ಸಾರಾಂಶ
ವಾಟ್ಸಾಪ್ ಮೆಸೇಜ್ ಗೆ ಕೂಡಲೇ ಸ್ಪಂದಿಸಿ, ಪಟ್ಟಣದಲ್ಲಿ ಮರಕ್ಕೆ ಬಿದ್ದಿದ್ದ ಬೆಂಕಿಯನ್ನು ನಂದಿಸಲು ಸೂಚಿಸಿ ತರೀಕೆರೆ ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಕರ್ತವ್ಯ ಮೆರೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತರೀಕೆರೆ : ವಾಟ್ಸಾಪ್ ಮೆಸೇಜ್ ಗೆ ಕೂಡಲೇ ಸ್ಪಂದಿಸಿ, ಪಟ್ಟಣದಲ್ಲಿ ಮರಕ್ಕೆ ಬಿದ್ದಿದ್ದ ಬೆಂಕಿಯನ್ನು ನಂದಿಸಲು ಸೂಚಿಸಿ ತರೀಕೆರೆ ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಕರ್ತವ್ಯ ಮೆರೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪಟ್ಟಣದಲ್ಲಿ ವಿಪರೀತ ಬಿಸಿಲಿನ ದಗೆಯಿಂದ ಉಷ್ಣಾಂಶ ಹೆಚ್ಚಿದೆ, ಪ್ರಾಣಿ ಪಕ್ಷಿಗಳು ಹನಿ ನೀರಿಗೆ ಹಾಹಾಕಾರ ಪಡುವಂತಾಗಿದೆ. ಮರ ಗಿಡಗಳು ನೀರಿಲ್ಲದೆ ಒಣಗಿ ಹೋಗುತ್ತಿದೆ. ಪಟ್ಟಣದಲ್ಲಿ ನೆರಳು ಕೊಡುತ್ತಿದ್ದ ವೃಕ್ಷವೊಂದಕ್ಕೆ ಅಕಸ್ಮಾತ್ ಬೆಂಕಿ ಬಿದ್ದಿದೆ. ಮರಕ್ಕೆ ಬೆಂಕಿ ಬಿದ್ದ ವಿಚಾರ ವಾಟ್ಸಾಪ್ ನಲ್ಲಿ ಹರಿದಾಡುತ್ತಿದ್ದಂತೆ ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಅವರು ಕಾರ್ಯೋನ್ಮುಖರಾಗಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿ ಮರದ ಬುಡಕ್ಕೆ ಬಿದ್ದ ಬೆಂಕಿಯನ್ನು ನಂದಿಸಿ ಕರ್ತವ್ಯ ಮೆರೆದಿದ್ದಾರೆ.
ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪುರಸಭೆ ಸಿಬ್ಬಂದಿ ಮತ್ತು ಸಾರ್ವಜನಿಕರ ಸಹಕಾರದಿಂದ ಬೆಂಕಿಯನ್ನು ನಂದಿಸಿ ವೃಕ್ಷವನ್ನು ರಕ್ಷಿಸಿದರು.