ಧಾರ್ಮಿಕ ಕಾರ್ಯಗಳಿಂದ ಮನಸ್ಸು ಪರಿಶುದ್ಧ: ಶಾಂತಲಿಂಗ ಶ್ರೀ

| Published : Feb 09 2024, 01:47 AM IST

ಧಾರ್ಮಿಕ ಕಾರ್ಯಗಳಿಂದ ಮನಸ್ಸು ಪರಿಶುದ್ಧ: ಶಾಂತಲಿಂಗ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಚಳ್ಳಕೆರೆ ತಾಲೂಕಿನ ನರಹರಿನಗರದ ವೆಂಕಟಸಾಯಿ ಸೇವಾ ಟ್ರಸ್ಟ್‌ನ ಅದ್ಯಕ್ಷ ಬಿ.ಸಿ.ಸಂಜೀವ ಮೂರ್ತಿಯವರ ನಿವಾಸಕ್ಕೆ ಕಣ್ವಕುಪ್ಪೆಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಭೇಟಿ ನೀಡಿದ್ದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ನಾವು ಆಚರಣೆ ಮಾಡುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನಮಗೆ ನಮ್ಮ ಹಿರಿಯರು ನೀಡಿದ ಕೊಡುಗೆ ಮತ್ತು ಮಾರ್ಗದರ್ಶನವಾಗಿದೆ. ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸಿನ ಪರಿಶುದ್ಧತೆಯಲ್ಲದೆ, ಸಾಮಾಜಿಕವಾಗಿಯೂ ನಾವು ಶಕ್ತರಾಗುತ್ತೇವೆ. ದೇವರು ಮತ್ತು ಗುರುವನ್ನು ನಂಬಿದ ಸಂತತಿ ನಮ್ಮದು. ನಾವೆಲ್ಲರೂ ಧಾರ್ಮಿಕ ವಿಚಾರಧಾರೆಗಳನ್ನು ಜೀವನದ್ದೂದಕ್ಕೂ ತಪ್ಪದೆ ಅಳವಡಿಸಿಕೊಂಡು ನಡೆಯಬೇಕು ಎಂದು ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಅವರು, ಗುರುವಾರ ನರಹರಿನಗರದ ವೆಂಕಟಸಾಯಿ ಸೇವಾ ಟ್ರಸ್ಟ್‌ ಅದ್ಯಕ್ಷ ಬಿ.ಸಿ.ಸಂಜೀವ ಮೂರ್ತಿಯವರ ನಿವಾಸಕ್ಕೆ ಭೇಟಿ ನೀಡಿ, ಅಲ್ಲಿ ಪೂಜಾ ವಿಧಿವಿಧಾನಗಳನ್ನು ನಡೆಸಿ ನಂತರ ಪತ್ರಿಕೆಯೊಂದಿಗೆ ಮಾತನಾಡಿದರು.

ದೇಶದಲ್ಲಿ ಇಂದು ಧಾರ್ಮಿಕ ಪ್ರಖರತೆ ಬೆಳಕು ಎಲ್ಲರಿಗೂ ಕಾಣುವಂತಾಗಿದೆ. ಅಯೋಧ್ಯೆ ಶ್ರೀರಾಮ ಜನ್ಮಸ್ಥಾನದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಮೂಲಕ ನಾವೆಲ್ಲರೂ ರಾಮನ ಪರಂಪರೆ ಅಳವಡಿಸಿ ಕೊಂಡಿದ್ದೇವೆಂಬುವುದನ್ನು ಸಾಬೀತು ಪಡಿಸಿದಂತಾಗಿದೆ. ನಮ್ಮೆಲ್ಲರ ಸಂಪ್ರದಾಯ, ಸಂಸ್ಕೃತಿಯು ಶ್ರೀರಾಮಚಂದ್ರ ನಮಗೆ ದಯಪಾಲಿಸಿದ ವರಗಳು ಎಂದರು.

ಟ್ರಸ್ಟ್‌ ಅದ್ಯಕ್ಷ ಬಿ.ಸಿ.ಸಂಜೀವ ಮೂರ್ತಿ ಮಾತನಾಡಿ, ಸ್ವಾಮೀಜಿಯವರು ಕಾರ್ಯನಿಮಿತ್ತ ಚಳ್ಳಕೆರೆ ಮೂಲಕ ಬೇರೆ ಊರಿಗೆ ಪ್ರವಾಸ ಕೈಗೊಳ್ಳುತ್ತಿರುವ ಬಗ್ಗೆ ಮಾಹಿತಿ ಪಡೆದು, ದೂರವಾಣಿಯಲ್ಲಿ ಸಂಪರ್ಕಿಸಿ ಆಹ್ವಾನಿಸಿದೆ. ಕರೆಗೆ ಓಗೋಟ್ಟು ಕೆಲವೇ ಹೊತ್ತಾದರೂ ಆಗಮಿಸಿ ಧಾರ್ಮಿಕ ವಿಚಾರಗಳ ಬಗ್ಗೆ ತಮ್ಮದೇಯಾದ ರೀತಿಯಲ್ಲಿ ನಮಗೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಭಗವಾನ್ ಸಾಯಿಬಾಬಾ ಮಂದಿರದ ಎಲ್ಲಾ ಕಾರ್ಯಕ್ರಮಗಳಲ್ಲೂ ಅವರು ಸ್ವಯಂ ಪ್ರೇರಣೆಯಿಂದ ಭಾಗವಹಿಸುತ್ತಾ ಬಂದಿದ್ದಾರೆ. ಟ್ರಸ್ಟ್‌ನ ಎಲ್ಲಾ ನಿರ್ದೇಶಕರ ಪರವಾಗಿ ಅವರನ್ನು ಸನ್ಮಾನಿಸಿರುವುದಾಗಿ ತಿಳಿಸಿದರು.

ಬಿ.ಸಿ.ಸತೀಶ್‌ಕುಮಾರ್, ಹೂವಿನ ಜಗದೀಶ್, ಕೆ.ನಾಗೇಶ್, ರವಿಪ್ರಸಾದ್, ಬಿ.ಸಿ.ವೆಂಕಟೇಶ್, ಕೆ.ಎಂ.ಜಗದೀಶ್, ಇಂಧು ಶೇಖರ ಮುಂತಾದವರಿದ್ದರು.