ಪಟ್ಟಣದ ವಿಶ್ವಕರ್ಮ ಸಮಾಜ ವಿಕಾಸ ಕಮಿಟಿಯಿಂದ ಮೌನೇಶ್ವರ ಪ್ರಭುಗಳ ೪೬ನೇ ವರ್ಷದ ಪಾಲಕಿ ಮಹೋತ್ಸವ ಕಾರ್ಯಕ್ರಮ ಗುರುವಾರ ವೈಭವಯುತವಾಗಿ ಜರುಗಿತು.
ಕನ್ನಡಪ್ರಭ ವಾರ್ತೆ ಗಜೇಂದ್ರಗಡ
ಪಟ್ಟಣದ ವಿಶ್ವಕರ್ಮ ಸಮಾಜ ವಿಕಾಸ ಕಮಿಟಿಯಿಂದ ಮೌನೇಶ್ವರ ಪ್ರಭುಗಳ ೪೬ನೇ ವರ್ಷದ ಪಾಲಕಿ ಮಹೋತ್ಸವ ಕಾರ್ಯಕ್ರಮ ಗುರುವಾರ ವೈಭವಯುತವಾಗಿ ಜರುಗಿತು.ಇಲ್ಲಿನ ಮೌನೇಶ್ವರ ದೇವಸ್ಥಾನದಿಂದ ಸ್ವಾಮಿಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲವಾದ್ಯ ಮೇಳ ಹಾಗೂ ಪುರವಂತರ ಸೇವೆಯೊಂದಿಗೆ ಪಾಲಕಿ ಉತ್ಸವದ ಮೆರವಣಿಯು ಸ್ಥಳೀಯ ವಿರೂಪಾಕ್ಷೇಶ್ವರ ದೇವಸ್ಥಾನ, ಕಟ್ಟಿಬಸವೇಶ್ವರ ರಂಗಮಂದಿರ, ಕೊಳ್ಳಿಯವರ ಕತ್ರಿ, ಭಜರಂಗ ವೃತ್ತ ತಲುಪಿದ ಮೆರವಣಿಗೆ ಮಾಜಿ ಸಚಿವ ಕಳಕಪ್ಪ ಬಂಡಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮೌನೇಶ್ವರ ಪ್ರಭುಗಳ ಪಾಲಕಿಗೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಇಲ್ಲಿನ ಸರಾಫ್ ಬಜಾರ, ದುರ್ಗಾ ಸರ್ಕಲ್ ಮೂಲಕ ಮೌನೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು.
ಇದ್ದಕ್ಕೂ ಮುನ್ನ ಬೆಳಗ್ಗೆ ಶಿರಸಂಗಿಯ ಶ್ರೀಕಾಂತಾಚಾರ್ಯ ಕೆಂಪಣ್ಣವರ ಸಾನಿಧ್ಯದಲ್ಲಿ ಮೌನೇಶ್ವರ ಸ್ವಾಮಿಯ ಪಂಚಾಮೃತ ಅಭಿಷೇಕ, ಅಷ್ಟೋತ್ತರದೊಂದಿಗೆ ವಿಶೇಷ ಪೂಜೆ ನಡೆಯಿತು. ಪಾಲಕಿ ಉತ್ಸವದಲ್ಲಿ ನೂರಾರು ಮಹಿಳೆಯರು ಕಳಸದಿಂದ ಆರತಿ ಮಾಡಿದರು. ನಂತರ ದೇವಸ್ಥಾನ ಬಳಿ ಮೆರವಣಿಗೆ ಮುಕ್ತಾಯಗೊಂಡಿತು. ನಂತರ ಸದ್ಭಕ್ತರಿಗೆ ಮಹಾಪ್ರಸಾದ ವಿತರಣೆ ಜರುಗಿತು.ಸಮಾಜದ ಅಧ್ಯಕ್ಷ ವಿರೂಪಾಕ್ಷಪ್ಪ ಬಡಿಗೇರ, ಉಪಾಧ್ಯಕ್ಷ ಶ್ರೀನಿವಾಸ ಸವದಿ, ಎಸ್.ಐ. ಪತ್ತಾರ, ಮಲ್ಲಪ್ಪ ಬಡಿಗೇರ, ವಿಠ್ಠಲ ಸವದಿ, ಪ್ರಾಣೇಶ ಹೊರಪೇಟಿ, ನಾಗರಾಜ ಸವದಿ ವೀರೇಶ ಬಡಿಗೇರ, ಶಂಕ್ರಪ್ಪ ಬಡಿಗೇರಿ, ಸಂತೋಷ ಬೆನಹಾಳ, ಕೃಷ್ಣಾ ಕಂಚಗಾರ, ಮೌನೇಶ್ವರ ಅಕ್ಕಸಾಲಿಗರ, ಪ್ರದೀಪ ಅಕ್ಕಸಾಲಿಗರ, ಕಿರಣ ಸವದಿ, ರಾಘು ಸವದಿ, ಉದಯ ಅರಕಸಾಲಿ, ರಾಘು ಕಮ್ಮಾರ, ಮೌನೇಶ ಕಮ್ಮಾರ, ರಂಗನಾಥ ಕಮ್ಮಾರ ಇತರರು ಇದ್ದರು.