ಸಾರಾಂಶ
ಚಿಕ್ಕಮಗಳೂರು: ನಗರಸಭೆಯಿಂದ ಉದ್ದಿಮೆ ಪರವಾನಗಿ ಪಡೆಯದೆ ಅನಧಿಕೃತವಾಗಿ ನಡೆಸುತ್ತಿದ್ದ ಅಂಗಡಿಗಳನ್ನು ಪರಿಶೀಲಿಸಿದ ಪೌರಾಯುಕ್ತರು ಹಾಗೂ ಸಿಬ್ಬಂದಿ ಅಂಗಡಿ ಬಂದ್ ಮಾಡಿಸಿ ಬೀಗ ಹಾಕಿದರು.
ಬಳಿಕ ಮಾತನಾಡಿದ ಪೌರಾಯುಕ್ತ ಬಿ.ಸಿ. ಬಸವರಾಜು, ನಗರಸಭೆಯಿಂದ ಉದ್ದಿಮೆ ಪರವಾನಗಿ ಪಡೆಯದಿರುವ ಬಗ್ಗೆ ಅನೇಕ ಬಾರಿ ಅಂಗಡಿ ಮಾಲೀಕರಿಗೆ ಸೂಚನೆ ಮತ್ತು ಮೌಖಿಕವಾಗಿ ಹೇಳುವ ಮೂಲಕ ಎಚ್ಚರಿಕೆ ನೀಡಿದ್ದರೂ ಅಕ್ರಮವಾಗಿ ಉದ್ದಿಮೆ ನಡೆಸುತ್ತಿದ್ದರು ಎಂದು ತಿಳಿಸಿದರು.ನಗರಸಭೆಯಿಂದ ಅಧಿಕೃತ ಉದ್ದಿಮೆ ಪರವಾನಗಿಯನ್ನು ಕಳೆದ 4-5 ವರ್ಷಗಳಿಂದ ಪಡೆಯದೆ, ಸೂಚನೆಗಳನ್ನು ಪಾಲಿಸದೇ, ಸಿಬ್ಬಂದಿ ಎಚ್ಚರಿಕೆ ನೀಡಿದರೂ ಸ್ಪಂದಿಸದಿರುವ ಕಾರಣ ಇಂದು ಅಂಗಡಿ ಬಂದ್ ಮಾಡಿಸಲಾಗಿದೆ ಎಂದರು. ನಗರದ ಅಂಬೇಡ್ಕರ್ ರಸ್ತೆಯಲ್ಲಿ 2 ಹಾಗೂ ಎಂ.ಜಿ. ರಸ್ತೆಯಲ್ಲಿರುವ ಮಹಾವೀರ್ ಫ್ಯಾನ್ಸಿ ಸ್ಟೋರ್, ಮಾತೇಶ್ವರಿ ಟೆಕ್ಸ್‌ಟೈಲ್, ವಿನಾಯಕ ಬ್ಯಾಗ್ ಪ್ಯಾಲೇಸ್ ಗಳಿಗೆ ಬೀಗ ಹಾಕಿದ್ದೇವೆ ಎಂದು ಹೇಳಿದರು.ಉದ್ದಿಮೆದಾರರು ನಗರಸಭೆಯಿಂದ ಅಧಿಕೃತ ಉದ್ದಿಮೆ ಪರವಾನಗಿ ಪಡೆಯಬೇಕು. ಇಲ್ಲದಿದ್ದಲ್ಲಿ ನಗರಸಭೆ ಯಿಂದ ಅಧಿಕಾರಿಗಳ ನ್ನೊಳಗೊಂಡ 5 ತಂಡಗಳನ್ನು ರಚಿಸಿದ್ದು, ಪ್ರತಿ ದಿನ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆಂದು ಎಚ್ಚರಿಸಿದರು.ನಗರದಲ್ಲಿ 8 ಸಾವಿರ ವಿವಿಧ ರೀತಿ ಅಂಗಡಿಗಳಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ಉದ್ದಿಮೆ ಪರವಾನಗಿ ಪಡೆದುಕೊಂಡಿಲ್ಲದ ಕಾರಣದಿಂದ ₹3.50 ಕೋಟಿ ಬಾಕಿ ಇದೆ ಎಂದು ಅಂದಾಜಿಸಲಾಗಿದೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ದೀಪಕ್, ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ಲೋಕೇಶ್, ಆರೋಗ್ಯ ನಿರೀಕ್ಷಕರಾದ ರಂಗಪ್ಪ, ಪರಿಸರ ಅಭಿಯಂತರರಾದ ವೆಂಕಟೇಶ್, ನಾಗರಾಜ್ ಹಾಜರಿದ್ದರು. 28 ಕೆಸಿಕೆಎಂ 4ಚಿಕ್ಕಮಗಳೂರು ನಗರಸಭೆಯಿಂದ ಉದ್ದಿಮೆ ಪರವಾನಗಿ ಪಡೆಯದೆ ಅನಧಿಕೃತವಾಗಿ ನಡೆಸುತ್ತಿದ್ದ ಅಂಗಡಿ ಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಪೌರಾಯುಕ್ತರು ಹಾಗೂ ಸಿಬ್ಬಂದಿ ಬಂದ್ ಮಾಡಿಸಿ ಬೀಗ ಹಾಕಿದರು.
;Resize=(128,128))
;Resize=(128,128))