ಸಾರಾಂಶ
ಹುನಗುಂದ: ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗುವ ಯೋಜಿತ 50 ಹಾಸಿಗೆಗಳ ತಾಯಿ ಮತ್ತು ಮಕ್ಕಳ (ಎಂಸಿಎಚ್) ಆಸ್ಪತ್ರೆ ಕಟ್ಟಡ ಕಾಮಗಾರಿಯನ್ನು ಶಾಸಕ ವಿಜಯಾನಂದ ಕಾಶಪ್ಪನವರ ವೀಕ್ಷಿಸಿದರು.
ಹುನಗುಂದ: ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗುವ ಯೋಜಿತ 50 ಹಾಸಿಗೆಗಳ ತಾಯಿ ಮತ್ತು ಮಕ್ಕಳ (ಎಂಸಿಎಚ್) ಆಸ್ಪತ್ರೆ ಕಟ್ಟಡ ಕಾಮಗಾರಿಯನ್ನು ಶಾಸಕ ವಿಜಯಾನಂದ ಕಾಶಪ್ಪನವರ ವೀಕ್ಷಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಅಲ್ಲಿ ಕಾರ್ಯನಿರ್ವಹಿಸುವ ಕಟ್ಟಡ ಮತ್ತು ಶಿಥಿಲಗೊಂಡಿರುವ ಹಾಗೂ ಬಯಲು ಜಾಗೆಯನ್ನು ನಕ್ಷೆ ಸಮೇತವಾಗಿ ವೀಕ್ಷಿಸಿದ ಶಾಸಕರು, ಅಧಿಕಾರಿಗಳ ಜೊತೆ ಚರ್ಚಿಸಿದರು. ಸುರಕ್ಷಿತ ಸ್ಥಳದಲ್ಲಿ ಈ ಆಸ್ಪತ್ರೆ ನಿರ್ಮಾಣ ಆಗಬೇಕಾಗಿದೆ. ತಾಲೂಕಿಗೆ ಈ ಆಸ್ಪತ್ರೆ ಅವಶ್ಯಕವಾಗಿದೆ. ಈಗಾಗಲೇ ಈ ಆಸ್ಪತ್ರೆ ನಿರ್ಮಾಣದ ಅವಶ್ಯಕತೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶ್ರೀಘ್ರದಲ್ಲಿಯೇ ಮಂಜೂರಾತಿ ಸಿಗಲಿದೆ ಎಂದರು. ಆರೋಗ್ಯ ಇಲಾಖೆ ಅಭಿಯಂತರ ಸ್ಥಳದ ಮಾಹಿತಿ ನೀಡಿದಂತೆ ಸದ್ಯ ಕಾರ್ಯ ನಿರ್ವಹಿಸುವ ಕಟ್ಟಡಗಳಿಗೆತೊಂದರೆಯಾಗದಂತೆ ಮತ್ತು ಶಿಥಿಲಾವಸ್ಥೆ ಕಟ್ಟಡಗಳನ್ನು ತೆರವುಗೊಳಿಸಿ ಪಾರ್ಕಿಂಗ್ ಮತ್ತು ಗಾರ್ಡನ್ ಸಮೇತ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ನಿಗದಿಗೊಳಿಸಬೇಕೆಂದು ಶಾಸಕ ಕಾಶಪ್ಪನವರ ಅಧಿಕಾರಿಗಳಿಗೆ ಸೂಚಿಸಿದರು.
ಜೊತೆಗೆ ಶಿಥಿಲಗೊಂಡ ಹಳೇ ತಹಸೀಲ್ದಾರ್ ಕಚೇರಿ ಮತ್ತು ಸುತ್ತಲಿರುವ ಬಯಲು ಜಾಗೆಯನ್ನು ಯಾವುದಾದರೂ ಕಚೇರಿ ಕಟ್ಟಡ, ಸರ್ಕಾರಿ ವಸತಿನಿಲಯ ಕಟ್ಟಡ ಕಾಮಗಾರಿಯನ್ನು ಶಾಸಕರು ವೀಕ್ಷಿಸಿದರು.ಪುರಸಭೆ ಮಾಜಿ ಅಧ್ಯಕ್ಷ ಪರವೇಜ್ ಖಾಜಿ, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಮಂಜುನಾಥ ಅಂಕೋಲ್ಕರ, ಆರೋಗ್ಯ ರಕ್ಷಾ ಸಮಿತಿ ಉಪಾಧ್ಯಕ್ಷ ಶಿವಾನಂದ ಕಂಠಿ, ರಾಜು ಬೋರಾ, ವಿಜಯ ಗದ್ದನಕೇರಿ, ಶಾಂತಕುಮಾರ ಸುರಪೂರ, ಆರೋಗ್ಯ ಅಭಿಯಂತರ ಎಂ.ಎಂ. ಕಟ್ಟಿಮನಿ, ಮಹಾಂತೇಶ ಮದರಿ, ಸಾಂತಪ್ಪ ಮಸ್ಕಿ, ನಗರ ಮಾಪಕ ಮುರಗೇಶ ಕೊಳಮಲಿ ಇತರರು ಇದ್ದರು.