ಸಾರಾಂಶ
ಪುಣೆಯಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಕೆಲಸದ ಅವಧಿ ಮುಗಿದಿದೆ ಎನ್ನುವ ಕಾರಣ ನೀಡಿ ಪೈಲಟ್ ವಿಮಾನ ಹಾರಿಸಲು ನಿರಾಕರಿಸಿದ್ದು, ಈ ಹಿನ್ನೆಲೆಯಲ್ಲಿ ವಿಮಾನ 5 ಗಂಟೆ ವಿಳಂಬವಾಗಿ ಟೇಕಾಫ್ ಆದ ಘಟನೆ ನಡೆದಿದೆ.
ಪುಣೆ: ಪುಣೆಯಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಕೆಲಸದ ಅವಧಿ ಮುಗಿದಿದೆ ಎನ್ನುವ ಕಾರಣ ನೀಡಿ ಪೈಲಟ್ ವಿಮಾನ ಹಾರಿಸಲು ನಿರಾಕರಿಸಿದ್ದು, ಈ ಹಿನ್ನೆಲೆಯಲ್ಲಿ ವಿಮಾನ 5 ಗಂಟೆ ವಿಳಂಬವಾಗಿ ಟೇಕಾಫ್ ಆದ ಘಟನೆ ನಡೆದಿದೆ.
ಸೆ.24ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಡರಾತ್ರಿ 12.45ಕ್ಕೆ ಪುಣೆಯಿಂದ ಬೆಂಗಳೂರಿಗೆ 6ಇ 361 ಇಂಡಿಗೋ ವಿಮಾನ ಹೊರಡಬೇಕಿತ್ತು. ಆದರೆ ಪೈಲಟ್ ತನ್ನ ಕರ್ತವ್ಯದ ಅವಧಿ ಮುಗಿದಿದೆ ಎಂಬ ಕಾರಣ ನೀಡಿ ವಿಮಾನ ಹಾರಿಸಲು ನಿರಾಕರಿಸಿದ್ದಾನೆ. ಕೊನೆಗೆ ಸುಮಾರು 5 ಗಂಟೆ ವಿಳಂಬವಾಗಿ ಬೆಳಗಿನ ಜಾವ 5.44ಕ್ಕೆ ಪುಣೆಯಿಂದ ವಿಮಾನ ಟೇಕಾಫ್ ಆಗಿ ಮುಂಜಾನೆ 6.49ಕ್ಕೆ ಬೆಂಗಳೂರು ತಲುಪಿದೆ.ಪೈಲಟ್ ವಿಮಾನ ಹಾರಿಸಲು ನಿರಾಕರಿಸುತ್ತಿರುವುದು, ಪ್ರಯಾಣಿಕರು ಕಾಯುತ್ತಿರುವ ವಿಡಿಯೋವನ್ನು ಅವಿಷೇಕ್ ಗೋಯಲ್ ಎನ್ನುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪೈಲೆಟ್ ಒಬ್ಬರನ್ನೇ ಯಾಕೆ ದೂಷಿಸಬೇಕು. ಕಂಪನಿಯನ್ನು ದೂಷಿಸಿ, ಸಿಬ್ಬಂದಿಯನ್ನಲ್ಲ ಎಂದು ಬರೆದುಕೊಂಡಿದ್ದಾರೆ.
ಇಂಡಿಗೋ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಫ್ಲೈಟ್ ಡ್ಯೂಟಿ ಸಮಯ ಮುಗಿದ ಕಾರಣದಿಂದ ವಿಮಾನ ಹಾರಾಟ 5 ಗಂಟೆ ವಿಳಂಬವಾಯಿತು’ ಎಂದಿದೆ.