ಶೋಷಿತರ ಸದೃಢಗೊಳಿಸುವುದೇ ಕಾಂಗ್ರೆಸ್‌ನ ಮುಖ್ಯ ಧ್ಯೇಯ-ಶಾಸಕ ಪಠಾಣ್‌

| Published : Oct 04 2025, 12:00 AM IST

ಶೋಷಿತರ ಸದೃಢಗೊಳಿಸುವುದೇ ಕಾಂಗ್ರೆಸ್‌ನ ಮುಖ್ಯ ಧ್ಯೇಯ-ಶಾಸಕ ಪಠಾಣ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಗುರು ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಸಮಾಜದಲ್ಲಿ ಶೋಷಿತರ ಪರ ಕಾಳಜಿ ಹೊಂದುವ ಮೂಲಕ ಅವರನ್ನು ಸದೃಢಗೊಳಿಸುವುದೇ ಕಾಂಗ್ರೆಸ್ ಪಕ್ಷದ ಮುಖ್ಯ ಧ್ಯೇಯ ಎಂದು ಶಾಸಕ ಯಾಸೀರ ಅಹ್ಮದ್ ಖಾನ್ ಪಠಾಣ್ ಹೇಳಿದರು.

ಶಿಗ್ಗಾಂವಿ: ವಿಶ್ವಗುರು ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಸಮಾಜದಲ್ಲಿ ಶೋಷಿತರ ಪರ ಕಾಳಜಿ ಹೊಂದುವ ಮೂಲಕ ಅವರನ್ನು ಸದೃಢಗೊಳಿಸುವುದೇ ಕಾಂಗ್ರೆಸ್ ಪಕ್ಷದ ಮುಖ್ಯ ಧ್ಯೇಯ ಎಂದು ಶಾಸಕ ಯಾಸೀರ ಅಹ್ಮದ್ ಖಾನ್ ಪಠಾಣ್ ಹೇಳಿದರು. ತಾಲೂಕಿನ ಮುಗಳಿ ಗ್ರಾಮದಲ್ಲಿ ಶ್ರೀ ಕರಿಯಮ್ಮ ದೇವಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಬಸವಣ್ಣ ಹಾಗೂ ಡಾ. ಅಂಬೇಡ್ಕರ್ ಅವರು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಶೋಷಿತರಿಗೆ ಬಲ ತುಂಬಲು ಶ್ರಮಿಸಿದರು. ಅದಕ್ಕಾಗಿ ನೋವು, ಅವಮಾನ ಅನುಭವಿಸಿದರು. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗದವರು ಎಂಬ ಕೀಳರಿಮೆ ಬಿಟ್ಟು ಸಾಧನೆಯತ್ತ ಸಾಗಬೇಕು ಎಂದರು.ಸಹಕಾರಿ ಧುರೀಣ ಶಿವಾನಂದ ರಾಮಗೇರಿ ಮಾತನಾಡಿ, ಶಾಸಕರಾಗಿ ಯಾಸೀರ ಅಹ್ಮದ್ ಖಾನ್ ಪಠಾಣರು ಮುಗಳಿ ಗ್ರಾಮದ ಅಭಿವೃದ್ಧಿಗೆ ಸಂಕಲ್ಪ ತೊಟ್ಟಿರುವರು. ಗ್ರಾಮದ ದೇಗುಲ, ರಸ್ತೆ, ಕುಡಿಯುವ ನೀರಿನ ಘಟಕ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಒಂದು ಕೋಟಿ ಇಪ್ಪತ್ತು ಲಕ್ಷ ರು. ಅನುದಾನ ಒದಗಿಸಿರುವರು. ತಮಗೆ ಸಿಕ್ಕಿರುವ ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ತಲುಪಿ ತಮ್ಮ ಮೇಲಿನ ವಿಶ್ವಾಸ ಉಳಿಸಿಕೊಂಡಿರುವರು ಎಂದರು. ಮುಖಂಡರಾದ ಗುಡ್ಡಪ್ಪ ಜಲದಿ, ಶಂಕರಗೌಡ ಪಾಟೀಲ, ಅಣ್ಣಪ್ಪ ಲಮಾಣಿ, ಗ್ರಾಮದ ಬಸಪ್ಪ ಭದ್ರಶೆಟ್ಟಿ, ಉಳವನಗೌಡ ಪಾಟೀಲ, ಮಹಾದೇವಪ್ಪ ಕಾಮನಹಳ್ಳಿ, ಯಲ್ಲಪ್ಪ ಅರಳಿಕಟ್ಟಿ, ಹವಳೆಪ್ಪ ಪೂಜಾರ, ಸಣ್ಣಕರೆಪ್ಪ ಕಡೆಮನಿ, ಕರೆಪ್ಪ ಮುಂದಿನಮನಿ, ಅಡಿವೆಪ್ಪ ದೊಡ್ಡಮನಿ, ಬಸಪ್ಪ ಮಾದರ, ಸೋಮಣ್ಣ ಸಕ್ರಿ, ನಿಂಗಪ್ಪ ದುಂಡಪ್ಪನವರ, ರಮೇಶ ಅರಳಿಕಟ್ಟಿ, ಮಹಾದೇವಪ್ಪ ತಳವಾರ, ಶಂಕರ ಗೊಬ್ಬಿ, ಕರೆಪ್ಪ ಕಲ್ಲಮ್ಮನವರ ಉಪಸ್ಥಿತರಿದ್ದರು.ನಿಂಗಪ್ಪ ಸಕ್ರಿ ನಿರೂಪಿಸಿದರು. ಚಂದ್ರು ಬಡಿಗೇರ ಸ್ವಾಗತಿಸಿದರು. ಗುರಪ್ಪ ಹುಬ್ಬಳ್ಳಿ ವಂದಿಸಿದರು.