ಸಾರಾಂಶ
ಯತೀಂದ್ರ ಹೇಳಿಕೆಯ ತಾತ್ಪರ್ಯ ಬೇರೆ ಎಂದು ಸಚಿವ ಮಹದೇವಪ್ಪ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
''''ಬಿಜೆಪಿ ಸರ್ಕಾರ ಬಂದರೆ ಮಹಿಳೆಯರು ತಮ್ಮ ಗಂಡದಿರ ಕಳೆದುಕೊಳ್ಳುತ್ತಾರೆ'''' ಎಂದು ಯತೀಂದ್ರ ಹೇಳಿಕೆಯ ತಾತ್ಪರ್ಯ ಬೇರೆ ಎಂದು ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.ನಗರದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಯತೀಂದ್ರ ಸಿದ್ದರಾಮಯ್ಯ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ.
ಮೋದಿ ಅವರು ನಮ್ಮ ಪ್ರಧಾನಿ ಮಂತ್ರಿಗಳು. ಅವರು ಬಿಜೆಪಿಯವರ ಪ್ರಧಾನ ಮಂತ್ರಿಗಳಲ್ಲ. ಅವರು ಹೇಳುವ ಮಾತುಗಳು ಬರಿ ಸುಳ್ಳು ಭರವಸೆಗಳು ಬರೀ ಪೊಳ್ಳು. ಪ್ರಧಾನಿಯವರೇ ಹೇಳಿದ ಮಾತುಗಳನ್ನು ಅವರೇ ನಡೆಸಲ್ಲ. ಯಾವ ಕಾಲದಲ್ಲೂ ಇವರ ರೀತಿ ಮಾತಾನಾಡಿಲ್ಲ. ನಿಮ್ಮಗೆ ಹದಿನೈದು ಲಕ್ಷ ಹಾಕುತ್ತೇನೆ ಎಂದಿದ್ದರು.ರೈತರ ಆದಾಯ ಹೆಚ್ಚು ಮಾಡುತ್ತೇನೆ ಎಂದಿದ್ದರು. ಉದ್ಯೋಗ ಕೊಡುತ್ತೇನೆ ಎಂದಿದ್ದರು. ಅವರು ಹೇಳಿದ ಮಾತಿಗೆ ಅವರೇ ಬದ್ಧರಾಗಿಲ್ಲ. ಇನ್ನು ಜನರು ಹೇಗೆ ಅವರ ಮಾತನ್ನು ನಂಬಬೇಕು. ಆ ಹಿನ್ನೆಲೆಯಲ್ಲಿ ಯತೀಂದ್ರ ರಾಜಕೀಯವಾಗಿ ವ್ಯಾಖ್ಯಾನ ಮಾಡಿರಬೇಕು ಎಂದು ಹೇಳಿದರು.
''''ಚಾಮರಾಜನಗರ ಕ್ಷೇತ್ರದಲ್ಲಿ ಹೆಚ್ಚು ಮತಗಳು ಕೊಡಬೇಕು. ನನ್ನ ಉಳಿಸಬೇಕು'''' ಎಂದು ಸಿಎಂ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾದ ಪ್ರತಿನಿಧಿಯಾಗಿದ್ದರು. ಸಹಜವಾಗಿಯೇ ಅಲ್ಲಿನ ಜನರನ್ನು ಉತ್ತೇಜಿಸುವುದಕ್ಕೆ ಕಾರ್ಯಕರ್ತರ ಹುರಿದುಂಬಿಸುವುದಕ್ಕೆ ಹೀಗೆ ಹೇಳಿದ್ದಾರೆ ಎಂದು ಹೇಳಿದರು.ವರುಣ ಕ್ಷೇತ್ರದ ಜನರು ಸಿದ್ದರಾಮಯ್ಯ, ಯತೀಂದ್ರರ ಮೇಲೆ ಅಪಾರವಾದ ವಿಶ್ವಾಸ ಇಟ್ಟಿದ್ದಾರೆ. ಹೀಗಾಗಿ ಹೆಚ್ಚು ಬಹುಮತ ವರುಣ ಕ್ಷೇತ್ರದಿಂದ ಬರುತ್ತದೆ ಎಂದರು.