ನಾಳೆ ಹನುಮಂತ ದೇವರ ನೂತನ ವಿಗ್ರಹ ಪ್ರತಿಷ್ಠಾಪನೆ

| Published : Feb 11 2024, 01:49 AM IST

ನಾಳೆ ಹನುಮಂತ ದೇವರ ನೂತನ ವಿಗ್ರಹ ಪ್ರತಿಷ್ಠಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಫೆ.12ರಂದು ಮರದಲ್ಲಿ ಕೆತ್ತಿಸಿ ನೂತನ ಮೂರ್ತಿ ಪ್ರತಿಷ್ಠಾಪಿಸಲಾಗುವುದು ಎಂದು ತಿಳಿಸಿದರು.ಭಾನುವಾರ ರಾತ್ರಿ 8ರಿಂದ ನೂತನ ಮೂರ್ತಿಗೆ ಶಿವಮೊಗ್ಗದ ಮಹೇಶ್ ಭಟ್ ರಿಂದ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಲಿವೆ. ಮರುದಿನ ಸೋಮವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಮರದಲ್ಲಿ ಕೆತ್ತಿದ ಹನುಮಂತ ದೇವರ ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ ಜರುಗಲಿದೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಸುಕ್ಷೇತ್ರ ಸೊರಟೂರು ಗ್ರಾಮದಲ್ಲಿ ಹನುಮಂತ ದೇವರ ನೂತನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ಫೆ.12 ರಂದು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಓ.ಹನುಮಂತಪ್ಪ ಹಾಗೂ ಕಾರ್ಯದರ್ಶಿ ಜೆ.ರಾಮನಗೌಡ ತಿಳಿಸಿದರು.

ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೊರಟೂರು ಗ್ರಾಮದಲ್ಲಿರುವುದು ಮರದ ಹನುಮ ಮೂರ್ತಿಯಾಗಿದ್ದು, ಪ್ರತಿ 12 ವರ್ಷಕ್ಕೊಮ್ಮೆ ಹನುಮಂತ ದೇವರ ನೂತನ ವಿಗ್ರಹ ಪ್ರತಿಷ್ಠಾಪಿಸುತ್ತಿದ್ದು, ಫೆ.12ರಂದು ಮರದಲ್ಲಿ ಕೆತ್ತಿಸಿ ನೂತನ ಮೂರ್ತಿ ಪ್ರತಿಷ್ಠಾಪಿಸಲಾಗುವುದು ಎಂದು ತಿಳಿಸಿದರು.

ಭಾನುವಾರ ರಾತ್ರಿ 8ರಿಂದ ನೂತನ ಮೂರ್ತಿಗೆ ಶಿವಮೊಗ್ಗದ ಮಹೇಶ್ ಭಟ್ ರಿಂದ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಲಿವೆ. ಮರುದಿನ ಸೋಮವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಮರದಲ್ಲಿ ಕೆತ್ತಿದ ಹನುಮಂತ ದೇವರ ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ ಜರುಗಲಿದೆ.

ಹನುಮಂತ ದೇವರ ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಗ್ರಾಮದ ಹೊಂಡದ ರಾಮೇಶ್ವರ ದೇವರು, ಮಾರಿಕೊಪ್ಪದ ಹಳದಮ್ಮದೇವಿ, ತುಗ್ಗಲಹಳ್ಳಿ ಬಸವಣ್ಣ ದೇವರು, ಸೋಮನಮಲ್ಲಾಪುರದ ಆಂಜನೇಯ ಸ್ವಾಮಿ, ಜೀನಹಳ್ಳಿ ಮರಿಯಮ್ಮದೇವಿ, ರಟ್ಟೆಹಳ್ಳಿ ದುರಗಮ್ಮ ದೇವರ ಉತ್ಸವ ಮೂರ್ತಿಗಳ ಇರಲಿವೆ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಸೇರಲಿದ್ದು, ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಸಮಿತಿ ಸದಸ್ಯರಾದ ಬಿ.ಡಿ.ತಿಮ್ಮಯ್ಯ, ಎನ್.ನಾಗೇಶ್‍ರಾವ್, ಎಂ.ಪರಶಪ್ಪ, ಟಿ.ಆಂಜನೇಯ. ಎ.ಕೆ.ಹನುಮಂತಪ್ಪ, ಬಿ.ರಾಮಪ್ಪ, ಗವಿಸಿದ್ದಪ್ಪ ಸೇರಿ ಗ್ರಾಮದ ಹಲವು ಮುಖಂಡರಿದ್ದರು.