ಶ್ರೀಗಳು ಗುಣಮುಖ; ಆಸ್ಪತ್ರೆಯಿಂದ ಡಿಶ್ಚಾರ್ಜ್‌

| Published : Jul 21 2025, 01:30 AM IST

ಸಾರಾಂಶ

ಸೃಷ್ಟಿಕರ್ತ ಕೂಡಲಸಂಗಮನ, ಬಸವಣ್ಣನ ಆಶೀರ್ವಾದ, ಸಮಾಜದ ಜನರ ಪ್ರಾರ್ಥನೆಯಿಂದ ಆರಾಮ ಆಗಿದ್ದೇನೆ ಎಂದು ಆಸ್ಪತ್ರೆಯಿಂದ ಡಿಶ್ಚಾರ್ಜ್‌ ಆದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸೃಷ್ಟಿಕರ್ತ ಕೂಡಲಸಂಗಮನ, ಬಸವಣ್ಣನ ಆಶೀರ್ವಾದ, ಸಮಾಜದ ಜನರ ಪ್ರಾರ್ಥನೆಯಿಂದ ಆರಾಮ ಆಗಿದ್ದೇನೆ ಎಂದು ಆಸ್ಪತ್ರೆಯಿಂದ ಡಿಶ್ಚಾರ್ಜ್‌ ಆದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ನಾಲ್ಕು ದಿನಗಳಿಂದ ಆದ ಬೆಳವಣಿಗೆಗಳಿಂದ ಅಸಮಾಧಾನ ಆಗಿತ್ತು, ಶನಿವಾರ ಬೆಳಗ್ಗೆ ವಾಕಿಂಗ್ ಮಾಡುವಾಗ ಎದೆನೋವು ,ವಾಂತಿ ಕಾಣಿಸಿಕೊಂಡಿತು. ಭಕ್ತರು ವೈದ್ಯರಿಗೆ ಕರೆ ಮಾಡಿದಾಗ ಆಸ್ಪತ್ರೆಗೆ ಬರಲಿಕ್ಕೆ ಹೇಳಿದರು. ವೈದ್ಯರು ಹಾಗೂ ಸಿಬ್ಬಂದಿ ಮಾಡಿದ ಆರೈಕೆ, ಭಕ್ತರ ಪ್ರಾರ್ಥನೆ ಪರಿಣಾಮವಾಗಿ ಗುಣಮುಖನಾಗಿದ್ದೇನೆ. ಎಲ್ಲ ನಾರ್ಮಲ್ ಆಗಿದೆ. ಆರಾಮ ಆಗಿದ್ದೇನೆ.ಇನ್ನೂ ಎರಡು ದಿನ ಪೀಠದಲ್ಲೇ ಇರುತ್ತೇನೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ನೇರವಾಗಿ ಪೀಠಕ್ಕೆ ಹೋಗುತ್ತೇನೆ ಎಂದು ಹೇಳಿದರು.

ಪೀಠಾಧಿಪತಿ ಬದಲಾವಣೆ ಬಗ್ಗೆ ಕಾಶಪ್ಪನವರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಹೊರಗಡೆ ಏನೇನು ಬೆಳವಣಿಗೆ ನಡೆದಿದೆ ಗೊತ್ತಿಲ್ಲ. ನಾನು ಭಕ್ತರಿಗೆ ಈಗ ಧೈರ್ಯ ಮಾತ್ರ ಹೇಳ್ತಿನಿ. ಆ ಬಗ್ಗೆ ಗೊತ್ತಿಲ್ಲ ಎಂದರು. ಪಂಚಮಸಾಲಿ ಪೀಠದ ಶ್ರೀಗಳು ಆಸ್ಪತ್ರೆಯಿಂದ ಡಿಸ್ಜಾರ್ಜ್‌ ಆಗಿ ಭಕ್ತರೊಂದಿಗೆ ತಮ್ಮ ಕಾರಿನಲ್ಲಿಯೇ ಕೂಡಲಸಂಗಮ ಪೀಠಕ್ಕೆ ತೆರಳಿದರು.