ಸಾರಾಂಶ
ರೈತರ ಮೊಗದಲ್ಲಿ ಮಂದಹಾಸ । ವಿಶ್ವವಿಖ್ಯಾತ ಹಳೆಬೀಡು ದೇಗುಲದ ಬಲಭಾಗದಲ್ಲಿರುವ ಕೆರೆ । 800 ಎಕರೆ ವಿಸ್ತೀರ್ಣ
ಕನ್ನಡಪ್ರಭ ವಾರ್ತೆ ಹಾಸನಇತಿಹಾಸ ಪ್ರಸಿದ್ಧ ದ್ವಾರಸಮುದ್ರ ಕೆರೆ ಮೈತುಂಬಿ ಕೋಡಿ ಹರಿಯುತ್ತಿರುವುದರಿಂದ ರೈತರಲ್ಲಿ ಸಂತಸ ಮೂಡಿದೆ. ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಯಾದಂತಹ ಹಳೆಬೀಡು ದೇವಾಲಯದ ಬಲಭಾಗದಲ್ಲಿದೆ. ಸುಮಾರು ೮೦೦ ಎಕರೆ ವಿಸ್ತೀರ್ಣದ ದ್ವಾರಸಮುದ್ರ ಕೆರೆ. ಸಮುದ್ರದೋಪಾದಿಯಲ್ಲಿ ಇರುವ ಈ ಐತಿಹಾಸಿಕ ಕೆರೆ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಮಂತ್ರಿ ಕೇತು ಮಲ್ಲನಿಂದ ನಿರ್ಮಾಣಗೊಂಡಿದೆ.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ಎರಡು ಕೋಟಿ ರು. ಹಣದಲ್ಲಿ ಕೋಡಿಗಳ ರಿಪೇರಿ ಮತ್ತು ಸಣ್ಣಪುಟ್ಟ ಕಾಲುವೆಗಳನ್ನು ರಿಪೇರಿ ಮಾಡಲಾಗಿತ್ತು. ಹಿಂದಿನ ಶಾಸಕ ಕೆ.ಎಸ್.ಲಿಂಗೇಶ್ ನೇತೃತ್ವದಲ್ಲಿ ಪಿಡಬ್ಲ್ಯುಡಿ ಇಲಾಖೆ ವತಿಯಿಂದ ಐದು ಕೋಟಿ ರು. ವೆಚ್ಚದಲ್ಲಿ ದ್ವಾರಸಮುದ್ರ ಕೆರೆಯ ಏರಿಯನ್ನು ದುರಸ್ತಿಪಡಿಸಲಾಯಿತು. ಏರಿ ಮೇಲೆ ಸರಾಗವಾಗಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.ಹಳೆಬೀಡಿನ ದ್ವಾರಸಮುದ್ರಕ್ಕೆ ಮಳೆ ಹಾಗೂ ಸಣ್ಣಪುಟ್ಟ ಕೆರೆಗಳ ನೀರಿನ ಜತೆಗೆ ಎತ್ತಿನಹೊಳೆಯ ನೀರು ಅಪಾರ ಪ್ರಮಾಣದಲ್ಲಿ ಬಂದಿದೆ. ಹಳೆಬೀಡು ಕೆರೆಯಿಂದ ಮಾಯಗೊಂಡನಹಳ್ಳಿ, ಕರಿಕಟ್ಟೆಹಳ್ಳಿ, ಬೆಳವಾಡಿ ಮುಖಾಂತರ ಚಿತ್ರದುರ್ಗ ಜಿಲ್ಲೆಯ ಮಾರಿ ಕಣಿವೆಗೆ ನೀರು ಹೋಗುತ್ತದೆ. ಸುಮಾರು ಸಾವಿರಾರು ಎಕರೆ ಭೂಮಿಗೆ ನೀರಾವರಿಯನ್ನು ಒದಗಿಸುವ ಕೆರೆಯೇ ದ್ವಾರಸಮುದ್ರ ಕೆರೆ. ಈ ದ್ವಾರಸಮದ್ರ ಕೆರೆಯಲ್ಲಿ ನೀರು ಇದ್ದರೆ ಸುಮಾರು ೩೦ ರಿಂದ ೪೦ ಕೀ.ಮೀ.ವರೆಗೆ ಭೂಮಿಯಲ್ಲಿ ತೇವಾಂಶ ಇರುತ್ತದೆ ಎಂದು ಬಾಣಾವರ ಹೋಬಳಿ ಹಾಗೂ ಜಾವಗಲ್ ಹೋಬಳಿ ಜನತೆ ತಿಳಿಸುತ್ತಾರೆ.
ಇದೀಗ ಕೆರೆ ತುಂಬಿರುವುದರಿಂದ ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ದೇವಾಲಯವನ್ನು ವೀಕ್ಷಣೆ ಮಾಡಿಕೊಂಡು ಕೆರೆ ಕೋಡಿಯಲ್ಲಿ ೫ ರಿಂದ ೧೦ ನಿಮಿಷಗಳನ್ನು ಸಂತೋಷವಾಗಿ ಕಾಲ ಕಳೆಯುತ್ತಿದ್ದಾರೆ. ಇದರ ಜತೆಗೆ ಹೊಯ್ಸಳ ಟೂರಿಸ್ಟ್ ಸಂಸ್ಥೆ ವತಿಯಿಂದ ದೋಣಿಗಳಲ್ಲಿ ವಿಹಾರಗಳಲ್ಲಿ ಹೋಗಿ ಸಂತೋಷ ವ್ಯಕ್ತಪಡಿಸಿದರು.ಎತ್ತಿನ ಹೊಳೆಯಿಂದ ನೀರೆತ್ತುವ ಕಾರ್ಯ ಯಶಸ್ವಿಯಾಗಿದೆ. ೮ ಚೆಕ್ ಡ್ಯಾಂಗಳ ಸಂಗ್ರಹ ೨೪ ಟಿಎಂಸಿ ನೀರು ಬಯಲು ಸೀಮೆಗೆ ಹರಿಸುವ ಪ್ರಥಮ ಹಂತದ ಕೆಲಸ ಯಶಸ್ವಿಯಾಗಿದೆ. ಬುಧವಾರ ಸತತವಾಗಿ ೬ ಗಂಟೆ ಕಾಲ ೨೫೦ ಕ್ಯುಸೆಕ್ ನೀರು ಹಳೆಬೀಡಿನ ಕೆರೆಗೆ ಬಂದಿದೆ.
ಜೀಪ್ ಚಂದ್ರು, ಗ್ರಾಪಂ ಸದಸ್ಯನಮ್ಮ ಪಕ್ಷದ ದೀಮಂತ ನಾಯಕ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಕಾಲದಲ್ಲಿ ರಣಘಟ್ಟ ಯೋಜನೆ ಚಾಲನೆ ನೀಡಿದರು. ಇನ್ನು ಮುಂದೆ ಹಳೇಬೀಡು ಜನತೆಗೆ ಶಾಶ್ವತವಾಗಿ ನೀರಾವರಿ ಇರುತ್ತದೆ.
ಗೋಣಿಸೋಮನಹಳ್ಳಿ ಪ್ರಸನ್ನ, ಬಿಜೆಪಿ ಮುಖಂಡ