ಬಿಕೋ ಎನ್ನುತ್ತಿರುವ ಹೊಸ ಬಬಲಾದಿ ಮಠ

| Published : Mar 23 2025, 01:35 AM IST

ಸಾರಾಂಶ

ಜಮಖಂಡಿಜಮಖಂಡಿ ನಗರದಲ್ಲಿರುವ ಹೊಸ ಬಬಲಾದಿ ಮಠದ ಸ್ವಾಮೀಜಿ ಅವರನ್ನು ಗೋಕಾಕನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಸುದ್ದಿ ಬರುತ್ತಿದ್ದಂತೆ ಮಠದಲ್ಲಿರುವ ಸ್ವಾಮೀಜಿಗಳ ಸಂಬಂಧಿಕರು ಹಾಗೂ ಕುಟುಂಬಸ್ಥರು ಮಠಕ್ಕೆ ಬೀಗ ಹಾಕಿದ್ದು ಬೇರೆ ಕಡೆಗೆ ಹೊರಟು ಹೋಗಿದ್ದಾರೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ಜಮಖಂಡಿ ನಗರದಲ್ಲಿರುವ ಹೊಸ ಬಬಲಾದಿ ಮಠದ ಸ್ವಾಮೀಜಿ ಅವರನ್ನು ಗೋಕಾಕನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಸುದ್ದಿ ಬರುತ್ತಿದ್ದಂತೆ ಮಠದಲ್ಲಿರುವ ಸ್ವಾಮೀಜಿಗಳ ಸಂಬಂಧಿಕರು ಹಾಗೂ ಕುಟುಂಬಸ್ಥರು ಮಠಕ್ಕೆ ಬೀಗ ಹಾಕಿದ್ದು ಬೇರೆ ಕಡೆಗೆ ಹೊರಟು ಹೋಗಿದ್ದಾರೆ. ಜಮಖಂಡಿ ನಗರದಲ್ಲಿ ಮಠ ನಿರ್ಮಾಣವಾಗಿ ಮೂರು ವರ್ಷಗಳಾಗಿದ್ದರಿಂದ ಇಲ್ಲಿ ಹೇಳಿಕೊಳ್ಳುವಷ್ಟು ಭಕ್ತರ ಸಂದಣಿ ಇರುತ್ತಿರಲಿಲ್ಲ. ಸ್ಥಳೀಯರ ಮಾಹಿತಿಯ ಪ್ರಕಾರ ಶನಿವಾರ ಬೆಳಗಿನಿಂದಲೇ ಮಠದ ಹತ್ತಿರ ಯಾರೂ ಸುಳಿದಿಲ್ಲ. ಸ್ವಾಮಿಗಳು ಬಳಸುತ್ತಿದ್ದ ಬೊಲೆರೋ ಹಾಗೂ ಬುಲೆಟ್‌ ವಾಹನಗಳನ್ನು ಮಠದ ಮುಂದೆ ನಿಲ್ಲಿಸಲಾಗಿದ್ದು, ಮಠಕ್ಕೆ ಸಂಬಂಧಿಸಿದ ಯಾರೊಬ್ಬರೂ ಅಲ್ಲಿರಲಿಲ್ಲ.