ. ನಿರಂಜನ ಮಾನಿಬಣಕಾರ ಮಾತನಾಡಿದರು.

ಅಧ್ಯಕ್ಷರಾಗಿ ಆಯ್ಕೆಯಾದ ಶಂಭುಲಿಂಗಪ್ಪ ತಂಬಾಕದ, ಉಪಾಧ್ಯಕ್ಷ ಹರೀಶ ಕಲಾಲ್, ಕಾರ್ಯದರ್ಶಿ ಉಮೇಶ ಜೋಗಿಹಳ್ಳಿ, ಖಜಾಂಚಿ ಸುರೇಶ ವೈಶ್ಯರ ಅವರನ್ನು ಸನ್ಮಾನಿಸಿ, ಅಧಿಕಾರ ಹಸ್ತಾಂತರಿಸಲಾಯಿತು.

ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ, ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಪ್ರಕಾಶಗೌಡ ಗೌಡರ, ಸಂದೀಪ ಪಾಟೀಲ, ಡಾ. ಸುನೀತಾ ಮಾರೇರ, ವೆಂಕಟೇಶ ಉಪ್ಪಾರ, ಡಾ. ಶ್ರೀನಿವಾಸ್ ಮಾಸೂರ, ಆರ್.ಎನ್. ಗಂಗೋಳ, ಜೆ.ಬಿ. ತಂಬಾಕದ, ಶಂಭಣ್ಣ ಗೂಳಪ್ಪನವರ, ಹಾಲನಗೌಡ ಮುದಿಗೌಡ್ರ, ಗೀತಾವಾಣಿ ಸಂಗನಗೌಡ್ರ, ಬಸನಗೌಡ, ಸಂಗನಗೌಡ್ರ, ಉಮೇಶ ಜೋಗಿಹಳ್ಳಿ ಇದ್ದರು.