ಸಾರಾಂಶ
ಚಳವಳಿ ಎನ್ನುವ ಪದಕ್ಕೆ ಒಂದು ಅರ್ಥವಿದೆ. ಅದು ಸಾಮಾಜಿಕ ಚಟುವಟಿಕೆಯನ್ನು, ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುತ್ತದೆ ಎಂದು ಮಹಿಳಾ ಹೋರಾಟಗಾರ್ತಿ ಡಾ.ಗಾಯಿತ್ರಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಚಳವಳಿ ಎನ್ನುವ ಪದಕ್ಕೆ ಒಂದು ಅರ್ಥವಿದೆ. ಅದು ಸಾಮಾಜಿಕ ಚಟುವಟಿಕೆಯನ್ನು, ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುತ್ತದೆ. ಆದ್ದರಿಂದ ಭಾರತೀಯ ಮಹಿಳಾ ಚಳುವಳಿಯ ಮೂಲವನ್ನು ತಿಳಿಯುವ ಅವಶ್ಯಕತೆ ಇದೆ ಎಂದು ಲೇಖಕಿ ಮತ್ತು ಮಹಿಳಾ ಹೋರಾಟಗಾರ್ತಿ ಡಾ.ಎನ್ ಗಾಯಿತ್ರಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಬುಧವಾರ ಅಹಿಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ, ಯಶೋಧರಮ್ಮ ದತ್ತಿ ಪೀಠದ ವತಿಯಿಂದ ಹಮ್ಮಿಕೊಂಡಿದ್ದ ಪಶು ಸಂಗೋಪನೆ ಮತ್ತು ಮಹಿಳೆ ಹಾಗೂ ಭಾರತದಲ್ಲಿ ಮಹಿಳಾ ಚಳುವಳಿಯ ಸಂಕಥನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಿಳಾ ಅಧ್ಯಯನ ವಿದ್ಯಾರ್ಥಿನಿಯಾಗಿರುವ ಪ್ರತಿಯೊಬ್ಬರು ದಕ್ಷಿಣ ಏಷ್ಯಾದ ಮಹಿಳಾ ಅಧ್ಯಯನದ ಅಜ್ಜಿ ಎಂದು ಪ್ರಖ್ಯಾತವಾಗಿರುವ ವೀಣಾ ಮುಜುಂವದಾರ ಅವರ ಪರಿಚಯ ಹೊಂದಿರಲೇಬೇಕು ಎಂದು ಸಲಹೆ ನೀಡಿದರು.ಮಹಿಳಾ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಆರ್.ಸುನಂದಮ್ಮ ಮಾತನಾಡಿ, ಪಶುಸಂಗೋಪನೆಯಲ್ಲಿ ಶೇ.80 ರಷ್ಟು ಭಾಗಿಯಾಗಿರುವ ಮಹಿಳೆಯರು ದೇಶದ ಆರ್ಥಿಕತೆ ಹಾಗೂ ಮನೆಯ ಆರ್ಥಿಕತೆಯ ವೃದ್ಧಿಗೆ ಕಾರಣವಾಗಿದ್ದಾರೆ. ಆದರೆ ಇಂದಿಗೂ ಅವರು ತೆರೆಮರೆಯಲ್ಲಿಯೇ ಉಳಿದುಬಿಟ್ಟಿದ್ದಾರೆ ಎಂದರು.
ಸಮಾಜ ವಿಜ್ಞಾನ ವಿಭಾಗದ ಡೀನ್ ಪ್ರೊ.ಶಾಂತಾದೇವಿ ಟಿ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕ ಕುರಿತು ಸಾಹಿತಿ ಭಾರತಿ ಪಾಟೀಲ, ಪ್ರೊ.ಲಕ್ಷ್ಮೀದೇವಿ ವೈ, ಡಾ.ಶೈಲಾ ಬಳಗಾನೂರು, ಡಾ.ಸರೋಜಾ ಸಂತಿ, ಡಾ.ಭಾಗ್ಯಶ್ರೀ ದೊಡಮನಿ ಮುಂತಾದವರು ಇದ್ದರು.