ಸಾರಾಂಶ
ಬೆಳಗ್ಗೆ ವಸುಂಧರಾ ತಂಡದಿಂದ ಭರತ್ಯನಾಟ್ಯ, ಗಾಯನ ಹಾಗೂ ಲೋಕೇಶ್ ಅವರ ತಂಡದಿಂದ ನಾದಸ್ವರ, ಮಲ್ಲೇಶ್ ತಂಡದಿಂದ ಭಕ್ತಿ ಗೀತೆಗಳು
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದಲ್ಲಿ ಜ. 10 ರಂದು 9ನೇ ವರ್ಷದ ವೈಕುಂಠ ಏಕಾದಶಿ ಪೂಜಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಕಸಾಪ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ ಹೇಳಿದರು.ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ಸ್ವರ್ಗದ ಬಾಗಿಲ ಪ್ರವೇಶ, ದೇವರ ಉತ್ಸವ, ದೇವರಿಗೆ ವಿಶೇಷ ಪೂಜೆ, ಅಲಂಕಾರ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ಬೆಳಗ್ಗೆ ವಸುಂಧರಾ ತಂಡದಿಂದ ಭರತ್ಯನಾಟ್ಯ, ಗಾಯನ ಹಾಗೂ ಲೋಕೇಶ್ ಅವರ ತಂಡದಿಂದ ನಾದಸ್ವರ, ಮಲ್ಲೇಶ್ ತಂಡದಿಂದ ಭಕ್ತಿ ಗೀತೆಗಳು ದೇವರ ಭಜನೆ, ಪಂಚವಟಿ ಕಥಾ ಪ್ರಸಂಗ, ಮ್ಯೂಸಿಕಲ್ ಗ್ರೂಪ್ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಗಳನ್ನು ಹಮ್ಮಿಕೊಂಡಿರುವುದಾಗಿ ಅವರು ಹೇಳಿದರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರಮೂರ್ತಿ, ವಿಷ್ಣು ಸಹಸ್ರನಾಮ ಟ್ರಸ್ಟ್ ನ ಸದಸ್ಯರಾದ ಪ್ರಮೀಳಾ, ಸುಧಾ, ಸೌಮ್ಯ, ಜ್ಯೋತಿ , ಇಂದ್ರ, ಲಕ್ಷ್ಮಿ, ರಂಗನಾಥಯ್ಯ, ಸುಧಾ, ಶೋಭಾ, ಕಲ್ಪನಾ, ಇಂದ್ರಾಣಿ, ಸುಮಿತ್ರ, ಸುನಂದ, ಮಹದೇವಮ್ಮ, ವಿನುತ, ಕುಮಾರಿ, ಇಂದ್ರಾಣಿ, ಕೋಮಲ, ಮಂಜುಳಾ,ಗೀತಾ, ಶುಭ, ಮಾಲತಿ, ನಂದೀಶ್, ಅರ್ಜುನ್ ಇದ್ದರು.