ಸಾರಾಂಶ
ತೀರ್ಥಹಳ್ಳಿ: ಸೋಮವಾರದಿಂದ ಕಾಣೆಯಾಗಿದ್ದ ತಾಲೂಕಿನ ಅರಳಸುರುಳಿ ಯೂನಿಯನ್ ಬ್ಯಾಂಕ್ ಶಾಖೆಯ ಮ್ಯಾನೇಜರ್ ಶ್ರೀವಾಸ್ತವ (38) ಬುಧವಾರ ಪಟ್ಟಣದ ತುಂಗಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ತೀರ್ಥಹಳ್ಳಿ: ಸೋಮವಾರದಿಂದ ಕಾಣೆಯಾಗಿದ್ದ ತಾಲೂಕಿನ ಅರಳಸುರುಳಿ ಯೂನಿಯನ್ ಬ್ಯಾಂಕ್ ಶಾಖೆಯ ಮ್ಯಾನೇಜರ್ ಶ್ರೀವಾಸ್ತವ (38) ಬುಧವಾರ ಪಟ್ಟಣದ ತುಂಗಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸೊಮವಾರ ರಜೆ ಇದ್ದ ಕಾರಣ ಸ್ನಾನಕ್ಕೆಂದು ನದಿಗೆ ಇಳಿದಿದ್ದರು. ಬಳಿಕ ಇವರು ನಾಪತ್ತೆಯಾಗಿದ್ದರು. ತೀರ್ಥಹಳ್ಳಿಯ ತುಂಗಾ ನದಿಯ ದಡದಲ್ಲಿ ಇವರಿಗೆ ಸಂಬಂಧಿಸಿದ ಚಪ್ಪಲಿ, ಮೊಬೈಲ್ ಸಿಕ್ಕಿದ್ದವು. ಮೊಬೈಲ್ ಆಧಾರದ ಮೇಲೆ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಲಾಗಿತ್ತು. ಮಂಗಳವಾರ ತುಂಗಾ ನದಿಯಲ್ಲಿ ಅಗ್ನಿಶಾಮಕ ದಳ, ಪೊಲೀಸರು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ಮೃತ ಶ್ರೀವಾಸ್ತವ ಆಂಧ್ರಪ್ರದೇಶದ ವಿಶಾಖಪಟ್ಟಣ ಮೂಲದವರಾಗಿದ್ದು, ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಅವರ ಕುಟುಂಬದವರಿಗೆ ಮೃತ ದೇಹವನ್ನು ಒಪ್ಪಿಸಲಾಗಿದೆ. ಅಗ್ನಿಶಾಮಕದಳ ಘಟಕದ ಮುಖ್ಯಸ್ಥರಾದ ನಾಗರಾಜ್ ನೇತೃತ್ವದಲ್ಲಿ ಸಿಬ್ಬಂದಿಗಳು ಮಂಗಳವಾರ ಬೆಳಗಿನಿಂದ ಸುಮಾರ 10 ಗಂಟೆಗಳ ನಿರಂತರ ಶವದ ಹುಡಕಾಟ ನಡೆಸಿದ್ದರೂ ಶವ ದೊರೆತಿರಲಿಲ್ಲ. ಪಟ್ಟಣ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅಶ್ವಥ್ ಗೌಡ ಸ್ಥಳದಲ್ಲಿದ್ದು, ಶವದ ಮಹಜರು ನಡೆಸಿ, ಶವ ಸಾಗಿಸಲು ನೆರವಾದರು.