ಸರ್ಕಾರಿ ಶಾಲೆಗಳಲ್ಲಿ ಅತ್ಯಂತ ಪ್ರತಿಭಾವಂತ, ಸೂಕ್ತ ತರಬೇತಿ ಹೊಂದಿದ ಶಿಕ್ಷಕರಿದ್ದಾರೆ. ಉತ್ತಮ ಗುಣಮಟ್ಟದ ಶಿಕ್ಷಣವೂ ದೊರೆಯುತ್ತದೆ. ಆದರೆ ಖಾಸಗಿ ಶಾಲೆಗಳಿಗೆ ಮಾರುಹೋಗಿ ಪೋಷಕರು ವೃಥಾ ಹಣ ಖರ್ಚು ಮಾಡಿ ಮಕ್ಕಳನ್ನು ಶಿಕ್ಷಣಕ್ಕೆ ಸೇರಿಸುವುದು ವಿಷಾದನೀಯ ಎಂದು ಚಟ್ನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ತಿಪ್ಪೇಶಪ್ಪ ಪಿ. ಹೊನ್ನಾಳಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

- ಚಟ್ನಹಳ್ಳಿ ಸರ್ಕಾರಿ ಪ್ರೌಢಶಾಲೆಯಿಂದ ದಾಖಲಾತಿ ಆಂದೋಲನ

- - -

ಹೊನ್ನಾಳಿ: ಸರ್ಕಾರಿ ಶಾಲೆಗಳಲ್ಲಿ ಅತ್ಯಂತ ಪ್ರತಿಭಾವಂತ, ಸೂಕ್ತ ತರಬೇತಿ ಹೊಂದಿದ ಶಿಕ್ಷಕರಿದ್ದಾರೆ. ಉತ್ತಮ ಗುಣಮಟ್ಟದ ಶಿಕ್ಷಣವೂ ದೊರೆಯುತ್ತದೆ. ಆದರೆ ಖಾಸಗಿ ಶಾಲೆಗಳಿಗೆ ಮಾರುಹೋಗಿ ಪೋಷಕರು ವೃಥಾ ಹಣ ಖರ್ಚು ಮಾಡಿ ಮಕ್ಕಳನ್ನು ಶಿಕ್ಷಣಕ್ಕೆ ಸೇರಿಸುವುದು ವಿಷಾದನೀಯ ಎಂದು ಚಟ್ನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ತಿಪ್ಪೇಶಪ್ಪ ಪಿ. ಅಭಿಪ್ರಾಯಪಟ್ಟರು.

ಮಂಗಳವಾರ ಸರ್ಕಾರಿ ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಶಾಲೆಗೆ 8ನೇ ತರಗತಿಗೆ ಮಕ್ಕಳನ್ನು ಸೇರಿಸುವಂತೆ ಸುತ್ತಮುತ್ತಲ ಪ್ರಾಥಮಿಕ ಶಾಲೆಗಳಿಗೆ ಸಹೋದ್ಯೋಗಿಗಳೊಂದಿಗೆ ಭೇಟಿ ನೀಡಿ ಮನವಿ ಮಾಡುತ್ತಿದ್ದೇವೆ. 7ನೇ ತರಗತಿ ಉತ್ತೀರ್ಣರಾಗಿ 2026-27ನೇ ಶ್ರೈಕ್ಷಣಿಕ ವರ್ಷಕ್ಕೆ 8ನೇ ತರಗತಿಗೆ ಸೇರಬಯಸುವ ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತಿದ್ದೇವೆ. ಜೊತೆಗೆ ಆ ಶಾಲೆಯಲ್ಲಿ ಶಿಕ್ಷಕರ ವರ್ಗದವರನ್ನು, ಪೋಷಕರಲ್ಲಿ ಸರ್ಕಾರಿ ಶಾಲೆಗಳ ಮಹತ್ವ ತಿಳಿಸುತ್ತಿದ್ದು, ಮಕ್ಕಳನ್ನು ದಾಖಲುಸಲು ಮನವಿ ಮಾಡಲಾಗಿದೆ ಎಂದರು.

2026-27ನೇ ಸಾಲಿಗೆ ತಮ್ಮ ಶಾಲೆಗೆ ಮಕ್ಕಳ ಸಂಖ್ಯೆ ವೃದ್ಧಿಸುವ ಜೊತೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಮಕ್ಕಳ ಪೋಷಕರು ಈ ಬಗ್ಗೆ ಗಮನಹರಿಸಿ ಚಟ್ನಹಳ್ಳಿ ಸುತ್ತಮುತ್ತ ಗ್ರಾಮಗಳ ಪೋಷಕರು ತಮ್ಮ ಮಕ್ಕಳನ್ನು ಚಟ್ನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಸೇರಿಸಬೇಕು ಎಂದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ಮಾಡಿದ ಸಂದರ್ಭ ಅವರು ಹೇಳಿದರು.

ಚಟ್ನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಹಾಲೇಶಾಚಾರ್, ಸಹಶಿಕ್ಷಕಿ ದಾಕ್ಷಾಯಣಿ ಸಿ.ಬಿ., ಪ್ರೌಢಶಾಲೆ ಸಹಶಿಕ್ಷಕ ವಿ.ಪರಮೇಶ್ವರಪ್ಪ, ಪ್ರಥಮ ದರ್ಜೆ ಸಹಾಯಕ ಎ.ಎಂ. ರಮೇಶ್, ಚಟ್ನಹಳ್ಳಿ ಗ್ರಾಮಸ್ಥರಾದ ಈಶ್ವರಪ್ಪ ಬಿ. ವೀರಪ್ಪ ಕೆ. ಮುಂತಾದವರು ಇದ್ದರು.

- - - (** ಈ ಫೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಬಹುದು)

-9ಎಚ್.ಎಲ್.ಐ2:

ಚಟ್ನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರು, ಶಿಕ್ಷಕರು, ಸಿಬ್ಬಂದಿ ಶಾಲಾ ದಾಖಲಾತಿ ಆಂದೋಲನ ನಡೆಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ಪಾಸಾದ ಮಕ್ಕಳು ಸರ್ಕಾರಿ ಪ್ರೌಢಶಾಲೆಗೆ ದಾಖಲಾಗುವಂತೆ ಮನವೊಲಿಕೆ ಪ್ರಯತ್ನ ಮಾಡಿದರು.