ತ್ಯಾಗ, ಬಲಿದಾನ ನೀಡಿದ ಯೋಧರ ಸ್ಮರಣೆ ಮುಖ್ಯ

| Published : Aug 18 2025, 12:01 AM IST

ಸಾರಾಂಶ

ಇಂದು ನಾವು ನೆಮ್ಮದಿಯಿಂದ ಸೌಖ್ಯವಾಗಿ ಜೀವಿಸುತ್ತಿದ್ದೇವೆಂದರೇ ಅದಕ್ಕೆ ಗಡಿ ಕಾಯುವ ಯೋಧರೇ ಮುಖ್ಯ ಕಾರಣ ಎಂದು ಬಡಾವಣೆಯ ರಹವಾಸಿಗಳ ಸಂಘದ ಅಧ್ಯಕ್ಷ, ಬಿಜೆಪಿ ಮುಖಂಡ ರುದ್ರಣ್ಣ ಚಂದರಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಇಂದು ನಾವು ನೆಮ್ಮದಿಯಿಂದ ಸೌಖ್ಯವಾಗಿ ಜೀವಿಸುತ್ತಿದ್ದೇವೆಂದರೇ ಅದಕ್ಕೆ ಗಡಿ ಕಾಯುವ ಯೋಧರೇ ಮುಖ್ಯ ಕಾರಣ ಎಂದು ಬಡಾವಣೆಯ ರಹವಾಸಿಗಳ ಸಂಘದ ಅಧ್ಯಕ್ಷ, ಬಿಜೆಪಿ ಮುಖಂಡ ರುದ್ರಣ್ಣ ಚಂದರಗಿ ಹೇಳಿದರು.

ನಗರದ ಎಚ್.ಡಿ.ಕುಮಾರಸ್ವಾಮಿ ಬಡಾವಣೆಯಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವದಲ್ಲಿ ಮಾತನಾಡಿದ ಅವರು, ದೇಶ ಸೇವೆ ಸಲ್ಲಿಸಿ ನಿವೃತ್ತರಾಗಿರುವಂತಹ ಅನೇಕ ಯೋಧರು ಈ ನಮ್ಮ ಬಡಾವಣೆಯಲ್ಲಿದ್ದು, ಅವರನ್ನು ಗುರುತಿಸಿ ಆಧರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಾಜಿ ಸೈನಿಕರು ಧ್ವಜಾರೋಹಣ ನೆರವೇರಿಸಿದರು. ಮಾಜಿ ಸೈನಿಕರಾದ ರಾಜು ಶುಕ್ಲ, ಕೃಷ್ಣ ಹಂದಿಗುಂದ, ಸಂಜು ಹಾದಿಮನಿ, ಸಾಸನೂರ್ ಅವರಿಗೆ ಸನ್ಮಾನಿಸಲಾಯಿತು.ಶಿವಾಲಯ ಅಧ್ಯಕ್ಷ ಬಿ.ಐ.ಪಾಟೀಲ, ಪಂಚ ಕಮಿಟಿ ಅಧ್ಯಕ್ಷ ಅರವಿಂದ ಜೋಶಿ, ಹಿರಿಯ ನಾಗರಿಕ ಅಧ್ಯಕ್ಷ ವಿರೂಪಾಕ್ಷ ನೀರಲಗಿಮಠ, ರಾಜ ಮಜಕರಗಿ, ಶಿವಪುತ್ರ ಪಟ್ಟಕಲ್ಲ, ಶಿವಪುತ್ರ ಗಂಗಾಪುರ, ಮಹಾದೇವ ಹೊಂಗಲ, ಮಹಿಳಾ ಸದಸ್ಯರಾದ ರೇಣುಕಾ ಜಾಧವ, ಜಯಶ್ರೀ ತಳವಾರ, ರುಕ್ಮೀಣಿ ಹಂದಿಗುಂದ, ಮಂಜುಳಾ ಪಟಕಲ್‌ ಸೇರಿದಂತೆ ಬಡಾವಣೆಯ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ನಾಗರಿಕರು ಉಪಸ್ಥಿತರಿದ್ದರು.ನಮಗೆ ಸ್ವಾತಂತ್ರ್ಯ ಸುಲಭವಾಗಿ ಲಭ್ಯವಾಗಿಲ್ಲ. ಅನೇಕ ಮಹನೀಯರು ಇದಕ್ಕಾಗಿ ತಮ್ಮ ಜೀವನ ಸವಿಸಿದ್ದಾರೆ. ಜೀವವನ್ನು ಬಲಿದಾನ ಮಾಡಿದ್ದಾರೆ. ಅಂತಹ ಶ್ರಮದಾಯಕವಾಗಿ ಪಡೆದಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕಾದರೇ ಯೋಧರ ತ್ಯಾಗ, ಬಲಿದಾನ ಕುರಿತು ಸ್ಮರಣೆ ಅತ್ಯವಶ್ಯಕ.

-ರುದ್ರಣ್ಣ ಚಂದರಗಿ, ಬಿಜೆಪಿ ಮುಖಂಡರು.