31 ಸರ್ಕಾರಿ ಶಾಲೆಗೆ 15 ದಿನದಲ್ಲಿ ಪುಸ್ತಕ ವಿತರಣೆ

| Published : Mar 05 2025, 12:33 AM IST

ಸಾರಾಂಶ

ಶಾಸಕರಿಗೆ 2 ಲಕ್ಷ ರೂ.ವರೆಗೆ ಪುಸ್ತಕ ಖರೀದಿಗೆ ಅವಕಾಶವಿದ್ದು, ಕ್ಷೇತ್ರದಲ್ಲಿನ 31 ಸರ್ಕಾರಿ ಶಾಲೆಗಳಿಗೆ ಬರುವ 15 ದಿನಗಳೊಳಗೆ ಪುಸ್ತಕ ನೀಡುತ್ತೇ

ಕನ್ನಡಪ್ರಭ ವಾರ್ತೆ ಮೈಸೂರುಕೃಷ್ಣರಾಜ ಕ್ಷೇತ್ರದಲ್ಲಿನ 31 ಸರ್ಕಾರಿ ಶಾಲೆಗಳಿಗೆ ಪುಸ್ತಕ ಒದಗಿಸಲು ಸಿದ್ಧತೆ ನಡೆಸಿದ್ದೇನೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.ನಗರದ ನಮೋ ಯೋಗ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮೈಸೂರು ಯೋಗ ಅಸೋಸಿಯೇಷನ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿ. ಸೋಮಶೇಖರ್ ರಚನೆಯ ಪಾತಂಜಲ ಯೋಗ ದರ್ಶನ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶಾಸಕರಿಗೆ 2 ಲಕ್ಷ ರೂ.ವರೆಗೆ ಪುಸ್ತಕ ಖರೀದಿಗೆ ಅವಕಾಶವಿದ್ದು, ಕ್ಷೇತ್ರದಲ್ಲಿನ 31 ಸರ್ಕಾರಿ ಶಾಲೆಗಳಿಗೆ ಬರುವ 15 ದಿನಗಳೊಳಗೆ ಪುಸ್ತಕ ನೀಡುತ್ತೇvz. ಸರ್ಕಾರಿ ಶಾಲೆಯಲ್ಲಿ ಯಾವುದೇ ಕುಂದು ಕೊರತೆ ಇದ್ದರೂ ನಿವಾರಿಸಬೇಕು ಎಂಬ ಉದ್ದೇಶವಿದೆ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದರು.ಇತ್ತೀಚೆಗೆ ಚಾಮರಾಜ ಜೋಡಿ ರಸ್ತೆಯ ಬಾಲಕಿಯರ ಪಿಯು ಕಾಲೇಜಿಗೆ ಕಂಪ್ಯೂಟರ್ ಒದಗಿಸುವ ಕಾರ್ಯಕ್ರಮಕ್ಕೆ ಅದೇ ರಸ್ತೆಯ ಆಟೋ ಮೊಬೈಲ್ ಅಂಗಡಿಗಳು ಸಹಕಾರ ನೀಡಿದ್ದವು ಎಂದು ಅವರು ಸ್ಮರಿಸಿದರು.ಕುರುಬಾರಹಳ್ಳಿ ಸರ್ಕಾರಿ ಶಾಲೆಯಲ್ಲಿ ಗಣಿತ ಲ್ಯಾಬ್, ಕುವೆಂಪುನಗರದ ಕೆಪಿಎಸ್ ಶಾಲೆಗೆ ಖಾಸಗಿ ಸಹಭಾಗಿತ್ವದಲ್ಲಿ ಸ್ಟೆಮ್ ಲ್ಯಾಬ್ ಕಲಿಕೆಯಲ್ಲಿನ ಹೊಸತನಕ್ಕೆ ಸಾಕ್ಷಿಯಾಗಿದೆ. ಗಣಿತದ ಮಹತ್ವ ಸಾರಿದ ಶ್ರೀನಿವಾಸ್ ರಾವಾನುಜನ್ ಅವರ ಫೋಟೋವನ್ನು ಶಾಲೆಗಳಿಗೆ ನೀಡುವ ಕೆಲಸ ಮಾಡಿದ್ದೇನೆ. ರಾತ್ರಿ ಹೊತ್ತಿನಲ್ಲಿ ಅನೈತಿಕ ಚಟುವಟಿಕೆಗಳ ನಿಯಂತ್ರಣಕ್ಕೆ ಸರ್ಕಾರಿ ಶಾಲೆಗಳ ಕಾಂಪೌಂಡ್ ಎತ್ತರವಾಗಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.ಯೋಗ ಕುರಿತು ಅನೇಕ ಪುಸ್ತಕಗಳು ಬಂದಿವೆ. ಮೈಸೂರು ಎಂದರೆ ಯೋಗ. ಹೊರಗಿನವರು ಯೋಗ ಕಲಿಯಲು ಬರುತ್ತಿದ್ದಂತೆಯೇ ಸ್ಥಳೀಯರ ಆರ್ಥಿಕ ಸ್ಥಿತಿಯೂ ಉತ್ತಮವಾಗಿದೆ. ಇಂದು ಮೈಸೂರಿಗರು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಬೆಳೆಯುತ್ತಿರುವುದಾಗಿ ಅವರು ಹೇಳಿದರು.‘ಪಾತಂಜಲ ಯೋಗ ದರ್ಶನ ಕೃತಿಯನ್ನು ಗೋಕುಲಂನ ಯೋಗ ದರ್ಶನಂ ಸಂಸ್ಥಾಪಕ ಸಂತೋಷ್ ಕುವಾರ್ ಲೋಕಾರ್ಪಣೆಗೊಳಿಸಿದರು. ಕೆ. ಲೀಲಾಪ್ರಕಾಶ್ ಕೃತಿ ಪರಿಚಯಿಸಿದರು.ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಉಪಾಧ್ಯಕ್ಷ ಎನ್. ಅನಂತ, ಸಂಘದ ಅಧ್ಯಕ್ಷ ಸಿ. ರಮೇಶ್ ಶೆಟ್ಟಿ, ಉಪಾಧ್ಯಕ್ಷ ಎನ್. ಪಶುಪತಿ, ನಗರ ಪಾಲಿಕೆ ಮಾಜಿ ಸದಸ್ಯ ಬಿ.ವಿ. ಮಂಜುನಾಥ್, ಆಶಾದೇವಿ ಮೊದಲಾದವರು ಇದ್ದರು.