ವಿಪ ರೇಸ್: ಮುಂಚೂಣಿಯಲ್ಲಿ ಭೋವಿ ಜನಾಂಗದ ಡಿ.ಬಸವರಾಜ ಹೆಸರು

| Published : May 31 2024, 02:15 AM IST

ಸಾರಾಂಶ

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಆಕಾಂಕ್ಷಿಗಳ ಸಂಖ್ಯೆ 100ರ ಗಡಿ ದಾಟಿದ್ದು, ಶಾರ್ಟ್‌ ಲೀಸ್ಟ್‌ನಲ್ಲಿ ಅಂತಿಮ ಹಂತಕ್ಕೆ ಬಂದವರ ಪೈಕಿ ಪರಿಶಿಷ್ಟ ಜಾತಿ ಕೋಟಾದಡಿ ಭೋವಿ ಸಮಾಜದ ಹಿರಿಯ ಮುಖಂಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಹೆಸರು ಮುಂಚೂಣಿಯಲ್ಲಿದೆ.

- 4 ದಶಕಗಳ ಕಾಲ ಪಕ್ಷಕ್ಕೆ ಶ್ರಮ, ಸಿದ್ದು-ಡಿಕೆಶಿ ಕಾಲದಲ್ಲಿ ಫಲ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಆಕಾಂಕ್ಷಿಗಳ ಸಂಖ್ಯೆ 100ರ ಗಡಿ ದಾಟಿದ್ದು, ಶಾರ್ಟ್‌ ಲೀಸ್ಟ್‌ನಲ್ಲಿ ಅಂತಿಮ ಹಂತಕ್ಕೆ ಬಂದವರ ಪೈಕಿ ಪರಿಶಿಷ್ಟ ಜಾತಿ ಕೋಟಾದಡಿ ಭೋವಿ ಸಮಾಜದ ಹಿರಿಯ ಮುಖಂಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಹೆಸರು ಮುಂಚೂಣಿಯಲ್ಲಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲರೊಂದಿಗೆ ಚರ್ಚಿಸಿ, ಶಾರ್ಟ್ ಲೀಸ್ ಮಾಡಿದ್ದಾರೆ. ಅದರಲ್ಲಿ ಅಂತಿಮ ಹಂತಕ್ಕೆ ಬಂದವರಲ್ಲಿ ಪರಿಶಿಷ್ಟ ಜಾತಿಯ ಭೋವಿ ಸಮಾಜದ ಹಿರಿಯ ಮುಖಂಡ ಡಿ.ಬಸವರಾಜ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.

ವಿದ್ಯಾರ್ಥಿ ಕಾಂಗ್ರೆಸ್‌ನಿಂದ ಬಂದು ಯುವಕ ಕಾಂಗ್ರೆಸ್, ಕಾಂಗ್ರೆಸ್ ಸೇವಾದಳ ಸೇರಿದಂತೆ ಕೆಪಿಸಿಸಿ ಚುನಾಯಿತ ಸದಸ್ಯರಾಗಿ, ಕೆಪಿಸಿಸಿ ಕಾರ್ಯದರ್ಶಿಯಾಗಿ, ಹಾಲಿ ಕೆಪಿಸಿಸಿ ಪ್ರದಾನ ಕಾರ್ಯದರ್ಶಿಯಾಗಿ 4 ದಶಕದಿಂದ ಪಕ್ಷದ ಸಂಘಟನೆಯಲ್ಲಿ ಡಿ.ಬಸವರಾಜ ತೊಡಗಿಸಿದ್ದಾರೆ. ಮಾಯಕೊಂಡ ವಿಧಾನಸಭಾ ಕ್ಷೇತ್ರ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಸಾಕಷ್ಟು ಪ್ರಯತ್ನಪಟ್ಟಿದ್ದರು. ಇದೀಗ ಎಂಎಲ್‌ಸಿ ಚುನಾವಣೆಯಲ್ಲಿ ಡಿ.ಬಸವರಾಜ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಈ ಸಲ ಎಂಎಲ್‌ಸಿ ಟಿಕೆಟ್ ಸಿಕ್ಕು, ವಿಧಾನ ಪರಿಷತ್ತು ಸದಸ್ಯರಾಗುವ ಭಾಗ್ಯ ಅವರಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಒಲಿದು ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

- - - -30ಕೆಡಿವಿಜಿ12: ಡಿ.ಬಸವರಾಜ