ಹಾವೇರಿ: ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ ಆಶ್ರಯದಲ್ಲಿ ಎರಡನೆಯ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಿತು.
ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಜರುಗಿದ ಸಮ್ಮೇಳನದಲ್ಲಿ ಉದ್ಘಾಟನೆ, ಸಮಾರೋಪ, ಸಾಧಕರಿಗೆ ಸನ್ಮಾನ ಒಳಗೊಂಡಂತೆ ಎರಡು ಮಹತ್ವದ ಸಾಹಿತ್ಯ ಚಿಂತನಾ ಗೋಷ್ಠಿಗಳು ಜರುಗಿದವು.ಹಾವೇರಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ರಮೇಶ ತೆವರಿ ಸಮಾರೋಪ ಭಾಷಣ ಮಾಡಿ, ಕನ್ನಡ ಸಾಹಿತ್ಯಕ್ಕೆ ಹಾವೇರಿ ನೆಲದ ಲೇಖಕರ ಕೊಡುಗೆ ಅಪಾರ, ಸೌಹಾರ್ದದ ನೆಲೆಯಲ್ಲಿ ಇಲ್ಲಿಯ ಸಾಹಿತ್ಯ ಓದದೆ, ಕನ್ನಡ ಸಾಹಿತ್ಯ ಅರ್ಥೈಸಲಾಗದು. ಹಾವೇರಿ ನೆಲಕ್ಕೆ ತನ್ನದೆ ಆದ ಛಾಪು ಇದೆ ಎಂದರು.
ಸರ್ವಾಧ್ಯಕ್ಷ ಜಿ.ಎಂ. ಓಂಕಾರಣ್ಣನವರ ಅವರನ್ನು ವೇದಿಕೆಯ ಪರವಾಗಿ ಸನ್ಮಾನಿಸಲಾಯಿತು. ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ''''ನನ್ನ ಸಾಹಿತ್ಯ ಸೇವೆಗೆ ಸಿಕ್ಕ ದೊಡ್ಡ ಅವಕಾಶ ನನ್ನ ಜೀವನದ ಸುಕೃತ ಎಂದರು.ಸಮಾರೋಪದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಶಿವರಾಜ ಸಜ್ಜನರ ವಹಿಸಿದ್ದರು. ಸರ್ವಾಧ್ಯಕ್ಷ ಜಿ.ಎಂ. ಓಂಕಾರಣ್ಣನವರ, ಕರುನಾಡು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಡಿ. ಮುಡಣ್ಣನವರ, ಜಿಲ್ಲಾಧ್ಯಕ್ಷ ಚಂಪಾವತಿ ಹುಣಸಿಕಟ್ಟಿ, ಲಿಂಗಯ್ಯ ಹಿರೇಮಠ, ವೈ.ಬಿ. ಆಲದಕಟ್ಟಿ, ಹನುಮಂತಗೌಡ ಗೊಲ್ಲರ, ನಾಗರಾಜ ಎಚ್., ಕುಮಾರ ತಳವಾರ, ಉಪಾಧ್ಯಕ್ಷ ಎಸ್.ಎಲ್. ಕಾಡದೇವರಮಠ, ನಿಂಗಪ್ಪ ಚಾವಡಿ, ರಾಘವೇಂದ್ರ ದೊಡ್ಡಮನಿ, ಸಂಗಪ್ಪ ಕೋಳೂರ, ರೇಣುಕಾ ಗುಡಿಮನಿ, ಪ್ರಾಚಾರ್ಯ ಬಸನಗೌಡ ಎಂ., ಇದ್ದರು.
ಸಮ್ಮೇಳನದ ಅಂಗವಾಗಿ ಸಾಧಕರಾದ ಗೀತಾಬಾಯಿ ಲಮಾಣಿ, ಉಡಚಪ್ಪ ಮಾಳಗಿ, ಮುತ್ತುರಾಜ ಮಾದರ, ಲಿಂಗರಾಜ ಸೊಟ್ಟಪ್ಪನವರ ಮುಂತಾದ 60 ಸಾಧಕರಿಗೆ ಕರುನಾಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡ ಸಾಹಿತ್ಯಕ್ಕೆ ಹಾವೇರಿ ಜಿಲ್ಲೆ ಕೊಡುಗೆ: ''ಕನ್ನಡ ಸಾಹಿತ್ಯಕ್ಕೆ ಹಾವೇರಿ ಜಿಲ್ಲೆ ಕೊಡುಗೆ'' ಎಂಬ ಗೋಷ್ಠಿ ಜರುಗಿತು. ಅಧ್ಯಕ್ಷತೆಯನ್ನು ಡಾ. ಎಸ್.ಪಿ. ಗೌಡರ ವಹಿಸಿ, ಹೊಸ ನುಡಿಗಟ್ಟುಗಳನ್ನು ಕೊಟ್ಟ ಚಂಪಾ, ಮಹಾದೇವ ಬಣಕಾರ ಆದಿಯಾಗಿ ಹಲವರು ಕನ್ನಡ ಭಾಷೆಗೆ ಮೆರಗು ತಂದವರು. ಇವರ ಬಗ್ಗೆ ಚಿಂತನ ಮಂಥನ ನಡೆಯ ಬೇಕು ಎಂದರು.
ಗೋಷ್ಠಿಯ ಆಶಯ ನುಡಿಗಳನ್ನಾಡಿದ ಡಾ. ಕಾಂತೇಶ ಅಂಬಿಗೇರ ಭೌಗೋಲಿಕ ಚೌಕಟ್ಟಿನಲ್ಲಿ ಇಲ್ಲಿಯ ಸಾಹಿತಿಗಳ ಮೌಲ್ಯಮಾಪನ ಮಾಡಬಾರದು. ಅನೇಕರು ಕನ್ನಡ ಸಾಹಿತ್ಯ ಚರಿತ್ರೆಯ ಭಾಗವಾಗಿದ್ದಾರೆ ಎಂದರು. ಡಾ. ಪುಷ್ಪಾವತಿ ಶಲವಡಿಮಠ, ಲಿಂಗರಾಜ ಸೊಟ್ಟಪ್ಪನವರ, ಡಾ. ಹನುಮಂತಪ್ಪ ಸಂಜೀವಣ್ಣನವರ, ನಾಗರಾಜ ಮುಂತಾದವರು ಜಿಲ್ಲೆಯ ಸಾಹಿತ್ಯದ ಬಗ್ಗೆ ತಮ್ಮ ವಿಚಾರಗಳನ್ನು ಹಂಚಿಕೊಂಡರು.ಕವಿಗೋಷ್ಠಿ: ಹಿರಿಯ ಕವಿ ಸತೀಶ ಕುಲಕರ್ಣಿ ಅವರ ಸಾರಥ್ಯದಲ್ಲಿ ನಡೆದ ಕವಿಗೋಷ್ಠೀಯಲ್ಲಿ ನಾಡಿನ ಬೇರೆ ಬೇರೆ ಭಾಗದ 20 ಕವಿಗಳು ಕಾವ್ಯ ವಾಚನ ಮಾಡಿದರು. ಆಶಯ ನುಡಿಗಳನ್ನಾಡಿದ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ, ''''ಶಾಯರಿ ಕಾವ್ಯದ ವಿಸ್ಮಯಕಾರಿ ಪ್ರಯೋಗ. ಹೊಸ ಕವಿಗಳು ಗಝಲ್ ಮತ್ತು ಶಾಯರಿಗಳನ್ನು ಬರೆಯಬೇಕು ಎಂದರು.
ಧಾರವಾಡ, ಕಾರವಾರ, ರಾಯಚೂರು, ಬೆಂಗಳೂರು ಬೇರೆ ಬೇರೆ ಭಾಗದ ಕವಿಗಳು ಪಾಲ್ಗೊಂಡಿದ್ದು ವಿಶೇಷವಿತ್ತು. ನಾಗರಾಜ ಹುಡೇದ, ಶೋಭಾ ತುಂಗಳದ, ಸಂಜೀವ ಈಶಾಪುರ, ಭಾರತಿ ಮಲ್ಲಿಕಾರ್ಜುನಗೌಡ, ಬಾಲಚಂದ್ರ ಹೆಗಡೆ, ಪ್ರಶಾಂತ ದೈವಜ್ಞ, ರವಿ ಚಲವಾದಿ, ಗಿರೀಶ ಶಿರೋಳ್ಕರ್ ಮುಂತಾದ 20 ಕವಿಗಳು ಕಾವ್ಯ ವಾಚಿಸಿದರು. ಯುದ್ಧ, ಭ್ರೂಣ ಹತ್ಯೆ, ಅತ್ಯಾಚಾರ ಮುಂತಾದ ವಸ್ತುಗಳುಳ್ಳ ಕವಿತೆಗಳಿದ್ದವು.ದೂರದ ಮುಂಡಗೋಡದಿಂದ ತುಸು ಅಳುಕಿನಿಂದಲೇ ಸಾಹಿತ್ಯ ಸಮ್ಮೇಳನ ನಡೆಸಲು ಬಂದ ನನಗೆ ಸಮಾಧಾನವಾಗಿದೆ. ಹಾವೇರಿ ಜನರ ಪ್ರೀತಿಯನ್ನು ಮರೆಯಲಾಗದು ಎಂದು ಸಂಸ್ಥಾಪಕ ಅಧ್ಯಕ್ಷ ಎಸ್.ಡಿ. ಮುಡೆಣ್ಣವರ ಭಾವುಕರಾಗಿ ನುಡಿದರು.