ಚಿಕ್ಕಮಗಳೂರುಕಾಂಗ್ರೆಸ್ ಹೆಸರು ಗಾಂಧೀಜಿ ಜತೆ ಜೋಡಣೆಯಾಗಿದೆ ಎಂಬ ಒಂದೇ ಕಾರಣಕ್ಕೆ ನರೇಗಾ ಯೋಜನೆಯಿಂದ ಗಾಂಧೀಜಿ ಹೆಸರು ತೆಗೆಯುವ ಹುನ್ನಾರ ನಡೆಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.
ನರೇಗಾ ಯೋಜನೆ ಇಡೀ ವಿಶ್ವದಲ್ಲೇ ದೊಡ್ಡ ಪ್ರಮಾಣದಲ್ಲಿ ಕೆಲಸ ಕೊಡುವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಾಂಗ್ರೆಸ್ ಹೆಸರು ಗಾಂಧೀಜಿ ಜತೆ ಜೋಡಣೆಯಾಗಿದೆ ಎಂಬ ಒಂದೇ ಕಾರಣಕ್ಕೆ ನರೇಗಾ ಯೋಜನೆಯಿಂದ ಗಾಂಧೀಜಿ ಹೆಸರು ತೆಗೆಯುವ ಹುನ್ನಾರ ನಡೆಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ ನರೇಗಾ ಯೋಜನೆ ಇಡೀ ವಿಶ್ವದಲ್ಲೇ ದೊಡ್ಡ ಪ್ರಮಾಣದಲ್ಲಿ ಕೆಲಸ ಕೊಡುವ ಕಾರ್ಯಕ್ರಮ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಇದಲ್ಲದೆ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಸಹ ನರೇಗಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ. ಇದನ್ನು ಸಹಿಕೊಳ್ಳಲಾಗದ ಬಿಜೆಪಿ ಯೋಜನೆಯಿಂದ ಗಾಂಧೀಜಿ ಹೆಸರನ್ನೇ ತೆಗೆಯುತ್ತಿದೆ ಎಂದು ಟೀಕಿಸಿದರು.ಧರ್ಮಸ್ಥಳ ಪ್ರಕರಣ ಸಂಬಂಧದ ಅಂತಿಮ ತನಿಖಾ ವರದಿ ಇನ್ನೂ ಕೊಟ್ಟಿಲ್ಲ. ಎಲ್ಲೆಲ್ಲಿ ಸಾಕ್ಷಿ ಕಲೆ ಹಾಕಬೇಕಿತ್ತು ಅಲ್ಲೆಲ್ಲಾ ಅಧಿಕಾರಿಗಳು ಸಾಕ್ಷಿ ಸಂಗ್ರಹಿಸಿದ್ದಾರೆ. ಅದನ್ನೆಲ್ಲ ಕ್ರೋಡಿಕರಿಸಿ ಅಂತಿಮ ವರದಿ ನೀಡುತ್ತಾರೆ. ಬಳಿಕ ಅದನ್ನು ನಾವು ಬಹಿರಂಗಪಡಿಸುತ್ತೇವೆ ಎಂದು ಮಾಹಿತಿ ನೀಡಿದರು.
ಅಂತಿಮ ತನಿಖಾ ವರದಿಗೆ ಕಾಲಮಿತಿ ಹೇಳಲು ಸಾಧ್ಯವಿಲ್ಲ. ಉಪಗ್ರಹ ಉಡಾವಣೆ ಗಾದರೆ ಇಂದೆ ಎಂದು ಹೇಳಬಹುದು. ಆದರೆ ತನಿಖಾ ವರದಿಯನ್ನು ಸಂಪೂರ್ಣವಾಗಿ ಸಿದ್ಧಪಡಿಸಿ ನೀಡಿದ ಬಳಿಕ ಆದಷ್ಟು ಬೇಗನೆ ಬಿಡುಗಡೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದರು.ಸ್ಥಳೀಯ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್
ಮುಂಬರುವ ಗ್ರಾಪಂ, ತಾಪಂ, ಜಿಪಂ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡಲು ಗುರುವಾರ ನಡೆದ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿದ್ದೇವೆ. ಬಹುಶಃ ಜಿಬಿಎ ಚುನಾವಣೆಗೂ ಇದೆ ಅನುಕರಣೆ ಮಾಡುತ್ತಾರೆ ಎಂದರು.ರಾಜ್ಯದಲ್ಲಿ 17 ಸಾವಿರ ಪೊಲೀಸ್ ಪೇದೆ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡುವ ಉದ್ದೇಶದಿಂದ ರೆಕ್ಯೂಟ್ಮೆಂಟ್ ಬೋರ್ಡ್ ರಚಿಸಲು ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಲಾಗಿದೆ. ಇದು ರಚನೆಯಾದರೆ ಶೀಘ್ರ ನೇಮಕಾತಿ ಪ್ರಕ್ರಿಯೆ ಆರಂಭ ಗೊಳ್ಳಲಿದೆ. ಈ ಹಿಂದೆ ನನೆಗುದಿಗೆ ಬಿದ್ದಿದ್ದ 900 ಪಿಎಸ್ಐ ಹುದ್ದೆಗಳ ನೇಮಕಾತಿ ಮಾಡಿದ್ದೇವೆ. ಅವರೆಲ್ಲರೂ ತರಬೇತಿ ಯಲ್ಲಿದ್ದು ಇನ್ನೆರಡು ತಿಂಗಳಲ್ಲಿ ಸೇವೆಗೆ ಲಭ್ಯರಾಗಲಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ 33 ಡಿಸಿಆರ್ ಐ ಪೊಲೀಸ್ ಠಾಣೆ ಆರಂಭ ಮಾಡಿದ್ದೇವೆ. ಆದರೆ ಸಿಬ್ಬಂದಿ ಕೊರತೆ ಇದೆ. ಹೊಸದಾಗಿ ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಯುವುದರಿಂದ ಕೆಲಸದ ಸಮಯದಲ್ಲೇ ಸಮಸ್ಯೆ ಪರಿಹರಿಯುವ ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಪಿ.ಅಂಶುಮಂತ್, ಪ್ರಮುಖರಾದ ಹಿರೇಮಗಳೂರು ರಾಮಚಂದ್ರ, ಶ್ರೀಜಿತ್ ಗೌಡ, ತನೋಜ್ ಕುಮಾರ್ ನಾಯ್ದು ಮತ್ತಿತರರಿದ್ದರು.
